ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣಕ್ಕೆ ಆಗಮಿಸಿದ ಮಾಜಿಸಚಿವ ಸಿ.ಟಿ.ರವಿ ಅವರನ್ನು ಬಿಜೆಪಿ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ಸ್ವಾಗತಿಸಿ, ಸನ್ಮಾನಿಸಿದರು.
ಕಲಬುರ್ಗಿಯಿಂದ ಪಟ್ಟಣದ ಮೂಲಕ ಜಮಖಂಡಿಗೆ ತೆರಳುವ ಸಂದರ್ಭದಲ್ಲಿ ಮಾಜಿಸಚಿವ ಸಿ.ಟಿ.ರವಿ ಅವರನ್ನು ಸ್ವಾಗತಿಸಿ ನಂತರ ಶಾಂತೇಶ್ವರ ತೈಲ ವಿತರಣಾ ಕೇಂದ್ರದ ಆವರಣದಲ್ಲಿ ಸನ್ಮಾನಿಸುವುದರ ಮೂಲಕ ಕಾರ್ಯಕರ್ತರು ತಮ್ಮ ಅಭಿಮಾನ ತೋರಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿಸದಸ್ಯ ಶ್ರೀಶೈಲ ಕಬ್ಬಿನ, ಜಂಗಮ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಸೋಮಶೇಖರ ಹಿರೇಮಠ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ದೊಡಮನಿ, ಮಹಾಂತೇಶ ಬಿರಾದಾರ, ವಿಠ್ಠಲ ಯಕಂಚಿ, ಸಿದ್ರಾಮಯ್ಯ ಮಠ, ಕಲ್ಮೇಶ ಬುದ್ನಿ, ಜಕ್ಕು ದೊಡ್ಡಿನಿ, ಹಣಮಂತ್ರಾಯ ಮಣೂರ, ಪ್ರಕಾಶ ಡೋಣೂರಮಠ, ಜಗದೀಶ ಚವ್ಹಾಣ, ಶಿವರಾಜ ತಳವಾರ, ವಿಶಾಲ್ ಭಾಸುತ್ಕರ್, ಮಾಂತೇಶ ಹಾದಿಮನಿ, ಮಾಂತೇಶ ಪಾಟೀಲ, ಅಭಿಷೇಕ ಅಂಬಲಗಿ, ಧರ್ಮಣ್ಣ ನಡುಗೇರಿ ಇದ್ದರು.

