ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅವರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲೂಕಿನ ಜಂಬಗಿ, ಆಹೇರಿ, ಮಾದಾಳ, ಹುಣಶ್ಯಾಳ, ಅಂಕಲಗಿ ಕೆರೆಗಳನ್ನು ಒಂದು ವಾರದಲ್ಲಿ ತುಂಬಿಸಬೇಕು, ಈಗಾಗಲೇ ಸುಮಾರು ೮-೧೦ ಬಾರಿ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಕೆರೆಗೆ ನೀರು ತುಂಬಿಸುತ್ತಿಲ್ಲ, ಈ ಕೆರೆಗಳು ಸಂಪೂರ್ಣ ಬರಿದಾಗಿವೆ ಇವುಗಳನ್ನು ತುಂಬಿಸಿದರೆ ಈ ಭಾಗದ ೮-೧೦ ಹಳ್ಳಿಗಳ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಕೊಟ್ಟಂತಾಗುತ್ತದೆ. ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅಪರ್ ಜಿಲ್ಲಾಧಿಕಾರಿಗಳಾದ ಡಾ. ಔದ್ರಾಮ ಅವರಿಗೆ ಮನವಿ ಸಲ್ಲಿಸಿದರು
ಈ ವೇಳೆ ಮನವಿ ಸಲ್ಲಿಸಿ ಮಾತನಾಡಿದ ತಾಲೂಕಾ ಅಧ್ಯಕ್ಷರಾದ ಅನಮೇಶ ಜಮಖಂಡಿ, ಯುವ ಘಟಕದ ಅಧ್ಯಕ್ಷರಾದ ರಾಜೇಸಾ ನದಾಫ, ಅವರು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದು ಆಗಿದೆ, ಕಳೆದ ೩ ವರ್ಷಗಳ ಹಿಂದೆ ಕೆರೆಯಲ್ಲಿಯೆ ಕುಳಿತು ಹೋರಾಟ ಕೂಡಾ ಮಾಡಲಾಗಿದೆ, ಆದರು ಅಧಿಕಾರಿಗಳು ದಯೆ ತೋರುತ್ತಿಲ್ಲ, ೩-೪ ದಿನಗಳಲ್ಲಿ ಈ ಕೆರೆಗಳನ್ನು ತುಂಬಿಸದಿದ್ದರೆ ವಿಜಯಪುರ- ಕಲ್ಬುರ್ಗಿ ಹೆದ್ದಾರಿ ಬಂದ ಮಾಡಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಅವರು ಮಾತನಾಡುತ್ತಾ, ಆಲಿಮಟ್ಟಿ ನಮ್ಮ ಜಿಲ್ಲೆಯ ರೈತರ ಫಲವತ್ತಾದ ಭೂಮಿಯನ್ನು ಕೊಟ್ಟು ಜಿಲ್ಲೆಗೆ ನೀರಾವರಿ ಆಗಲೇಂದು ನಮ್ಮ ಹಿರಿಯರು ಕೊಟ್ಟ ಉಡುಗೊರೆಯಾಗಿದೆ, ಆದರೆ ನಮ್ಮ ಜಿಲ್ಲೆಯಲ್ಲಿ ಕೆರೆಗಳು ಬತ್ತಿಹೋಗಿ ಕುಡಿಯಲು ನೀರು ಸಿಗದೇ ಪರದಾಡುವಂತಾಗಿದೆ ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಾಗದ ರೈತರಿಗೆ ಮೋಸ ಮಾಡಿ ನೆರೆಯ ಆಂದ್ರ ತೆಲಂಗಾಣಕ್ಕೆ ನೀರು ಬಿಡುವುದು ಯಾವ ನ್ಯಾಯ ಕೂಡಲೇ ನೀರನ್ನು ಮುಂದಿನ ಮಳೆಗಾಲದವರೆಗೂ ಹಿಡಿದಿಟ್ಟು ಅತೀ ಅವಶ್ಯಕತೆಗೆ ಅನುಗುಣವಾಗಿ ಎಲ್ಲಾ ಕೆರೆಗಳನ್ನು ತುಂಬಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ಯುವ ಘಟಕದ ತಾಲೂಕಾ ಅಧ್ಯಕ್ಷರಾದ ಆತ್ಮಾನಂದ ಭೈರೋಡಗಿ, ಮುಖಂಡರಾದ ಬಸವರಾಜ ಮಸೂತಿ, ಕಲ್ಲಪ್ಪ ಇಂಡಿ, ಹಾಜಿಸಾಬ ಮುತ್ಯಾರು, ಬಸವರಾಜ ತೇಲಿ, ಇರಸಂಗಪ್ಪ ಬಿರಾದಾರ, ಚಂದ್ರಾಮ ಬಿಸನಾಳ, ಪರಶುರಾಮ ನಾಯ್ಕೋಡಿ, ಮಲ್ಲು ಮಾಲಗಾರ, ಬಸವರಾಜ ಬೈರೋಡಗಿ, ಪರಶುರಾಮ ನಾಯ್ಕೋಡಿ, ಹುರಪ್ಪ ತಳವಾರ, ಮುತ್ತಪ್ಪ ನಾಗರಳ್ಳಿ, ಪ್ರಕಾಶ ಇಂಡಿ, ಭಿರಪ್ಪ ನಾಗರಾಳ, ರಾಮಚಂದ್ರ ವಡ್ಡರ, ಅಶೋಕ ಚಟ್ಟರಕಿ, ಕಲ್ಲಪ್ಪ ಅವಜಿ, ಪ್ರಕಾಶ ಮಾಳಿ, ಬಸು ಇಂಡಿ, ನಜೀರ ನದಾಫ, ನಂದಪ್ಪ ನಾಗರಳ್ಳಿ, ಜಕ್ಕಪ್ಪಗೌಡ ಪಾಟೀಲ, ಸೇರಿದಂತೆ ಇತರರು ಇದ್ದರು.

