ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ್ ಕಟಕಧೋಂಡ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಎನ್.ಟಿ.ಪಿ.ಸಿ. ಕೆ.ಎಸ್.ಟಿ.ಡಿ.ಸಿ. ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘವು ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಇಬ್ರಾಹಿಂರೋಜಾ ಆವರಣದಲ್ಲಿ ಜಿಲ್ಲಾ ಮಟ್ಟದ ಛಾಯಾಚಿತ್ರ ಪ್ರದರ್ಶನ ಎರ್ಪಡಿಸಲಾಗಿತ್ತು.
ಪ್ರದರ್ಶನವನ್ನು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ್ ಕಟಕಧೋಂಡ ಉದ್ಘಾಟಿಸಿ ಐತಿಹಾಸಿಕ ನಗರದ ಸ್ಮಾರಕಗಳನ್ನು ತಮ್ಮ ಕ್ಯಾಮರಾ ಕಣ್ಣಿನಿಂದ ಅತ್ಯುತ್ತಮವಾಗಿ ಸೆರೆಹಿಡಿದು ಕಲಾಸಕ್ತರಿಗೆ ಅದರ ಕಲಾಕತ್ಮಕತೆಯನ್ನು ತೋರಿಸುವುದರ ಮೂಲಕ ಪ್ರವಾಸೋದ್ಯಮಕ್ಕೆ ಛಾಯಾಗ್ರಾಹಕರ ಕೊಡುಗೆ ಅಮೂಲ್ಯವಾಗಿದೆ. ಇದೊಂದು ಸಂಗ್ರಹಯೋಗ್ಯ ಛಾಯಾಚಿತ್ರ ಪ್ರದರ್ಶನ, ಇಂತಹ ಕಲಾತ್ಮಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತಾಗಲಿ ಇದರಿಂದ ಪ್ರವಾಸೋದ್ಯಮಕ್ಕೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ ಎಂದರು.
ನಗರಾಬಿವೃದ್ದಿ ಪ್ರಾದಿಕಾರದ ಮಾಜಿ ಅಧ್ಯಕ್ಷ ಹಾಗೂ ವಿಜಯಪುರ ಜಿಲ್ಲಾ ಹೊಟೇಲ ಅಸೋಸಿಯೆಶನ್ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ ಮಾತನಾಡಿ, ಕಲಾವಿದರು ಮತ್ತು ಛಾಯಾಗ್ರಾಹಕರಿಗೆ ಪ್ರೋತ್ಸಾಹ ನೀಡಲು ನಮ್ಮ ಸಂಘದಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಅರವಿಂದ ಹೂಗಾರ, ಪ್ರವಾಸಿ ಅಧೀಕಾರಿ ಅನಿಲ ಬಣಜಿಗೇರ, ಹೋಟೆಲ ಉದ್ಯಮಿ ಶಾಂತೇಶ ಕಳಸಗೊಂಡ, ಎನ್.ಟಿ.ಪಿ.ಸಿ.ಯ ಕಾರ್ಯನಿರ್ವಾಹಕ ಕಾರ್ಪೋರೇಟ್ ಸಂಪರ್ಕಾಧಿಕಾರಿ ಶ್ರೀಮತಿ ಪುಜಾ ಪಾಂಡೆ, ಹಿರಿಯ ಕಲಾವಿದರಾದ ಪಿ. ಎಸ್. ಕಡೇಮನಿ, ವಿದ್ಯಾಧರ ಸಾಲಿ, ಬಿ. ಎಸ್. ಪಾಟೀಲ, ರಮೇಶ ಚವ್ಹಾಣ, ಪ್ರಶಾಂತ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಪಾರ್ವತಿ, ಸುಭಾಶ ಪವಾರ, ಉಪಸ್ಥಿತರಿದ್ದರು.
ಇದೆ ಸಂದರ್ಭದಲ್ಲಿ ಪ್ರಶಸ್ತಿ ವಿಜೇತರಾದ ಸಂತೋಷ ಹೂಣಸಗಿ ಪ್ರಥಮ, ಪವನಕುಮಾರ ಅಂಗಡಿ ದ್ವೀತಿಯ, ಶಶಿಕುಮಾರ ಕುಂಬಾರ ತೃತೀಯ ಮತ್ತು ಗೌಡಪ್ಪಗೌಡ ಬಿರಾದಾರ ಹಾಗೂ ಎಮ್. ಉಕ್ಕಲಿ ಇವರಿಗೆ ಸಮಾಧಾನಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಸವರಾಜ ಸರ್ಜಾಪುರ, ಪ್ರಭಾಕರ ಅರಕೇರಿ, ವಿಠಲ ಗುಜ್ಜರ, ಸುರೇಶ್ ಗಲ್ಪಿ, ಪ್ರಮೋದ್ ಕಾಜಗಾರ, ಬಾಳು ಕಲಾಲ, ಜಿ. ಜೆ. ಗಲಗಲಿ, ಬಿ. ಎಲ್. ಕುಲಕರ್ಣಿ, ಗುರುಸಂಗಯ್ಯ ಮಠಪತಿ ಸಂಕೇತ್ ಪವಾರ, ಎಂ. ಪ್ರಭು, ಅಶೋಕ್ ಸಾರವಾಡ, ಸುರೇಶ್ ರಾಠೋಡ, ವೀರೇಶ್ ಶಿವಸಿಂಪಿ, ಸತೀಶ್ ಜಾಧವ, ಸತೀಶ ಕಲಾಲ, ಶಿವಕುಮಾರ ಗಡಶೆಟ್ಟಿ, ಗುರುರಾಜ ಪಲ್ಲೆದ, ರಾಜು ರಾಜಪೂತ, ಬಸವರಾಜ ಕುಂಬಾರ, ಪ್ರದರ್ಶನದಲ್ಲಿ ಛಾಯಾಚಿತ್ರದಲ್ಲಿ ಪ್ರದರ್ಶಿಸಿದರು.

