ಉದಯರಶ್ಮಿ ದಿನಪತ್ರಿಕೆ
ವಿಜಯಪುರ. ನಗರದಲ್ಲಿ ಡಿಸೆಂಬರ್-13 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಭಾಗವಹಿಸಲು ನೋಂದಣಿಗೆ ಅಕ್ಟೋಬರ್ 11 ರವಿವಾರ ಕೊನೆಯ ದಿನವಾಗಿದೆ.
ಪರಿಸರ, ಪ್ರವಾಸೋದ್ಯಮ, ಆರೋಗ್ಯ ಮತ್ತು ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯೊಂದಿಗೆ ಹಸಿರು ವಿಜಯಪುರಕ್ಕಾಗಿ ಜನಜಾಗೃತಿ ಮೂಡಿಸುವ ವೃಕ್ಷಥಾನ್ ಹೆರಿಟೇಜ್ ರನ್ ಇದಾಗಿದೆ.
ಈಗಾಗಲೇ ಸಾವಿರಾರು ಜನರು 5, 10 ಮತ್ತು 21ಕಿ.ಮೀ ಓಟಗಳಲ್ಲಿ ಪಾಲ್ಗೊಳ್ಳಲು ಆನ್ ಲೈನ್ ಮೂಲಕ ನೋಂದಣಿ ಮಾಡಿದ್ದಾರೆ. ಆಸಕ್ತರು ಅಕ್ಟೋಬರ್ 11 ರವಿವಾರದೊಳಗಾಗಿ https://vrukshathon.co.in/ ನಲ್ಲಿ ಹೆಸರು ನೋಂದಾಯಿಸಬೇಕು ಎಂದು ವೃಕ್ಷಥಾನ್ ಹೆರಿಟೇಜ್ ರನ್ ನೋಂದಣಿ ಸಮಿತಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

