ಕುಮಸಗಿ ಹಿರೇಮಠದಲ್ಲಿ ಜಾತ್ರಾ ಮಹೋತ್ಸವ | ಶ್ರೀ ಸದ್ಗುರು ವೆಂಕಟೇಶ್ವರ ಮಹಾಸ್ವಾಮಿಗಳ ೪೧ನೆಯ ಪುಣ್ಯಸ್ಮರಣೋತ್ಸವ | ನೂತನ ಕಿರು ರಥೋತ್ಸವ ಜಾತ್ರೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಸಂಸ್ಕಾರಗಳನ್ನು ಉಳಿಸಿ ಬೆಳೆಸುವಲ್ಲಿ ಮಠಮಾನ್ಯಗಳ ಪಾತ್ರ ಮಹತ್ವದ್ದಾಗಿದೆ. ಪುರಾಣ, ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಆಧ್ಯಾತ್ಮಿಕ ಅಭಿರುಚಿ ಮೂಡಿಸುವುದರ ಜೊತೆಗೆ ನೈತಿಕ ಮೌಲ್ಯಗಳು, ಮಾನವೀಯತೆ ಮತ್ತು ಸದಾಚಾರದ ಸಂದೇಶವನ್ನು ಸಮಾಜಕ್ಕೆ ಸಾರುವ ಕಾರ್ಯವನ್ನು ಮಠಗಳು ನಿರಂತರವಾಗಿ ಮಾಡುತ್ತಿವೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.
ಸಿಂದಗಿ ಮತಕ್ಷೇತ್ರದ ಕುಮಸಗಿಯ ಸದ್ಗುರು ವೆಂಕಟೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶ್ರೀ ಸದ್ಗುರು ವೆಂಕಟೇಶ್ವರ ಮಹಾಸ್ವಾಮಿಗಳ ೪೧ನೆಯ ಪುಣ್ಯಸ್ಮರಣೋತ್ಸವ, ನೂತನ ಕಿರು ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಸಂಸ್ಕಾರಗಳನ್ನು ಉಳಿಸಿ ಬೆಳೆಸುವಲ್ಲಿ ಮಠಮಾನ್ಯಗಳ ಪಾತ್ರ ಮಹತ್ವದ್ದಾಗಿದೆ. ಪುರಾಣ, ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಆಧ್ಯಾತ್ಮಿಕ ಅಭಿರುಚಿ ಮೂಡಿಸುವುದರ ಜೊತೆಗೆ ನೈತಿಕ ಮೌಲ್ಯಗಳು, ಮಾನವೀಯತೆ ಮತ್ತು ಸದಾಚಾರದ ಸಂದೇಶವನ್ನು ಸಮಾಜಕ್ಕೆ ಸಾರುವ ಕಾರ್ಯವನ್ನು ಮಠಗಳು ನಿರಂತರವಾಗಿ ಮಾಡುತ್ತಿವೆ.
ಈ ವೇಳೆ ಶ್ರೀಮಠದ ಪೀಠಾಧಿಪತಿ ಅಭಿನವ ವೆಂಕಟೇಶ್ವರ ಮಹಾಸ್ವಾಮಿಗಳು ಮಾತನಾಡಿ, ಗ್ರಾಮದ ಧಾರ್ಮಿಕ ವಾತಾವರಣದಲ್ಲಿ ಶ್ರೀದೇವಿ ಪುರಾಣ ಹಾಗೂ ಶ್ರೀ ಸದ್ಗುರು ವೆಂಕಟೇಶ್ವರ ಚರಿತಾಮೃತ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆಯಲಿದ್ದು, ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿರಲಿದ್ದಾರೆ. ಪ್ರತಿನಿತ್ಯ ಸದ್ಭಕ್ತರು ಪುರಾಣದಲ್ಲಿ ಭಾಗವಹಿಸಿ ಶರಣರ, ಸಂತರ ಮಹಾಂತರ ಜೀವನ ಚರಿತ್ರೆಗಳನ್ನು ಅರಿತುಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಈರಯ್ಯ ಮಠಪತಿ, ಪತ್ರಕರ್ತ ಗುರುಲಿಂಗಯ್ಯ ಹಿರೇಮಠ, ಶ್ರೀಮಂತ ನಾಗೂರ, ಸುರೇಶ, ಗಂಗನಳ್ಳಿ, ಕಡಣಿ ರಮೇಶ ಎಚ್. ಗಂಗನಳ್ಳಿ, ಕಲ್ಲು ಕಣಮೇಶ್ವರ, ರವೀಂದ್ರ ಕಲಶೆಟ್ಟಿ, ಉಪಾಧ್ಯಕ್ಷ ಬಸವರಾಜ ಪೂಜಾರಿ, ಪ್ರಕಾಶ ಗಂಗನಳ್ಳಿ, ವೆಂಕಟೇಶ ಬೇಳಗಿ ಸೇರಿದಂತೆ ಕುಮಸಗಿ, ದೇವಣಗಾಂವ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗಣ್ಯರು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಹಾಗೂ ಸದ್ಭಕ್ತರು ಹಾಗೂ ಗ್ರಾಮಸ್ಥರು ಇದ್ದರು.

