ವಲಯವಾರು ವೇಳಾಪಟ್ಟಿ ಪ್ರಕಟ | ಒಟ್ಟು ೩,೯೯೧ ಹುದ್ದೆಗಳಿಗೆ ಅರ್ಹತೆ ಪಡೆದ ೧೯,೩೯೬ ಅಭ್ಯರ್ಥಿಗಳಿಗೆ ಕಾಯ್ದಿರಿಸಿದ ಪರೀಕ್ಷಾ ಕೇಂದ್ರಗಳ ಸಂಪೂರ್ಣ ವಿವರ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ರಾಜ್ಯ ಪೊಲೀಸ್ ನೇಮಕಾತಿ ವಿಭಾಗವು ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ (ಆರ್‌ಪಿಸಿ ಮತ್ತು ಕೆಕೆ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖವಾದ ದೇಹದಾರ್ಡ್ಯ ಪರೀಕ್ಷೆ (PSಖಿ) ಹಾಗೂ ಸಹಿಷ್ಣುತಾ ಪರೀಕ್ಷೆಯ (ಇಖಿ) ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಈ ಬೃಹತ್ ನೇಮಕಾತಿ ಅಭಿಯಾನದಡಿ ಒಟ್ಟು ೩,೯೯೧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ರಾಜ್ಯಾದ್ಯಂತ ವಿವಿಧ ಹಂತಗಳಲ್ಲಿ ಆಯ್ಕೆಯಾಗಿರುವ ಒಟ್ಟು ೧೯,೩೯೬ ಅರ್ಹ ಅಭ್ಯರ್ಥಿಗಳು ಈ ದೈಹಿಕ ಪರೀಕ್ಷೆಗಳಲ್ಲಿ ಭಾಗವಹಿಸಲಿದ್ದಾರೆ.
ಉಳಿಕೆ ಮೂಲ ವೃಂದದ (ಖPಅ) ಒಟ್ಟು ೩,೩೯೫ ಹುದ್ದೆಗಳಿಗೆ ೧೬,೪೫೪ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆದಿದ್ದರೆ, ಕಲ್ಯಾಣ ಕರ್ನಾಟಕ (ಏಏ) ವೃಂದದ ೫೯೬ ಹುದ್ದೆಗಳಿಗೆ ೨,೯೪೨ ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.
ಉಳಿಕೆ ಮೂಲ ವೃಂದದ (ಖPಅ) ಪರೀಕ್ಷಾ ವಿವರಗಳು: ಬೆಂಗಳೂರು ನಗರ ಘಟಕ: ಈ ಘಟಕ ವ್ಯಾಪ್ತಿಯಲ್ಲಿ ೨,೦೧೫ ಹುದ್ದೆಗಳಿದ್ದು, ಒಟ್ಟು ೯,೮೮೭ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇವರಿಗೆ ೨೦೨೬ ನೇ ಸೆಪ್ಟೆಂಬರ್ ೨೮, ರಿಂದ ಅಕ್ಟೋಬರ್ ೦೫ ರವರೆಗೆ ಪರೀಕ್ಷೆ ನಡೆಯಲಿದೆ.
ಪರೀಕ್ಷೆಗಳು ಸಿಎಆರ್ (ಹೆಚ್‌ಕ್ಯೂ) ಚಾಮರಾಜಪೇಟೆಯ ಸಿರ್ಸಿ ಸರ್ಕಲ್ ಮೈದಾನ, ಆಡುಗೋಡಿಯ ಸಿಎಆರ್ (ದಕ್ಷಿಣ) ಮೈದಾನ ಹಾಗೂ ಆರ್.ಕೆ. ಹೆಗಡೆ ನಗರದ ತನಿಷಂದ್ರ ಮುಖ್ಯ ರಸ್ತೆಯಲ್ಲಿರುವ ಸಿಎಆರ್ (ಉತ್ತರ) ಪರೇಡ್ ಮೈದಾನಗಳಲ್ಲಿ ಜರುಗಲಿವೆ.
ಕೇಂದ್ರ ವಲಯ: ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಜಿಲ್ಲೆ ಹಾಗೂ ರೈಲ್ವೆ ಘಟಕಗಳನ್ನು ಒಳಗೊಂಡಂತೆ ೨೦೦ ಹುದ್ದೆಗಳಿಗೆ ೯೪೬ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.
ಇವರ ಪರೀಕ್ಷೆಗಳು ೨೦೨೬ ನೇ ಸೆಪ್ಟೆಂಬರ್ ೨೮ ರಿಂದ ಅಕ್ಟೋಬರ್ ೦೩ ರವರೆಗೆ ಬೆಂಗಳೂರಿನ ಕೊರಮಂಗಲದ ಮಡಿವಾಳ ಮಾರುಕಟ್ಟೆ ಎದುರು ೩ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ನಡೆಯಲಿವೆ.
ದಕ್ಷಿಣ ವಲಯ: ಮೈಸೂರು ನಗರ, ಮೈಸೂರು ಜಿಲ್ಲೆ, ಹಾಸನ, ಕೊಡಗು, ಚಾಮರಾಜನಗರ ಮತ್ತು ಮಂಡ್ಯ ಘಟಕಗಳ ೩೯೫ ಹುದ್ದೆಗಳಿಗೆ ೧,೮೯೧ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಇವರಿಗೆ ೨೦೨೬ ನೇ ಸೆಪ್ಟೆಂಬರ್ ೨೮ ರಿಂದ ಅಕ್ಟೋಬರ್ ೦೫ ರವರೆಗೆ ಮೈಸೂರಿನ ರೇಸ್ ಕೋರ್ಸ್ ಹಿಂಭಾಗದಲ್ಲಿರುವ ಸಿಟಿ ಆರ್ಮ್ಸ್ ರಿಸರ್ವ್ (ಅಂಖ) ಪರೇಡ್ ಮೈದಾನದಲ್ಲಿ ದೈಹಿಕ ಪರೀಕ್ಷೆ ಜರುಗಲಿದೆ.
ಪೂರ್ವ ವಲಯ: ಶಿವಮೊಗ್ಗ, ಹಾವೇರಿ, ದಾವಣಗೆರೆ ಹಾಗೂ ಚಿತ್ರದುರ್ಗ ಘಟಕಗಳ ವ್ಯಾಪ್ತಿಯ ೨೫೦ ಹುದ್ದೆಗಳಿಗೆ ೧,೨೩೪ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಹರಾಗಿದ್ದಾರೆ.
ಇವರ ಪರೀಕ್ಷೆಯು ೨೦೨೬ನೇ ಸೆಪ್ಟೆಂಬರ್ ೨೯ ರಿಂದ ಅಕ್ಟೋಬರ್ ೦೬ ರವರೆಗೆ ಶಿವಮೊಗ್ಗದ ನವಿಲೆಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆಯಲಿದೆ.
ಪಶ್ಚಿಮ ವಲಯ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ (ಕಾರವಾರ), ಚಿಕ್ಕಮಗಳೂರು ಮತ್ತು ಮಂಗಳೂರು ನಗರ ಘಟಕಗಳ ೩೯೫ ಹುದ್ದೆಗಳಿಗೆ ೧,೮೦೩ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.
ಇವರಿಗೆ ೨೦೨೬ ನೇ ಸೆಪ್ಟೆಂಬರ್ ೨೮ ರಿಂದ ಅಕ್ಟೋಬರ್ ೦೩ ರವರೆಗೆ ಮಂಗಳೂರಿನ ಲಾಲ್‌ಬಾಗ್‌ನಲ್ಲಿರುವ ಮಂಗಳ ಕ್ರೀಡಾಂಗಣದಲ್ಲಿ ದೈಹಿಕ ಪರೀಕ್ಷೆ ನಿಗದಿಯಾಗಿದೆ.
ಉತ್ತರ ವಲಯ: ಗದಗ್ ಹಾಗೂ ಹುಬ್ಬಳ್ಳಿ-ಧಾರವಾಡ ನಗರ ಘಟಕ ಒಳಗೊಂಡ ೧೧೦ ಹುದ್ದೆಗಳಿಗೆ ೫೪೯ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ಇವರಿಗೆ ೨೦೨೬ ನೇ ಸೆಪ್ಟೆಂಬರ್ ೨೯ ಮತ್ತು ೩೦
೨೦೨೬ ರಂದು ಬೆಳಗಾವಿಯ ವಿಟಿಯು ಹತ್ತಿರದ ಮಚ್ಚೆಯಲ್ಲಿರುವ ೨ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.
ಬಳ್ಳಾರಿ ವಲಯ (ಖPಅ): ಬಳ್ಳಾರಿ ಮತ್ತು ರಾಯಚೂರು ಘಟಕಗಳ ೩೦ ಹುದ್ದೆಗಳಿಗೆ ೧೪೪ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಇವರಿಗೆ ಪರೀಕ್ಷೆಯು ೨೦೨೬ ನೇ ಅಕ್ಟೋಬರ್ ೦೫ ರಿಂದ ಅಕ್ಟೋಬರ್ ೦೬ ರವರೆಗೆ ಕೊಪ್ಪಳದ ಮುನಿರಾಬಾದ್‌ನ ಹೊಸಹಳ್ಳಿ ಬಳಿಯಿರುವ ಕೆಎಸ್‌ಆರ್‌ಪಿ ಪಿ.ಟಿ.ಎಸ್. ಮೈದಾನದಲ್ಲಿ (ಐಆರ್‌ಬಿ ಕ್ಯಾಂಪಸ್) ನಡೆಯಲಿದೆ.
ಕಲ್ಯಾಣ ಕರ್ನಾಟಕ (ಏಏ) ವೃಂದದ ಪರೀಕ್ಷಾ ವಿವರಗಳು: ಸಿಒಪಿ ಬೆಂಗಳೂರು ನಗರ (ಏಏ): ಈ ಭಾಗದ ೧೭೧ ಹುದ್ದೆಗಳಿಗೆ ೮೩೩ ಅಭ್ಯರ್ಥಿಗಳು ಅರ್ಹರಾಗಲಿದ್ದು, ೨೦೨೬ ನೇ ಅಕ್ಟೋಬರ್ ೦೮ ರಂದು ಬೆಂಗಳೂರಿನ ಚಾಮರಾಜಪೇಟೆಯ ಸಿಎಆರ್ ಪರೇಡ್ ಮೈದಾನ (ಹೆಚ್‌ಕ್ಯೂ) ಹಾಗೂ ಆಡುಗೋಡಿಯ ಸಿಎಆರ್ ಪರೇಡ್ ಮೈದಾನಗಳಲ್ಲಿ (ದಕ್ಷಿಣ) ಏಕಕಾಲದಲ್ಲಿ ದೈಹಿಕ ಪರೀಕ್ಷೆ ನಡೆಯಲಿದೆ.
ಬಳ್ಳಾರಿ ವಲಯ (ಏಏ ಘಟಕಗಳು): ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಘಟಕಗಳ ೧೭೪ ಹುದ್ದೆಗಳಿಗೆ ೮೬೯ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ಇವರಿಗೆ ೨೦೨೬ನೇ ಅಕ್ಟೋಬರ್ ೧೨ ರಿಂದ ೧೫ ರವರೆಗೆ ಕೊಪ್ಪಳದ ಮುನಿರಾಬಾದ್ ಹೊಸಹಳ್ಳಿಯಲ್ಲಿರುವ ಕೆಎಸ್‌ಆರ್‌ಪಿ ಪಿ.ಟಿ.ಎಸ್. ಮೈದಾನದಲ್ಲಿ ದೈಹಿಕ ಪರೀಕ್ಷೆ ನಡೆಸಲಾಗುವುದು.
ಈಶಾನ್ಯ ವಲಯ: ಕಲಬುರಗಿ ನಗರ, ಕಲಬುರಗಿ ಜಿಲ್ಲೆ ಹಾಗೂ ಬೀದರ್ ಘಟಕಗಳ ೨೫೧ ಹುದ್ದೆಗಳಿಗೆ ೧,೨೪೦ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಇವರ ಪರೀಕ್ಷೆಯು ೨೦೨೬ನೇ ಅಕ್ಟೋಬರ್ ೧೨ ರಿಂದ ೧೪ ರವರೆಗೆ ಕಲಬುರಗಿಯ ತಾಜ್ ಸುಲ್ತಾನ್‌ಪುರದಲ್ಲಿರುವ ೬ನೇ ಬೆಟಾಲಿಯನ್ ಕೆಎಸ್‌ಆರ್‌ಪಿ ಮೈದಾನದಲ್ಲಿ ನೆಡೆಯಲಿದೆ.
ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆ: ಪರೀಕ್ಷೆಗೆ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ತಮ್ಮ ಕರೆ ಪತ್ರವನ್ನು (ಅಚಿಟಟ ಐeಣಣeಡಿ) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಏಇಂ) ಅಧಿಕೃತ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅರ್ಹ ಅಭ್ಯರ್ಥಿಗಳು ತಮಗೆ ನಿಗದಿಪಡಿಸಿದ ದಿನಾಂಕಗಳಂದು ನಿಗದಿತ ದೈಹಿಕ ಪರೀಕ್ಷಾ ಕೇಂದ್ರಗಳಿಗೆ ಕಡ್ಡಾಯವಾಗಿ ವರದಿ ಮಾಡಬೇಕೆಂದು ಪೊಲೀಸ್ ನೇಮಕಾತಿ ವಿಭಾಗವು ಸ್ಪಷ್ಟಪಡಿಸಿದೆ.

