ಸಿಂದಗಿ: ಪಟ್ಟಣದ ಹೊರವಲಯದ ಲೊಯೋಲ ಶಾಲೆಯಲ್ಲಿ ೬೮ ನೆಯ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿ ಡಾ. ಸಮೀರ ಹಾದಿಮನಿ ಮಾತನಾಡಿ, ಕನ್ನಡ ಭಾಷೆಗೆ ಸುಮಾರು 2000 ವರ್ಷಗಳ ಸುಧೀರ್ಘ ಇತಿಹಾಸವಿದೆ. ಆಲೂರು ವೆಂಕಟರಾಯರಂತಹ ಅನೇಕ ಮಹನೀಯರ ಹೋರಾಟದ ಫಲವಾಗಿ ವಿವಿಧ ಪ್ರಾಂತಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡಿಗರೆಲ್ಲ ಒಂದಾದರು.1956 ನವೆಂಬರ್ 1 ರಂದು ಏಕೀಕರಣಗೊಂಡ ಕನ್ನಡ ನಾಡಿಗೆ ಮೈಸೂರು ರಾಜ್ಯ ಎಂದು ನಾಮಕರಣ ಮಾಡಲಾಯಿತು. 1973 ನವೆಂಬರ್ 1 ರಂದು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ತುಂಬಿದ ಸುವರ್ಣ ಸಂದರ್ಭದಲ್ಲಿ ನಾವಿದ್ದೇವೆ. ಕನ್ನಡ ಸುವರ್ಣ ಸಂಭ್ರಮದಲ್ಲಿರುವ ನಾವು ಕನ್ನಡ ನಾಡು ನುಡಿಯ ಬೆಳವಣಿಗೆಗಾಗಿ ಕಂಕಣಭದ್ಧರಾಗಿ ನಿಲ್ಲೋಣ. ಕನ್ನಡವನ್ನು ಹೃದಯದ ಭಾಷೆಯಾಗಿ ಬೆಳೆಸೋಣ ಎಂದು ಹೇಳಿದರು.
ಇನ್ನೋರ್ವ ಅತಿಥಿ ದಾನಪ್ಪಗೌಡ
ಚನಗೊಂಡ ನ್ಯಾಯವಾದಿಗಳು ಮಾತನಾಡಿ, ಕನ್ನಡ ನಾಡು ವೀರರ, ಶೂರರ, ಧೀರರ ನಾಡು. ಶ್ರೀಗಂಧದ ಬೀಡು. ಉದಾತ್ತ ಸಂಸ್ಕೃತಿಯನ್ನು ಹೊಂದಿದ ನಾಡು. ಇಂತಹ ನಾಡಿನ ಹಿರಿಮೆ ಗರಿಮೆಯನ್ನು ಉಳಿಸಿ ಬೆಳೆಸುವಂತಹ ಘನವಂತ ವ್ಯಕ್ತಿಗಳು ನಾವಾಗೋಣ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ಅಲಂಕರಿಸಿದ ಫಾದರ್ ಜೀವನ ಡಿಸೋಜ ಎಸ್ ಜೆ ಮಾತನಾಡಿದರು. ಬಸವಣ್ಣ, ಸರ್ವಜ್ಞ, ಸಂಗೊಳ್ಳಿ ರಾಯಣ್ಣ,ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ಮುಂತಾದ ಕನ್ನಡ ನಾಡಿನ ಮಹಾಪುರುಷರ ವೇಷ ಧರಿಸಿದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಗಮನ ಸೆಳೆದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನರಂಜನೆ ನೀಡಿದರು.
ವೇದಿಕೆಯ ಮೇಲೆ ಶಾಲಾ ಪ್ರಾಚಾರ್ಯರಾದ ಫಾದರ್ ಲ್ಯಾನ್ಸಿ ಫರ್ನಾಂಡಿಸ್, ಉಪ ಪ್ರಾಂಶುಪಾಲೆಯರಾದ ಸಿಸ್ಟರ್, ಸೋಫಿಯಾ, ಕನ್ನಡ ಸಂಘದ ಕಾರ್ಯದರ್ಶಿ ಸಿದ್ದಪ್ಪ ಎಂ ಹಾಗೂ ಶ್ರೀಮತಿ ಫಾತಿಮಾ ಶಿಕ್ಷಕಿಯರು ಉಪಸ್ಥಿತರಿದ್ದರು.
ಶಿಕ್ಷಕರಾದ ಸಿದ್ದಪ್ಪ, ಶ್ರೀಮತಿ ಮಂಜುಳಾ ನಿರೂಪಿಸಿ, ಸ್ವಾಗತಿಸಿದರು. ಶ್ರೀಮತಿ ಫಾತಿಮಾ ವಂದಿಸಿದರು
Subscribe to Updates
Get the latest creative news from FooBar about art, design and business.
Related Posts
Add A Comment

