Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅಧ್ಯಕ್ಷ, ಪ್ರ.ಕಾರ್ಯದರ್ಶಿ ಹಾಗೂ ಕೋಶಾಧ್ಯಕ್ಷ ಅವಿರೋಧ ಆಯ್ಕೆ

ಮೈಸೂರು ದಸರಾ: ಸಿಂದಗಿ ಶ್ರೀಗಳಿಗೆ ಆಹ್ವಾನ

ಸಂಸತ್ ಕಲಾಪದ ಅನುಭವದೊಂದಿಗೆ ಪ್ರಜಾಪ್ರಭುತ್ವದ ಪಾಠ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ನಿವೃತ್ತಿ ಭದ್ರತೆಗೆ ಇಂದಿನಿಂದಲೇ ಪಿಂಚಣಿ ಹೂಡಿಕೆ ಮಾಡಿ
(ರಾಜ್ಯ ) ಜಿಲ್ಲೆ

ನಿವೃತ್ತಿ ಭದ್ರತೆಗೆ ಇಂದಿನಿಂದಲೇ ಪಿಂಚಣಿ ಹೂಡಿಕೆ ಮಾಡಿ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಎನ್‌ಪಿಎಸ್ ಸಂಚಯ ಯಾತ್ರೆಗೆ ವಿಜಯಪುರದಲ್ಲಿ ಉತ್ತಮ ಸ್ಪಂದನೆ | ವ್ಯವಸ್ಥಾಪಕ ಸಿದ್ದಯ್ಯ ಬಿ. ಸಲಹೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ನಿವೃತ್ತಿ ಜೀವನದ ಆರ್ಥಿಕ ಭದ್ರತೆಗಾಗಿ ಇಂದಿನಿಂದಲೇ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಆರಂಭಿಸುವಂತೆ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಸಿದ್ದಯ್ಯ ಬಿ. ಸಾರ್ವಜನಿಕರಿಗೆ ಸಲಹೆ ನೀಡಿದರು.
ವಿಜಯಪುರ ನಗರದಲ್ಲಿ ಅ.೭ರಂದು ನಡೆದ ‘ಎನ್‌ಪಿಎಸ್ ಸಂಚಯ ಯಾತ್ರೆ’ ಸಂದರ್ಭದಲ್ಲಿ ಮಾತನಾಡಿದ ಅವರು,ನಿಯಮಿತ ಹೂಡಿಕೆಯ ಮೂಲಕ ಭವಿಷ್ಯದ ನಿವೃತ್ತಿ ಅಗತ್ಯಗಳಿಗೆ ಆರ್ಥಿಕ ನಿಧಿಯನ್ನು ಶಿಸ್ತುಬದ್ಧವಾಗಿ ರೂಪಿಸಿಕೊಳ್ಳಬಹುದು ಎಂದು ಅವರು ಹೇಳಿದರು. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆ ಕಲ್ಪಿಸುವ ಪ್ರಮುಖ ವ್ಯವಸ್ಥೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಆದಾಯ ಹಾಗೂ ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪಿಂಚಣಿ ಯೋಜನೆಗೆ ಆದ್ಯತೆ ನೀಡಬೇಕು ಎಂದರು.
ವಿಜಯಪುರದಲ್ಲಿ ನಡೆದ ಎನ್‌ಪಿಎಸ್ ಸಂಚಯ ಯಾತ್ರೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ನಾಗರಿಕರು ಆಸಕ್ತಿಯಿಂದ ಎನ್‌ಪಿಎಸ್ ಕುರಿತು ಮಾಹಿತಿ ಪಡೆದುಕೊಂಡಿರುವುದು ಶ್ಲಾಘನೀಯವಾಗಿದೆ. ಯಾತ್ರೆಯ ಯಶಸ್ಸಿಗೆ ಸಹಕರಿಸಿದ ಜಿಲ್ಲಾಡಳಿತ, ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು.
ಎನ್‌ಪಿಎಸ್ ದಿವಸ್–೨೦೨೬ರ ಜಾಗೃತಿ ಅಭಿಯಾನದ ಅಂಗವಾಗಿ ಅ.೧ರಿಂದ ೧೫ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎನ್‌ಪಿಎಸ್ ಸಂಚಯ ಯಾತ್ರೆ ಆಯೋಜಿಸಲಾಗಿದೆ. ಇದರ ಭಾಗವಾಗಿ ಅ.೭ರಂದು ವಿಜಯಪುರ ಜಿಲ್ಲೆಗೆ ಆಗಮಿಸಿದ ಯಾತ್ರೆಯಲ್ಲಿ ಸಾರ್ವಜನಿಕರಿಗೆ ಎನ್‌ಪಿಎಸ್‌ನ ವೈಶಿಷ್ಟ್ಯಗಳು, ಪ್ರಯೋಜನಗಳು, ಹೂಡಿಕೆ ವಿಧಾನ ಹಾಗೂ ಖಾತೆ ತೆರೆಯುವ ಪ್ರಕ್ರಿಯೆ ಕುರಿತು ನೇರವಾಗಿ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಯಿತು.
ಯಾತ್ರೆಯ ಸಂದರ್ಭದಲ್ಲಿ ಕೆನರಾ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು ಭಾಗವಹಿಸಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಎನ್‌ಪಿಎಸ್ ಖಾತೆ ತೆರೆಯುವ ವಿಧಾನ, ಹೂಡಿಕೆ ಪ್ರಕ್ರಿಯೆ ಹಾಗೂ ಯೋಜನೆಯ ಪ್ರಮುಖ ಅಂಶಗಳ ಕುರಿತು ಸಾರ್ವಜನಿಕರ ಪ್ರಶ್ನೆಗಳಿಗೆ ಅಗತ್ಯ ಮಾಹಿತಿ ನೀಡಿದರು.
ನಿವೃತ್ತಿ ಜೀವನದ ಆರ್ಥಿಕ ಭದ್ರತೆಯ ಮಹತ್ವವನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದೊಂದಿಗೆ ನಡೆದ ಎನ್‌ಪಿಎಸ್ ಸಂಚಯ ಯಾತ್ರೆ ವಿಜಯಪುರದಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೆಜರ್ ಅವರ ಪ್ರಕಟಣೆ ತಿಳಿಸಿದೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅಧ್ಯಕ್ಷ, ಪ್ರ.ಕಾರ್ಯದರ್ಶಿ ಹಾಗೂ ಕೋಶಾಧ್ಯಕ್ಷ ಅವಿರೋಧ ಆಯ್ಕೆ

ಮೈಸೂರು ದಸರಾ: ಸಿಂದಗಿ ಶ್ರೀಗಳಿಗೆ ಆಹ್ವಾನ

ಸಂಸತ್ ಕಲಾಪದ ಅನುಭವದೊಂದಿಗೆ ಪ್ರಜಾಪ್ರಭುತ್ವದ ಪಾಠ

ಶಿವಪುರದಲ್ಲಿ ಯುವ ಅಲ್ಪಸಂಖ್ಯಾತ ಅಭಿವೃದ್ಧಿ ಸಮಿತಿ ಸಭೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅಧ್ಯಕ್ಷ, ಪ್ರ.ಕಾರ್ಯದರ್ಶಿ ಹಾಗೂ ಕೋಶಾಧ್ಯಕ್ಷ ಅವಿರೋಧ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಮೈಸೂರು ದಸರಾ: ಸಿಂದಗಿ ಶ್ರೀಗಳಿಗೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಸಂಸತ್ ಕಲಾಪದ ಅನುಭವದೊಂದಿಗೆ ಪ್ರಜಾಪ್ರಭುತ್ವದ ಪಾಠ
    In (ರಾಜ್ಯ ) ಜಿಲ್ಲೆ
  • ಶಿವಪುರದಲ್ಲಿ ಯುವ ಅಲ್ಪಸಂಖ್ಯಾತ ಅಭಿವೃದ್ಧಿ ಸಮಿತಿ ಸಭೆ
    In (ರಾಜ್ಯ ) ಜಿಲ್ಲೆ
  • ಪುಸ್ತಕಗಳ ಆಯ್ಕೆ ಕುರಿತು ಆಕ್ಷೇಪಣೆ ಸಲ್ಲಿಸಲು ಅವಕಾಶ
    In (ರಾಜ್ಯ ) ಜಿಲ್ಲೆ
  • ಪಾರದರ್ಶಕ-ಅಚ್ಚುಕಟ್ಟಾಗಿ ಕೆ-ಸೆಟ್ ಪರೀಕ್ಷೆ ನಡೆಸಿ
    In (ರಾಜ್ಯ ) ಜಿಲ್ಲೆ
  • ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ
    In (ರಾಜ್ಯ ) ಜಿಲ್ಲೆ
  • ನಿವೃತ್ತಿ ಭದ್ರತೆಗೆ ಇಂದಿನಿಂದಲೇ ಪಿಂಚಣಿ ಹೂಡಿಕೆ ಮಾಡಿ
    In (ರಾಜ್ಯ ) ಜಿಲ್ಲೆ
  • ಮಳೆ ಕೊರತೆ: ತೋಟಗಾರಿಕೆ ಬೆಳೆಗಳ ರಕ್ಷಣೆಗೆ ವಿಜ್ಞಾನಿಗಳ ಕ್ಷೇತ್ರ ಅಧ್ಯಯನ
    In (ರಾಜ್ಯ ) ಜಿಲ್ಲೆ
  • ವೃಕ್ಷಥಾನ್ ಹೆರಿಟೇಜ್ ರನ್ ನೋಂದಣಿಗೆ ಅ.11 ಕೊನೆ ದಿನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.