Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಜಯಪುರದಲ್ಲಿ ಹಜ್ ಭವನ ನಿರ್ಮಾಣಕ್ಕೆ ಆಗ್ರಹ

ಶಾಸಕ ಬಸನಗೌಡ ಸಿಎಂ ಆಗಲೆಂದು ಬಾಲಕರಿಂದ ಸೈಕಲ್ ಯಾತ್ರೆ

ಉಪ ವಿಭಾಗಾಧಿಕಾರಿ ಹುದ್ದೆಗೆ ಬಡ್ತಿ ಪಡೆದ ಸಿದ್ಧರಾಯಗೆ ಸನ್ಮಾನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ದಿಟ್ಟ ಗಣಾಚಾರಿ ಶರಣೆ ಅಮುಗೆ ರಾಯಮ್ಮ
ವಿಶೇಷ ಲೇಖನ

ದಿಟ್ಟ ಗಣಾಚಾರಿ ಶರಣೆ ಅಮುಗೆ ರಾಯಮ್ಮ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯ ಸಂರಕ್ಷಣೆಗೆ ನಿಂತು ಸಿದ್ಧರಾಮ, ಚೆನ್ನ ಬಸವಣ್ಣ, ಅಕ್ಕನಾಗಮ್ಮನವರ ಜೊತೆಗೂಡಿ ವಚನಗಳ ಕಟ್ಟನ್ನು ಹೊತ್ತುಕೊಂಡು ಸೋಮಿದೇವನ ಸೈನಿಕರನ್ನು ಎದುರಿಸಿದ ಮಹಾಶರಣೆ ಅಮುಗೆ ರಾಯಮ್ಮಳ ಜೀವನ ಸಂಘರ್ಷ, ನಿಷ್ಠುರತೆ ನಮಗೆ ಇಂದಿಗೂ ಮಾದರಿ

–ಡಾ.ಶಶಿಕಾಂತ ಪಟ್ಟಣ.
ರಾಮದುರ್ಗ – ಪುಣೆ

ಉದಯರಶ್ಮಿ ದಿನಪತ್ರಿಕೆ

ದಿಟ್ಟ ಗಣಾಚಾರಿ ಶರಣೆ
ಅಮುಗೆ ರಾಯಮ್ಮ ಸೊನ್ನಲಿಗೆ (ಈಗಿನ ಸೊಲ್ಲಾಪುರ) ಜಿಲ್ಲೆಯ ಪುಳಜೆ ಊರಿನವಳು, ನೇಕಾರ ಕುಲದವಳು, ಅಮುಗೆ ದೇವಯ್ಯನ ಧರ್ಮಪತ್ನಿ. ಇವಳ ಮೊದಲ ಹೆಸರು ವರದಾನಿಯಮ್ಮ. ಶರಣೆ ಅಕ್ಕಮ್ಮಳಂತೆ ಈಕೆಯೂ ಆಚಾರ ಶೀಲ ವ್ರತ ನೇಮ ಶೀಲ ಮತ್ತು ಸಮಾಜದ ಓರೆಕೋರೆಗಳ ಬಗ್ಗೆ ತೀಕ್ಷ್ಣವಾಗಿ ವಿಮರ್ಶಿಸಿದ್ದಾಳೆ.
ಒಬ್ಬ ದಿಟ್ಟ ಹೆಣ್ಣು ಮಗಳು ಗಣಾಚಾರಿ
ಅವಳ ಹಲವಾರು ವಚನಗಳಲ್ಲಿ ಆತ್ಮನಿರೀಕ್ಷೆಯೂ ಕಂಡುಬರುತ್ತದೆ. ಅಲ್ಲದೆ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ.
ಪತಿ: ಶಿವಶರಣರಾದ ಅಮುಗೆ ದೇವಯ್ಯ.
ಕಾಯಕ: ಇವರ ಕುಟುಂಬವು ನೆಯ್ಗೆಯ (ನೇಕಾರ) ಕಾಯಕದಲ್ಲಿ ತೊಡಗಿತ್ತು.
ಬಸವಣ್ಣನವರ ಕಾಯಕ ದಾಸೋಹ ಮತ್ತು ಸಮ ಸಮಾಜದ ಪರಿಕಲ್ಪನೆಯ ಪ್ರಭಾವಕ್ಕೆ ಒಳಗಾಗಿ ಪತಿಯೊಂದಿಗೆ ಕಲ್ಯಾಣಕ್ಕೆ ತೆರಳಿ, ಅಲ್ಲಿನ ಕ್ರಾಂತಿಯ ನಂತರ ಪುಳುಜೆಗೆ (ಪುಳಜೆ) ಬಂದು ಅಲ್ಲಿಯೇ ಐಕ್ಯರಾದರು ಎಂದು ಇತಿಹಾಸ ಹೇಳುತ್ತದೆ.


ವಚನ ಸಾಹಿತ್ಯಕ್ಕೆ ಕೊಡುಗೆ
ವಚನಗಳ ಸಂಖ್ಯೆ: ಇವರ ಸುಮಾರು ೧೧೬ ವಚನಗಳು ಲಭ್ಯವಾಗಿವೆ. ಅಕ್ಕ ಮಹಾದೇವಿ ಅಕ್ಕಮ್ಮ ನೀಲಮ್ಮರ ನಂತರ ಅತಿ ಹೆಚ್ಚು ವಚನಗಳನ್ನು ಬರೆದ ಶರಣೆಯರಲ್ಲಿ ಇವರೂ ಒಬ್ಬರು. ಇವರ ವಚನಗಳ ಅಂಕಿತನಾಮ “ಅಮುಗೇಶ್ವರಲಿಂಗ” ಅಥವಾ “ಮಹಾಲಿಂಗ ಅಮುಗೇಶ್ವರಲಿಂಗ”.
ವಚನಗಳ ಶೈಲಿ
ರಾಯಮ್ಮನವರ ವಚನಗಳಲ್ಲಿ ಗಾಢವಾದ ಲಿಂಗನಿಷ್ಠೆ, ಆತ್ಮನಿರೀಕ್ಷೆ, ಕೆಚ್ಚು ಮತ್ತು ಧೈರ್ಯ ಎದ್ದು ಕಾಣುತ್ತವೆ. ಕೇವಲ ಬಾಹ್ಯ ಆಚಾರಗಳನ್ನು ಪಾಲಿಸುತ್ತಾ ಅಧರ್ಮವಾಗಿ ನಡೆಯುವವರನ್ನು, ಕಾಷಾಯ ವಸ್ತ್ರ ತೊಟ್ಟು ಕಾಮವಿಕಾರಗಳಲ್ಲಿ ಮುಳುಗುವ ಕಪಟ ವೇಷಧಾರಿಗಳನ್ನು ತಮ್ಮ ವಚನಗಳಲ್ಲಿ ಕಟುವಾಗಿ ಟೀಕಿಸಿದ್ದಾರೆ.
ತಮ್ಮ ವಚನದಲ್ಲಿ ಅಮುಗೆ ರಾಯಮ್ಮನವರು ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ, ವೇಷಭೂಷಣಗಳ ಮೂಲಕ ಜನರನ್ನು ವಂಚಿಸುವ ಡಾಂಭಿಕ ಭಕ್ತರನ್ನು ಅತ್ಯಂತ ಕಠೋರವಾದ ಉಪಮೆಗಳ ಮೂಲಕ ಟೀಕಿಸಿದ್ದಾರೆ.
ತಮ್ಮ ಒಂದು ವಚನದ ಮೂಲಕ ಅಮುಗೆ ರಾಯಮ್ಮನವರು “ನುಡಿದಂತೆ ನಡೆ, ನಡೆದಂತೆ ನುಡಿ” ಎಂಬ ಶರಣ ತತ್ವವನ್ನು ಎತ್ತಿಹಿಡಿಯುತ್ತಾರೆ. ಭಕ್ತಿ ಎಂಬುದು ಪ್ರದರ್ಶನದ ವಸ್ತುವಲ್ಲ; ಅದು ಅಂತರಂಗದ ಶುದ್ಧಿ ಮತ್ತು ಜ್ಞಾನದ ಸಂಕೇತವಾಗಿರಬೇಕು ಎಂಬ ವೈಚಾರಿಕ ಸಂದೇಶವನ್ನು ಈ ವಚನ ನಮಗೆ ನೀಡುತ್ತದೆ.


ಆಯ್ದಕ್ಕಿ ಲಕ್ಕಮ್ಮನಂತೆ ದಿಟ್ಟ ವಚನಕಾರ್ತೆ ತನ್ನ ಗಂಡನೊಂದಿದೆ ಕಾಯಕ ದಾಸೋಹ ಮಾಡಿ ಕೊನೆಗೆ ನಡೆದ ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯ ಸಂರಕ್ಷಣೆಗೆ ನಿಂತು ಸಿದ್ಧರಾಮ ಚೆನ್ನ ಬಸವಣ್ಣ ಅಕ್ಕನಾಗಮ್ಮನವರ ಜೊತೆಗೂಡಿ ವಚನಗಳ ಕಟ್ಟನ್ನು ಹೊತ್ತುಕೊಂಡು ಸೋಮಿದೇವನ ಸೈನಿಕರನ್ನು ಎದುರಿಸುತ್ತಾ ಸೊಲ್ಲಾಪುರದ ಪುಳಜೆಗೆ ಬಂದು ಅಲ್ಲಿಯೇ ನೆಲೆಸಿ ಕೊನೆಗೆ ಅಲ್ಲಿಯೇ ಐಕ್ಯಳಾದ ಸಾವಿಲ್ಲದ ಮಹಾಶರಣೆ ಅಮುಗೆ ರಾಯಮ್ಮಳ ಜೀವನ ಸಂಘರ್ಷ ನಿಷ್ಠುರತೆ ನಮಗೆ ಇಂದಿಗೂ ಮಾದರಿಯಾಗಿವೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಜಯಪುರದಲ್ಲಿ ಹಜ್ ಭವನ ನಿರ್ಮಾಣಕ್ಕೆ ಆಗ್ರಹ

ಶಾಸಕ ಬಸನಗೌಡ ಸಿಎಂ ಆಗಲೆಂದು ಬಾಲಕರಿಂದ ಸೈಕಲ್ ಯಾತ್ರೆ

ಉಪ ವಿಭಾಗಾಧಿಕಾರಿ ಹುದ್ದೆಗೆ ಬಡ್ತಿ ಪಡೆದ ಸಿದ್ಧರಾಯಗೆ ಸನ್ಮಾನ

ವಿಜಯಪುರ ಜಿಲ್ಲೆ ಅಭಿವೃದ್ಧಿಗೆ ೩೭೧(ಜೆ) ಸೌಲಭ್ಯ ಕಲ್ಪಿಸಲು ಆಗ್ರಹ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಜಯಪುರದಲ್ಲಿ ಹಜ್ ಭವನ ನಿರ್ಮಾಣಕ್ಕೆ ಆಗ್ರಹ
    In (ರಾಜ್ಯ ) ಜಿಲ್ಲೆ
  • ಶಾಸಕ ಬಸನಗೌಡ ಸಿಎಂ ಆಗಲೆಂದು ಬಾಲಕರಿಂದ ಸೈಕಲ್ ಯಾತ್ರೆ
    In (ರಾಜ್ಯ ) ಜಿಲ್ಲೆ
  • ಉಪ ವಿಭಾಗಾಧಿಕಾರಿ ಹುದ್ದೆಗೆ ಬಡ್ತಿ ಪಡೆದ ಸಿದ್ಧರಾಯಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆ ಅಭಿವೃದ್ಧಿಗೆ ೩೭೧(ಜೆ) ಸೌಲಭ್ಯ ಕಲ್ಪಿಸಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಅಗತ್ಯ ಬಿದ್ದರೆ ಕಬ್ಬು ಬೆಳೆಗಾರರ ಪರ ಹೋರಾಟಕ್ಕೂ ಸಿದ್ಧ
    In (ರಾಜ್ಯ ) ಜಿಲ್ಲೆ
  • ಶಾಸಕರಿಂದ ನನಗೆ ಬಹಿರಂಗವಾಗಿ ಜೀವಬೆದರಿಕೆ :ರಜಪೂತ
    In (ರಾಜ್ಯ ) ಜಿಲ್ಲೆ
  • ರಾಷ್ಟ್ರೀಯ ಹೆದ್ದಾರಿ ತಡೆ – ಪಟ್ಟು ಬಿಡದ ರೈತ ಸಮೂಹ
    In (ರಾಜ್ಯ ) ಜಿಲ್ಲೆ
  • ಅಲ್ಪಸಂಖ್ಯಾತರ ಸರಳ ವಿವಾಹ ಸಹಾಯಧನಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಅಂಗನವಾಡಿ ಕಂ-ಕ್ರಷ್ ಕೇಂದ್ರಗಳ ಕಾರ್ಯಕರ್ತೆ-ಸಹಾಯಕಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಕಿತ್ತೂರು ಚೆನ್ನಮ್ಮ ವಿಜಯ ಜ್ಯೋತಿ ಯಾತ್ರೆಗೆ ಸ್ವಾಗತ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.