ಕಾಟಾಚಾರದ ರಾಜ್ಯೋತ್ಸವ ಆಚರಣೆಗೆ ಕನ್ನಡ ಪರ ಹೋರಾಟಗಾರರು ಗರಂ | ಮತ್ತೆ ಆಚರಿಸುವ ಭರವಸೆ
ನಿಡಗುಂದಿ: ತಾಲೂಕಿನಲ್ಲಿ ಕನ್ನಡ ಪರ ಹೋರಾಟಗಾರರು ಬುಧವಾರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ದ್ಯಾಮವ್ವನ ಗುಡಿಯಿಂದ ರಸ್ತೆ ಉದ್ದಕ್ಕೂ ಕಾಲ್ನಡಿಗೆಯ ಮೂಲಕ ಎಲ್ಲಾ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಮಸ್ತ ಶಾಲಾ ಶಿಕ್ಷಕ/ಕಿಯರು, ಕನ್ನಡ ಅಭಿಮಾನಿಗಳು ಮೆರವಣಿಗೆ ಮೂಲಕ ಕನ್ನಡ ಶಾಲೆಯ ಆವರಣದಲ್ಲಿ ಹಾಜರಾಗಿದರು.
ತಾಲೂಕು ದಂಡಾಧಿಕಾರಿಗಳು ಹಾಗೂ ಪಟ್ಟಣ ಪಂಚಾಯತಿ ಅಧಿಕಾರಿಗಳು ಧ್ವಜಾರೋಹಣ ಮಾಡಿದರು.
ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದಂತೆ ಎಲ್ಲೆಡೆ ಧಿಕ್ಕಾರದ ಕೂಗು ಕೇಳಲಾರಂಭಿಸಿತು. ಕನ್ನಡ ಪರ ಹೋರಾಟಗಾರರು ಪಟ್ಟಣ ಪಂಚಾಯತಿ, ತಾಲೂಕಿನ ದಂಡಾಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು,
ಕನ್ನಡದ ಹೋರಾಟಗಾರರ ಧಿಕ್ಕಾರದ ಕೂಗಿಗೆ ಕಾರಣ, ಅಧಿಕಾರಿಗಳು ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗಿತ್ತು. ಆಚರಣೆ ಬೇಡ, ನಮಗೆ ಅನ್ಯಾಯ ಆಗಿದೆ ಎಂದು ಕನ್ನಡ ಪರ ಹೋರಾಟಗಾರರು ಧಿಕ್ಕಾರ ಕೂಗಿದರು.
ಧ್ವಜವನ್ನು ರಸ್ತೆ ಉದ್ದಕ್ಕೂ ಕಟ್ಟಿರುವುದಿಲ್ಲ, ವೇದಿಕೆಯನ್ನು ಸರಿಯಾಗಿ ಸಿದ್ದಪಡಿಸಿಲ್ಲ, ಕನ್ನಡಪರ ಹೋರಾಟಗಾರರನ್ನು ಹಾಗೂ ಕನ್ನಡ ಅಭಿಮಾನಿಗಳ ರಾಜ್ಯೋತ್ಸವವನ್ನು ಬೇಕು-ಬೇಡ ರೀತಿಯಲ್ಲಿ, ಆಚರಿಸಿದ್ದು ಕನ್ನಡಪರ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ.
ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬೆಳಗ್ಗೆ 8 ಗಂಟೆಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಕಾರ್ಯಕ್ರಮದ ವಿಫಲದಿಂದಾಗಿ ಮಕ್ಕಳ ಮನಸ್ಸಿಗೆ ಕನ್ನಡ ಅಭಿಮಾನಿಗಳಿಗೆ ಕನ್ನಡ ರಾಜ್ಯೋತ್ಸವ ಇಂದು ನೋವುಂಟು ಮಾಡಿತು.
ಇದನ್ನೆಲ್ಲ ಅರಿತುಕೊಂಡ ದಂಡಾಧಿಕಾರಿಗಳು ಕನ್ನಡ ಪರ ಹೋರಾಟಗಾರರ ಮಾತುಗಳನ್ನು ಆಲಿಸಿ, 15 ದಿನಗಳ ಒಳಗಾಗಿ ಅತಿ ಖುಷಿಯಿಂದ ಸಂಭ್ರಮ ಸಡಗರದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸೋಣ, ಯಾವುದೇ ತಪ್ಪು ತಡೆಗಳಿಗೆ ಕ್ಷಮಿಸಿ, ಕನ್ನಡ ಪರ ಹೋರಾಟಗಾರರ ಬೇಡಿಕೆಯಂತೆ 15 ದಿನಗಳ ಒಳಗಾಗಿ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸೋಣ ಎಂದು ಹೇಳಿ ಕನ್ನಡ ಹೋರಾಟಗಾರರ ಮನವೊಲಿಸಿದರು.

