Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಜಯಪುರದಲ್ಲಿ ಹಜ್ ಭವನ ನಿರ್ಮಾಣಕ್ಕೆ ಆಗ್ರಹ

ಶಾಸಕ ಬಸನಗೌಡ ಸಿಎಂ ಆಗಲೆಂದು ಬಾಲಕರಿಂದ ಸೈಕಲ್ ಯಾತ್ರೆ

ಉಪ ವಿಭಾಗಾಧಿಕಾರಿ ಹುದ್ದೆಗೆ ಬಡ್ತಿ ಪಡೆದ ಸಿದ್ಧರಾಯಗೆ ಸನ್ಮಾನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶಾಸಕರಿಂದ ನನಗೆ ಬಹಿರಂಗವಾಗಿ ಜೀವಬೆದರಿಕೆ :ರಜಪೂತ
(ರಾಜ್ಯ ) ಜಿಲ್ಲೆ

ಶಾಸಕರಿಂದ ನನಗೆ ಬಹಿರಂಗವಾಗಿ ಜೀವಬೆದರಿಕೆ :ರಜಪೂತ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಪೊಲೀಸ್ ಮಹಾ ನಿರೀಕ್ಷಕರಿಗೆ ಪತ್ರ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ನಾನು ಸ್ವಂತ ಬಲದಿಂದ ದುಡಿದು ಸಂಪಾದನೆ ಮಾಡಿರುವೆ, ಬಂಗಾರ ಹಾಕಿಕೊಂಡರೆ ತಪ್ಪೇನು? ನನ್ನನ್ನೇ ಉದ್ದೇಶಿಸಿ ಮಟಾಶ್ ಮಾಡುವೆ ಎಂದು ಹೇಳಿ ಶಾಸಕರು ನನಗೆ ಸಾರ‍್ವಜನಿಕವಾಗಿಯೇ ಧಮ್ಕಿ ಹಾಕಿದ್ದಾರೆ, ನಾನು ಅವರ ನಕಲಿ ಹಿಂದೂತ್ವದ ಮುಖ ಬಯಲು ಹಾಗೂ
ಭ್ರಷ್ಟಾಚಾರ ಮುಖ ಬಯಲು ಮಾಡುತ್ತಿರುವ ಭಯದಿಂದಾಗಿಯೇ ಜೀವದ ಧಮ್ಕಿ ಹಾಕಿದ್ದಾರೆ,
ಈ ಹಿನ್ನೆಲೆಯಲ್ಲಿ ಕೂಡಲೇ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಪೊಲೀಸ್ ಮಹಾ ನಿರೀಕ್ಷಕರಿಗೂ ಪತ್ರ ಬರೆಯುವೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಯತ್ನಾಳರು ಅತ್ಯಂತ ಕೀಳು ಪದ ಪ್ರಯೋಗ ಬಳಸಿ ನನಗೆ ಜೀವದ ಧಮ್ಕಿ ಹಾಕಿದ್ದಾರೆ, ಅವರೇ ಹೇಳುವಂತೆ ನನ್ನ ಬಳಿ ಯಾರೂ ಇಲ್ಲ, ಹೀಗಾಗಿ ಪೊಲೀಸರು ನನಗೆ ರಕ್ಷಣೆ ಕೊಡಬೇಕು, ಓಪನ್ ಆಗಿ ಜೀವದ ಧಮ್ಕಿ ಹಾಕಿದ ಯತ್ನಾಳರ ಮೇಲೆ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬೇಕು ಎಂದರು.
ಸತ್ಯ ಹರಿಶ್ಚಂದ್ರ ಎಂದು ಕರೆಯಿಸಿಕೊಳ್ಳುವ ಯತ್ನಾಳರು ಗೋಶಾಲೆ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ, ಲೀಜ್ ಪ್ರಾಪರ್ಟಿ ವಿಷಯವಾಗಿ ಗೋಶಾಲೆ ಹೆಸರಿನಲ್ಲಿ ಯತ್ನಾಳರು ಹಣ ಎತ್ತಿದರು, ಆಗ ನಾನು ವಿರೋಧಿಸಿದೆ, ನಾನು ಗೋಶಾಲೆ ಹೆಸರಿನಲ್ಲಿ ಹಣ ಪಡೆಯುತ್ತಿರುವೆ ಯಾರೂ ಏನೂ ಮಾಡಲ್ಲ ಎಂದು ದರ‍್ಪದಿಂದ ಹೇಳಿದ್ದರು, ಈ ರೀತಿ ಹಣ ಎತ್ತಿಯೇ ಗೋಶಾಲೆಯನ್ನು ತೆರೆದಿದ್ದಾರೆ, ಗೋಮಾತೆ ಹೆಸರಿನಲ್ಲಿಯೂ ಹಣ ಲೂಟಿ ಮಾಡುವ ಯತ್ನಾಳರದ್ದು ನಕಲಿ ಹಿಂದೂತ್ವ ಎಂದರು.
ಒಂದೆರೆಡು ರಸ್ತೆ ಬಿಟ್ಟರೆ ಯಾವ ರಸ್ತೆಯೂ ಇಲ್ಲ, ಆಜಾದ್ ರಸ್ತೆಯನ್ನೊಮ್ಮೆ ಹೋಗಿ ಶಾಸಕರು ನೋಡಲಿ, ಅಂಡರ್ ಗ್ರೌಂಡ್ ಕೇಬಲ್ ಮರೀಚಿಕೆಯಾಗಿದೆ, ಎಲ್ಲಿ ಬೇಕು ಅಲ್ಲಿ ವಾಯರ್‌ಗಳು ಜೋತಾಡುತ್ತಿವೆ, ನೀರಿನ ಸಮಸ್ಯೆ ವ್ಯಾಪಕವಾಗಿದೆ, ಈ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸುವುದನ್ನು ಬಿಟ್ಟು ಕೇವಲ ಬೈಯುವುದನ್ನೇ ಯತ್ನಾಳ ಚಾಳಿ ಮಾಡಿಕೊಂಡಿದ್ದಾರೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

ಎಸ್‌ಐಟಿ ತನಿಖೆ ನಡೆಯಲಿ

ಎಲ್‌ಬಿಎಸ್ ಮಾರುಕಟ್ಟೆ ಪ್ರಾಂಗಣ ಹಾಗೂ ಜಲನಗರದಲ್ಲಿರುವ ವಾಣಿಜ್ಯ ಸಂಕೀರ‍್ಣದಲ್ಲಿ ಲೀಜ್ ನವೀಕರಣಕ್ಕಾಗಿ ಕೋಟ್ಯಂತರ ರೂ. ಅಕ್ರಮ ನಡೆದಿದೆ. ಇದರಲ್ಲಿ ನಗರ ಶಾಸಕರೇ ಶಾಮೀಲಾಗಿದ್ದಾರೆ, ಈ ಬಗ್ಗೆ ಎಸ್‌ಐಟಿ ತನಿಖೆ ನಡೆಸಿದರೆ ಎಲ್ಲ ಸತ್ಯಾಂಶವೂ ಹೊರಗೆ ಬರುತ್ತದೆ, ಎಲ್‌ಬಿಎಸ್ ಮಾರುಕಟ್ಟೆ ಪ್ರಾಂಗಣದಲ್ಲಿ ಅವ್ಯವಹಾರ, ನಕಲಿ ಹಿಂದೂತ್ವದ ಮುಖ ಬಯಲು ಮಾಡುವ ಕಾರಣಕ್ಕಾಗಿಯೇ ನನಗೆ ಮಟಾಶ್ ಮಾಡುವುದಾಗಿ ಶಾಸಕರು ಹೇಳಿದ್ದಾರೆ ಎಂದರು.

ಗಾಣಿಗ ಸಮಾಜದ ಬಗ್ಗೆ ಶಾಸಕರಿಂದ ಅಗೌರವ :ಗಡಗಿ ಆರೋಪ

ಗಾಣಿಗ ಸಮುದಾಯದ ಬಗ್ಗೆ ನಗರ ಶಾಸಕ ಯತ್ನಾಳರು ಅಗೌರವ ತೋರುವ ಮಾತನಾಡಿದ್ದಾರೆ ಎಂದು ಯುವ ಮುಖಂಡ ನಂದು ಗಡಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಣಿಗ ಸಮಾಜದ ಬಗ್ಗೆ ಈ ರೀತಿ ಮಾತನಾಡಿರುವುದು ಅಕ್ಷಮ್ಯ ಅಪರಾಧ, ಒಬ್ಬ ಹೋದರೆ ಏನಾಗುತ್ತದೆ ಎಂದು ಕೇವಲವಾಗಿ ಮಾತನಾಡಿದ್ದಾರೆ, ನಮ್ಮ ಸಮಾಜದ ಬಗ್ಗೆ ಅಷ್ಟೊಂದು ಕೀಳುಮಟ್ಟದ ಪದ ಪ್ರಯೋಗ ಮಾಡಿರುವುದು ಎಷ್ಟು ಸರಿ? ಈ ಯತ್ನಾಳರ ಬಗ್ಗೆ ನ್ಯಾಯವಾದಿ ಖಾದ್ರಿ ಶಾಸಕ ಯತ್ನಾಳರ ಅವರ ವಿರುದ್ಧ ಮಾತನಾಡಿದಾಗ ಅವರ ಹಿಂಬಾಲಕರು ಮೌನವಾದರು, ಆದರೆ ನಾನೇ ಅಂದು ವಿರೋಧಿಸಿದೆ, ಆದರೆ ಇಂದು ನನಗೆ ಈ ರೀತಿ ನಡೆಸಿಕೊಳ್ಳುತ್ತಿದ್ದಾರೆ, ಯತ್ನಾಳರ ಹಿಂದೆ ಕಮೀಷನ್ ಏಜೆಂಟರೇ ತುಂಬಿಕೊಂಡಿದ್ದಾರೆ, ಹಿಂದೂ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ ಎಂದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಜಯಪುರದಲ್ಲಿ ಹಜ್ ಭವನ ನಿರ್ಮಾಣಕ್ಕೆ ಆಗ್ರಹ

ಶಾಸಕ ಬಸನಗೌಡ ಸಿಎಂ ಆಗಲೆಂದು ಬಾಲಕರಿಂದ ಸೈಕಲ್ ಯಾತ್ರೆ

ಉಪ ವಿಭಾಗಾಧಿಕಾರಿ ಹುದ್ದೆಗೆ ಬಡ್ತಿ ಪಡೆದ ಸಿದ್ಧರಾಯಗೆ ಸನ್ಮಾನ

ವಿಜಯಪುರ ಜಿಲ್ಲೆ ಅಭಿವೃದ್ಧಿಗೆ ೩೭೧(ಜೆ) ಸೌಲಭ್ಯ ಕಲ್ಪಿಸಲು ಆಗ್ರಹ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಜಯಪುರದಲ್ಲಿ ಹಜ್ ಭವನ ನಿರ್ಮಾಣಕ್ಕೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಶಾಸಕ ಬಸನಗೌಡ ಸಿಎಂ ಆಗಲೆಂದು ಬಾಲಕರಿಂದ ಸೈಕಲ್ ಯಾತ್ರೆ
    In (ರಾಜ್ಯ ) ಜಿಲ್ಲೆ
  • ಉಪ ವಿಭಾಗಾಧಿಕಾರಿ ಹುದ್ದೆಗೆ ಬಡ್ತಿ ಪಡೆದ ಸಿದ್ಧರಾಯಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆ ಅಭಿವೃದ್ಧಿಗೆ ೩೭೧(ಜೆ) ಸೌಲಭ್ಯ ಕಲ್ಪಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಅಗತ್ಯ ಬಿದ್ದರೆ ಕಬ್ಬು ಬೆಳೆಗಾರರ ಪರ ಹೋರಾಟಕ್ಕೂ ಸಿದ್ಧ
    In (ರಾಜ್ಯ ) ಜಿಲ್ಲೆ
  • ಶಾಸಕರಿಂದ ನನಗೆ ಬಹಿರಂಗವಾಗಿ ಜೀವಬೆದರಿಕೆ :ರಜಪೂತ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರೀಯ ಹೆದ್ದಾರಿ ತಡೆ – ಪಟ್ಟು ಬಿಡದ ರೈತ ಸಮೂಹ
    In (ರಾಜ್ಯ ) ಜಿಲ್ಲೆ
  • ಅಲ್ಪಸಂಖ್ಯಾತರ ಸರಳ ವಿವಾಹ ಸಹಾಯಧನಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಅಂಗನವಾಡಿ ಕಂ-ಕ್ರಷ್ ಕೇಂದ್ರಗಳ ಕಾರ್ಯಕರ್ತೆ-ಸಹಾಯಕಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಕಿತ್ತೂರು ಚೆನ್ನಮ್ಮ ವಿಜಯ ಜ್ಯೋತಿ ಯಾತ್ರೆಗೆ ಸ್ವಾಗತ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.