ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಾಡಿನ ಅಭಿವೃದ್ಧಿ ಹಾಗೂ ಹಿಂದುತ್ವ, ಹಿಂದೂಗಳ ಹಿತದೃಷ್ಟಿಯಿಂದ ಹಿಂದೂ ಫೈಯರ್ ಬ್ರ್ಯಾಂಡ್ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು, 2028ಕ್ಕೆ ಕರ್ನಾಟಕದ ಮುಖ್ಯಮಂತ್ರಿಯಾಗಲಿ ಎಂಬ ಆಶಯದೊಂದಿಗೆ, ಹುಮನಾಬಾದ್ ದಿಂದ ಸೈಕಲ್ ಯಾತ್ರೆ ಮೂಲಕ ವಿಜಯಪುರ ನಗರಕ್ಕೆ ಆಗಮಿಸಿದ ಪುಟ್ಟ ಹಿಂದೂ ಬಾಲಕರನ್ನು ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ರಾಮನಗೌಡ ಪಾಟೀಲ ಯತ್ನಾಳ ರವರು ಆರಾಧ್ಯ ದೈವ ಶ್ರೀ ಸಿದ್ದೇಶ್ವರ ದೇವಸ್ಥಾನದ ಎದುರು ಗುರುವಾರ ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಿ ದೇಣಿಗೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಕಿರಣ ಪಾಟೀಲ, ಮುಖಂಡರಾದ ಪ್ರವೀಣ ವಂದಾಲಮಠ, ಮನೋಜ ಸುರಪುರ, ಆಕಾಶ ಬಿರಾದಾರ, ಸಂದೀಪ ಪಂಗಡವಾಲೆ, ಶ್ರೀಧರ ಮಹೇಂದ್ರಕರ, ವಿಶಾಲ ಧಾರವಾಡಕರ, ಸಾಗರ ಇಂಚಗೇರಿ ಉಪಸ್ಥಿತರಿದ್ದರು.

