ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಬ್ಬಿಗೆ ಪ್ರತಿ ಟನ್ಗೆ ರೂ.೫,೫೦೦ ಬೆಲೆ ನಿಗದಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘಟನೆಗಳು, ಕಬ್ಬು ಬೆಳೆಗಾರರ ಒಕ್ಕೂಟ ಮತ್ತು ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಸಾವಿರಾರು ರೈತರು ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ಅಂಬೇಡ್ಕರ್ ವೃತ್ತದ ಬಳಿ ಸಿಂದಗಿ–ಶಹಾಪುರ ರಾಜ್ಯ ಹೆದ್ದಾರಿ ತಡೆದು ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕಮ್ಯುನಿಸ್ಟ್ ಮುಖಂಡ ಎಚ್.ಬಿ. ಚಿಂಚೊಳ್ಳಿ, ರೈತ ಮುಖಂಡ ಸುಭಾಸಗೌಡ ಬಿರಾದಾರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಶಿವು ಹತ್ತಿ, ಬಸವರಾಜ ಮಾರಲಭಾವಿ, ನಿಂಗನಗೌಡ ಪಾಟೀಲ, ಶರಣಗೌಡ ಪಾಟೀಲ, ಶ್ರೀಶೈಲ ಜಾಲವಾದಿ, ಅಂಬರೀಶ ಮಾರಲಭಾವಿ, ದೇವಿಂದ್ರ ಹದಲ್, ಎ.ಡಿ. ಕೋರವಾರ, ಶರಣಪ್ಪ ಕರ್ಣಾಳ, ಮಡು ನಾಯ್ಕೋಡಿ, ಆನಂದ ರಾಠೋಡ, ಕುಮಾರ ಗೊಂದಳಿ, ಬಾಬು ಜಾಲವಾದಿ, ನಾಗಣ್ಣ ಪಡೇಕನೂರ, ಶರಣು ಮನಗೂಳಿ, ಸೈಪುನ ಹಳಿಮನಿ ಹಾಗೂ ನಾಗೇಶ ರಾಠೋಡ ಸೇರಿದಂತೆ ಬ್ರಹ್ಮದೇವನಮಡು, ಡಂಬಳ, ಸಾಸಾಬಾಳ, ಢವಳಾರ, ಚಿಕ್ಕ ಅಲ್ಲಾಪೂರ, ಕರವಿನಾಳ ಮತ್ತು ಖಾನಾಪುರ ಗ್ರಾಮಗಳ ಕಬ್ಬು ಬೆಳೆಗಾರರು ಹಾಗೂ ರೈತರು ಪಾಲ್ಗೊಂಡಿದ್ದರು.

