ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಭಗತ್ಸಿಂಗ್ ವೃತ್ತ ಸಿಂಗರಿಸಿ ಭಗತ್ ಸಿಂಗ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.
ಪಟ್ಟಣದ ಕರಿಸಿದ್ಧೇಶ್ವರ ದೇವಸ್ಥಾನದ ರಸ್ತೆಯಲ್ಲಿನ ವೃತ್ತದಲ್ಲಿ ಸೋಮವಾರ ಸಾಯಂಕಾಲ ಸಭೆ ಸೇರಿದ ಭಗತ್ಸಿಂಗ್ ಅಭಿಮಾನಿಗಳು ವೃತ್ತ ಸಿಂಗರಿಸಿ ನಂತರ ಜಯಂತಿ ಆಚರಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಪ್ರಕಾಶ ಗುಡಿಮನಿ, ಶಿವಾನಂದ ಕುಂಬಾರ, ಮಾಂತೇಶ ವಂದಾಲ, ರಾಘವೇಂದ್ರ ಗುಡಿಮನಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಅವರು ಕೈಗೊಂಡ ಕ್ರಾಂತಿಕಾರಿ ಹೋರಾಟ, ತ್ಯಾಗ, ದೇಶಪ್ರೇಮವನ್ನು ಕೊಂಡಾಡಿದರು.
ನಿವೃತ್ತ ಸೈನಿಕ ಭೀಮರಾಯ ತೆಗನೂರ(ಶಾಬಾದಿ),ಶರಣಗೌಡ ಅಂಗಡಿ, ರಮೇಶ ಮಾಳನೂರ, ನಿಂಗು ಜಲಕತ್ತಿ, ಸುಧಾಕರ ಕುಲಕರ್ಣಿ, ರವಿ ಮಿಂಚನಾಳ, ನಿಂಗು ಜಡಗೊಂಡ, ಸುನೀಲಕುಮಾರ ಪಾಟೀಲ(ಬೈರವಾಡಗಿ), ಪಿಂಟೂ ಬಾಸುತ್ಕರ್, ಮಡು ಹಡಪದ, ಸತೀಶ ಸರೂರ ಇದ್ದರು.

