ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯದಶಮಿ ಮತ್ತು ದಸರಾ ಹಬ್ಬದ ಅಂಗವಾಗಿ ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಅವರು ಇಂದು ಗುರುವಾರ ಸಾರ್ವಜನಿಕರೊಂದಿಗೆ ಬನ್ನಿ ವಿನಿಮಯ ಮಾಡಿಕೊಂಡರು.
ನಗರದ ಬಿ. ಎಂ. ಪಾಟೀಲ(ಸೋಲಾಪುರ) ರಸ್ತೆಯ ಪಾಟೀಲ ಗಾರ್ಡೆನಿಯಾ ಹಿಂದುಗಡೆ ಇರುವ ತಮ್ಮ ಗೃಹ ಕಚೇರಿಯಲ್ಲಿ ಶಾಸಕರು ಸಾರ್ವಜನಿಕರೊಂದಿಗೆ ದಸರಾ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ನಾನಾ ತಾಲೂಕುಗಳು ಹಾಗೂ ನೆರೆಯ ಮಹಾರಾಷ್ಟ್ರದಿಂದಲೂ ಆಗಮಿಸಿದ್ದ ರೈತರು, ಸಾರ್ವಜನಿಕರು, ಗಣ್ಯರು, ಹಿತೈಷಿಗಳು, ಅಭಿಮಾನಿಗಳು, ನಾನಾ ಮುಖಂಡರು, ಹಿರಿಯರು, ಮಹಿಳೆಯರು ಹಾಗೂ ಯುವಕರು ಬೆಳಿಗ್ಗೆಯಿಂದಲೇ ಶಾಸಕರ ಗೃಹ ಕಚೇರಿಗೆ ಆಗಮಿಸಿ ಶುಭಾಶಯ ಕೋರಿದರು.
ತಂಡೋಪ ತಂಡವಾಗಿ ಆಗಮಿಸಿದ ಸಾರ್ವಜನಿಕರಿಗೆ ಶಾಸಕರು ಕೂಡ ಬೆಳಿಗ್ಗೆಯಿಂದ ರಾತ್ರಿಯವರೆಗೂ ಬನ್ನಿ ನೀಡಿ ದಸರಾ ಹಬ್ಬದ ಶುಭ ಕೋರಿದರು.

