ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಡಿಜಿಟಲ್ ವಂಚನೆ ಕುರಿತು ಹಿರಿಯ ನಾಗರಿಕರು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಸಂಪನ್ಮೂಲ ವ್ಯಕ್ತಿ ಆರ್.ಕೆ.ಪೂಜಾರಿ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಶುಕ್ರವಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಜರುಗಿದ “ಕಾನೂನು ಅರಿವು ಮತ್ತು ನೆರವು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿರಿಯ ನಾಗರಿಕರ ಕಾಯ್ದೆ -೨೦೦೭, ಹಿರಿಯ ನಾಗರಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು, ಸೈಬರ್ ಮತ್ತು ಡಿಜಿಟಲ್ ವಂಚನೆ ಕುರಿತು ಮಾಹಿತಿ ನೀಡಿದರು.
ನವರಸ ಜಾನಪದ ಕಲಾಯುವಕ ಸಂಘ ವಿಜಯಪುರ ಇದರ ಅಧ್ಯಕ್ಷ ಹಾಗೂ ವಕೀಲ ಬಾಬು.ಎಮ್. ಅವತಾಡೆ ಮಾತನಾಡಿ, ಹಿರಿಯ ನಾಗರಿಕರ ರಕ್ಷಣೆಗಾಗಿ ೨೦೦೭ರ ಕಾಯಿದೆಯನ್ನು ಜಾರಿಗೆ ತಂದಿದ್ದು, ಸದರಿ ಕಾಯ್ದೆ ಮತ್ತು ನಿಯಮಗಳ ಕುರಿತು ವಿವರಿಸಿ ಹಿರಿಯ ನಾಗರಿಕರಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ಸೇವೆ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ನಿವೃತ್ತ ನೌಕರರ ಸಂಘದ ಅದ್ಯಕ್ಷರ ಚನ್ನವೀರ ಕುದರಿ ಮಾತನಾಡಿದರು.
ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಅಪ್ರೋಜ್ ಅಹ್ಮದ ಪಟೇಲ, ಸಿಂದಗಿ ತಾಲ್ಲೂಕು ಪಂಚಾಯಿತಿ ಎಂ.ಆರ್.ಡಬ್ಲ್ಯೂ ಮುತ್ತುರಾಜ ಸಾತಿಹಾಳ, ಪಟ್ಟಣ ಪಂಚಾಯಿತಿ ಯು.ಆರ್.ಡಬ್ಲ್ಯೂ ಪರಶುರಾಮ ಯಲಗೋಡ, ವಿ.ಆರ್.ಡಬ್ಲೂಗಳಾದ ಸಂಗಪ್ಪ ಸುರಗಿಹಳ್ಳಿ, ಶರಣಗೌಡ ಪಾಟೀಲ, ಸರೂಬಾಯಿ, ಬಸಮ್ಮ , ಚೈತ್ರ, ಬಸಪ್ಪ, ಶಾಬುದ್ದಿನ ಬುಕ್ಕದ ಹಾಗೂ ನಿವೃತ್ತ ನೌಕರರ ಸಂಘದ ಸದಸ್ಯರು ಇದ್ದರು.

