ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹೈದ್ರಾಬಾದ್ ವಿಮೋಚನಾ ಚಳುವಳಿ ಪಿತಾಮಹ ರಾಷ್ಟ್ರವೀರ ಸ್ವಾಮಿ ರಾಮಾನಂದ ತೀರ್ಥರ ಜನ್ಮದಿನವಾದ ಅಕ್ಟೋಬರ್ ೩ ರಂದು ರಾಜ್ಯಾಧ್ಯಂತ ಎಲ್ಲ ಶಾಲಾ ಕಾಲೇಜು ಹಾಗೂ ಸರಕಾರಿ ಕಚೇರಿಗಳಲ್ಲಿ ಸರಕಾರದಿಂದ ಜಯಂತಿ ಆಚರಣೆ ಮಾಡಲು ಆಗ್ರಹಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಅವರ ಮೂಲಕ ಸರ್ಕಾರಕ್ಕೆ ವಿಜಯಪುರ ಜಿಲ್ಲಾ ಸಂಘ -ಸಂಸ್ಥೆಗಳ ಮುಖಂಡರು ಮನವಿ ಸಲ್ಲಿಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ೩೭೧ಜೆ ಹೋರಾಟಗಾರರಾದ ಲಾಯಪ್ಪ ಇಂಗಳೆ ಮಾತನಾಡಿ, ಅಖಂಡ ಹೈದ್ರಾಬಾದ್ ಪ್ರಾಂತವು ಭಾರತದ ಒಕ್ಕೂಟದಲ್ಲಿ ಇಂದು ಸೇರಿದೆ ಅಂದರೆ ಅದಕ್ಕೆ ಸ್ವಾಮಿ ರಾಮಾನಂದ ತೀರ್ಥರವರೇ ಕಾರಣಿಪುರುಷರಾಗಿದ್ದಾರೆ ಸಿಂದಗಿಯಲ್ಲಿರುವ ಅವರ ಜನ್ಮ ಸ್ಮಾರಕ ವೀರಸೌಧವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘ ಸಂಸ್ಥೆಗಳ ಮುಖಂಡರಾದ ವಿನೋದ ಖೇಡ, ಸಿದ್ದನಗೌಡ ಪಾಟೀಲ, ಎನ್. ಸುರೇಶಕುಮಾರ, ಅನಿಲ ಇಕ್ಕಡೆ, ಜಗದೇವ ಸೂರ್ಯವಂಶಿ, ಮಲ್ಲನಗೌಡ ಪಾಟೀಲ (ಬರಟಗಿ ), ಪ್ರದೀಪ ದೇಶಪಾಂಡೆ, ಕಲ್ಲಪ್ಪ ಶಿವಶರಣ, ಅಯೂಬಖಾನ ನದಾಫ್, ಮೊಹ್ಮದ್ ಬಾಗವಾನ, ಎಂ ಎಂ ಹಂಗರಗಿ, ಸಂಗನಗೌಡ ಪಾಟೀಲ ಸೇರಿದಂತೆ ಹಲವರಿದ್ದರು.

