ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಸಿಂದಗಿ ತಾಲೂಕು ಘಟಕದ ೨೦೨೬-೨೦೩೧ನೇ ಸಾಲಿನ ಕಾರ್ಯಕಾರಿ ಸಮಿತಿಗೆ ನಿಗದಿತ ಅವಧಿಯಲ್ಲಿ ಮಡಿವಾಳಪ್ಪ ಪೂಜಾರಿ, ರಾಘವೇಂದ್ರ ಭಜಂತ್ರಿ, ದೊಡ್ಡಪ್ಪ ಎಚ್. ಇವರ ವಿರುದ್ಧ ಯಾವುದೇ ನಿರ್ದೇಶಕರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ, ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಕೋಶಾಧ್ಯಕ್ಷ ಸ್ಥಾನಗಳಿಗೆ ಸ್ಪರ್ಧಿಸಿದ ಮೂವರನ್ನೂ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಅಂತರಗಂಗಿ ಸರಕಾರಿ ಉನ್ನತೀಕರಿಸಿದ ಪ್ರೌಢಶಾಲೆ ಶಿಕ್ಷಕ ಮಡಿವಾಳಪ್ಪ ಪೂಜಾರಿ ಅಧ್ಯಕ್ಷರಾಗಿ, ಚಟ್ಟರಕಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ರಾಘವೇಂದ್ರ ಭಜಂತ್ರಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಯರಗಲ್ಲ ಬಿ.ಕೆ. ಕರ್ನಾಟಕ ಪಬ್ಲಿಕ್ ಶಾಲೆಯ ದೊಡ್ಡಪ್ಪ ಎಚ್. ಕೋಶಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಾಲೂಕು ಘಟಕದ ಚುನಾವಣಾಧಿಕಾರಿ ಶಿವಾನಂದ ಶಹಾಪೂರ ಘೋಷಣೆ ಮಾಡಿದ್ದಾರೆ.

