ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಎರಡನೇ ತ್ರೈಮಾಸಿಕ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆ.೨೭ರಂದು ಬೆಳಿಗ್ಗೆ ೮ ರಿಂದ ಸಂಜೆ ೪ರವರೆಗೆ ೨೨೦/೧೧ ಕೆ.ವಿ ಇಂಡಿ ಹಾಗೂ ೧೧೦/೧೧ ಕೆ.ವಿ ಸಾಮರ್ಥ್ಯದ ಇಂಡಿ, ಝಳಕಿ, ಚಡಚಣ, ಲಚ್ಯಾಣ, ಹಿರೇಬೆವನೂರ, ರೋಡಗಿ, ಹಿರೇಮಸಳಿ, ನಾದ, ಧೂಳಖೇಡ, ಕೆರೂರ, ಉಮರಾಜ (ರೇವತಗಾಂವ), ಭೈರುಣಗಿ, ಇಂಚಗೇರಿ, ಜಿಗಜೇವಣಗಿ ಹಾಗೂ ಕನ್ನೂರ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.
ಇದೇ ಅವಧಿಯಲ್ಲಿ ೩೩ ಕೆ.ವಿ ಸಾಮರ್ಥ್ಯದ ತಾಂಬಾ, ತಡವಲಗಾ, ನಾದ, ಹೋರ್ತಿ, ನಿವರಗಿ ಹಾಗೂ ಹಲಸಂಗಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿಯೂ ವಿದ್ಯುತ್ ವ್ಯತ್ಯಯವಾಗಲಿದೆ. ಸೆ.೨೮ರಂದು ಬೆಳಿಗ್ಗೆ ೮ರಿಂದ ಸಂಜೆ ೪ರವರೆಗೆ ೧೧೦/೧೧ ಕೆ.ವಿ ಅಥರ್ಗಾ ಮತ್ತು ಝಂಬಗಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ.
ಸಂಬAಧಿತ ವಿದ್ಯುತ್ ವಿತರಣಾ ಕೇಂದ್ರಗಳಿAದ ಹೊರಡುವ ಎಲ್ಲಾ ೧೧ ಕೆ.ವಿ ಮಾರ್ಗಗಳ ವ್ಯಾಪ್ತಿಯ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಇಂಡಿ ಹೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.
