ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೫-೨೬ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕ ಸಂಖ್ಯೆ: ೨೨೨ ರಲ್ಲಿ ಘೋಷಿಸಿರುವಂತೆ ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರ ಸಮುದಾಯದವರ ಸರಳ ವಿವಾಹಗಳ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ೫೦ ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ಸಾಮೂಹಿಕ ವಿವಾಹಗಳ ಪ್ರೋತ್ಸಾಹ ನೀಡಲು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವಿವಾಹಗಳ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ ರೂ. ೫೦ ಸಾವಿರ ನೀಡುವ ಹಾಗೂ ಆಯೋಜಕರಿಗೆ ಪ್ರತಿ ಜೋಡಿಗೆ ಹೆಚ್ಚುವರಿಯಾಗಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಆಯೋಜಕರುಗಳಿಗೆ ಪ್ರೋತ್ಸಾಹವಾಗಿ ಪ್ರತಿ ಜೋಡಿಗೆ ೫೦೦೦ ರೂ.ಗಳನ್ನು ನೀಡಲಾಗುವುದು.
ಅರ್ಜಿ ಹಾಗೂ ಇತರ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ತಾಲೂಕು ಮಾಹಿತಿ ಕೇಂದ್ರಗಳಾದ ವಿಜಯಪುರ ಮೊ:೮೧೨೩೭೧೦೭೬೬,
ಮುದ್ದೇಬಿಹಾಳ ಮೊ:೮೭೨೨೪೪೫೫೫೨,
ಬಸವನ ಬಾಗೇವಾಡಿ ಮೊ: ೯೯೭೨೩೪೦೭೩೨೧,ಇಂಡಿ ಮೊ: ೯೯೦೦೧೦೯೭೫೯ ಹಾಗೂ ಸಿಂದಗಿ ಮೊ: ೯೦೩೫೫೫೮೬೦೯ ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
