ವಿಜಯಪುರ: ಭಾವೈಕ್ಯತೆಯ ಪ್ರತೀಕವಾಗಿರುವ ಬಾಬಾನಗರ ಪಾಣಿಸಾಹೇಬ ಜಾತ್ರೆ ಎಲ್ಲರಿಗೂ ಮಾದರಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಬುಧವಾರ ತಿಕೋಟಾ ತಾಲೂಕಿನ ಬಾಬಾನಗರದ ಹಜರತ ಬಾಬಾ ಪಾಣಿಸಾಹೇಬ ದರ್ಗಾ ಜಾತ್ರೆಯಲ್ಲಿ ಪಾಲ್ಗೋಂಡು ದೇವರ ಆಶೀರ್ವಾದ ಪಡೆದ ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪಾಣಿಸಾಹೇಬರ ಜಾತ್ರೆಗೆ ಭಕ್ತನಾಗಿ ಬಂದಿದ್ದೇನೆ. ಸರ್ವಜನಾಂಗದ ಗ್ರಾಮದೇವತೆ ಇದಾಗಿದೆ. ಎಲ್ಲ ಧರ್ಮ, ಜಾತಿಯವರು ಭಕ್ತಿ, ಶ್ರದ್ಧೆಯಿಂದ ನಡೆದುಕೊಳ್ಳುತ್ತಾರೆ. ಇದು ವಿಶ್ವಕ್ಕೆ ಮಾದರಿಯಾಗಿದೆ. ಇಲ್ಲಿ ಹಿಂದೂಗಳೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನಡೆದುಕೊಳ್ಳುವುದು ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಪಾಣಿಸಾಹೇಬ ದೇವರು ನಮಗೆ ಜನಸೇವೆಗೆ ನಮಗೆ ಅವಕಾಶ ನೀಡಿದ್ದು, ಮುಂಬರುವ ದಿನಗಳಲ್ಲಿ ಎಲ್ಲ ಕಡೆ ಸುಖ, ಶಾಂತಿ, ಸಮೃದ್ಧಿ ನೀಡಲಿ. ಮತದಾರರು ಸುಖದಿಂದ ಇದ್ದರೆ ನಾವು ನೆಮದಿಯಿಂದ ಇದ್ದಂತೆ ಎಂದು ಹೇಳಿದರು.
ಗ್ರಾಮದ ಮುಖಂಡ ಯಲ್ಲಾಲಿಂಗ ಹೊನವಾಡ ಮಾತನಾಡಿ, ಸಚಿವ ಎಂ. ಬಿ. ಪಾಟೀಲ ಅವರು ಕೇವಲ ನೀರಾವರಿಯನ್ನಷ್ಟೇ ಮಾಡಿಲ್ಲ. ಜನರ ಧಾರ್ಮಿಕ ಭಾವನೆಗಳಿಗೂ ಬೆಲೆ ನೀಡಿ ಎಲ್ಲ ಧರ್ಮದವರ ದೇವಸ್ಥಾನ, ದರ್ಗಾ ಸೇರಿದಂತೆ ದಾರ್ಮಿಕ ಕ್ದೇತ್ರಗಳ ಅಭಿವೃದ್ಧಿಗೂ ಸಹಾಯ ಹಸ್ತ ಚಾಚಿದ್ದಾರೆ. ಅವರು ಈ ಭಾಗದಲ್ಲಿ ಮಾಡಿರುವ ಸಿಸಿ ರಸ್ತೆಗಳು, ನೀರಿನ ಸೌಲಭ್ಯದಿಂದ ದರ್ಗಾ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಲು ಅನುಕೂಲವಾಗಿದೆ. ಗ್ರಾ. ಪಂ. ನೆರವು ಸಿಕ್ಕಿದೆ. ಹಿಂದೂ- ಮುಸ್ಲಿಮರು ಸೇರಿಕೊಂಡು ಇಲ್ಲಿ ಮಾದರಿ ಜಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಕರೀಂ ಏಳಾಪುರ, ಅಕ್ಬರ ಮುಲ್ಲಾ, ಈರನಗೌಡ ರುದ್ರಗೌಡರ, ಅನೀಲ ಕಾಂಬಳೆ, ಸುಭಾಷ ಅಕ್ಕಿ, ಪ್ರಕಾಶ ಆಯಿತವಾಡ, ನೂರುದ್ದೀನ್ ಮುಲ್ಲಾ, ರಾಮಗೊಂಡ ಬಿರಾದಾರ, ಸಿದ್ದು ಪಿ. ಬಿರಾದಾರ, ಶಂಕರಗೌಡ ಬಿರಾದಾರ, ಸಿದ್ದಗೊಂಡ ರುದ್ರಗೌಡರ, ಗ್ರಾಮದ ಹಿರಿಯರು, ಯುವಕರು ಮುಂತಾದವರು ಉಪಸ್ಥಿತರಿದ್ದರು.
ಪಾಣಿಸಾಹೇಬ ಜಾತ್ರೆ ಭಾವೈಕ್ಯತೆಯ ಪ್ರತೀಕ :ಸಚಿವ ಎಂ.ಬಿ.ಪಾಟೀಲ
Related Posts
Add A Comment