Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬಾರದ ಮಳೆಗೆ ಕತ್ತೆಗಳ ಮದುವೆ – ಮೆರವಣಿಗೆ

ಸೆ.೨೮ರಿಂದ ೩೦ವರೆಗೆ ಬ್ಯಾಂಕ್ ನೌಕರರ ಮುಷ್ಕರ

ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ: ಸೆ.೨೮ ರಿಂದ ದೈಹಿಕ ಪರೀಕ್ಷೆಗಳು ಆರಂಭ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬಿ.ಎಲ್.ಡಿ ಸೌಹಾರ್ದ ಸಂಘಕ್ಕೆ ರೂ.7.17 ಕೋಟಿ ನಿವ್ವಳ ಲಾಭ
(ರಾಜ್ಯ ) ಜಿಲ್ಲೆ

ಬಿ.ಎಲ್.ಡಿ ಸೌಹಾರ್ದ ಸಂಘಕ್ಕೆ ರೂ.7.17 ಕೋಟಿ ನಿವ್ವಳ ಲಾಭ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿಕೆ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಶಿಸ್ತುಬದ್ಧ ಆರ್ಥಿಕ ಕ್ರಮಗಳಿಂದಾಗಿ ಬಿಜಾಪುರ ಲಿಂಗಾಯತ ಡೆವಲಪ್‌ಮೆಂಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ(ಬಿ.ಎಲ್.ಡಿ ಸೌಹಾರ್ದ) ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಮತ್ತು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಬಿ.ಎಲ್.ಡಿ ಸೌಹಾರ್ದದ 4ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
2025- 26ನೇ ಆರ್ಥಿಕ ವರ್ಷದಲ್ಲಿ ಸಂಘ ಆರ್ಥಿಕವಾಗಿ ಗಮನಾರ್ಹ ಸಾಧನೆ ಮಾಡಿದ್ದು, ಒಟ್ಟು ವ್ಯವಹಾರ ₹760 ಕೋಟಿ ತಲುಪಿದೆ. ಅಲ್ಲದೇ, ರೂ. 7.17 ಕೋಟಿ ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಸದೃಢತೆಗೆ ಇದು ಸಾಕ್ಷಿಯಾಗಿದ್ದು, ಸದಸ್ಯರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಶೇ. 5 ರಷ್ಟು ಲಾಭಾಂಶ(ಡಿವಿಡೆಂಡ್) ನೀಡಲಾಗುತ್ತಿದೆ. ಈ ಯಶಸ್ಸಿಗೆ ಸಂಘದ ಗ್ರಾಹಕರು, ಸದಸ್ಯರು, ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗ ಕಾರಣವಾಗಿದೆ. ಮುಂಬರುವ ದಿನಗಳಲ್ಲಿ ಸದಸ್ಯರಿಗೆ ಇನ್ನಷ್ಟು ಉತ್ತಮ ಸಹಕಾರಿ ಸೇವೆಗಳನ್ನು ಒದಗಿಸುವುದು. ಠೇವಣಿ ಮತ್ತು ಸಾಲ ವ್ಯವಹಾರಗಳನ್ನು ವಿಸ್ತರಿಸುವುದು ಹಾಗೂ ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಷಣ್ಮುಖಾರೂಢ ಮಠದ ಪೀಠಾಧ್ಯಕ್ಷ ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಮಾತನಾಡಿ, ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರು ಸ್ಥಾಪಿಸಿದ ಬಿ.ಎಲ್.ಡಿ.ಇ ಸಂಸ್ಥೆಯನನು ಸಂಗನಬಸವ ಸ್ವಾಮೀಜಿ, ಬಂಗಾರಮ್ಮ ಸಜ್ಜನ, ಬಿ. ಎಂ. ಪಾಟೀಲ ಅವರ ಕಟ್ಟಿ ಬೆಳೆಸಿದ್ದಾರೆ. ಈಗ ಎಂ. ಬಿ. ಪಾಟೀಲ ಅವರು ಸಮರ್ಥವಾಗಿ ಮುನ್ನಡೆಸುತ್ತಿದ್ದು, ಶತಮಾನದ ಹಿಂದೆ ಪ್ರಾರಂಭವಾದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ, ಆರೋಗ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಶರಣಬಸಪ್ಪ ಡಿ. ಗುಡ್ಡೊಡಗಿ, ನಿರ್ದೇಶಕ ಶ್ರೀಕಾಂತ ಎಸ್. ಶಿರಾಡೋಣ, ಅವಿನಾಶ ಬಿ. ಜೈನ, ವಿಜಯಕುಮಾರ ಡಿ. ಕನಮಡಿ, ಗಿರೇಪ್ಪ ಡಿ. ಗುಗ್ಗರಿ, ಪ್ರಭುಗೌಡ ಬಸನಗೌಡ ಬಿರಾದಾರ, ಸಂತೋಷ ಬಸಲಿಂಗಪ್ಪ ಹೊಕ್ರಾಣಿ, ಸೋಮನಾಥ ಗೊಲಪ್ಪ ಕಳ್ಳಿಮನಿ, ಪ್ರೊ. ರಾಜು ಆಲಗೂರ, ಆಲಗೂರ, ಮಲ್ಲಪ್ಪ ಪಿ. ಕವಲಗಿ, ಮುಖ್ಯ ಕಾರ್ಯ ನಿರ್ಹವಣಾಧಿಕಾರಿ ವಿಜಯಕುಮಾರ ಜತ್ತಿ ಮುಂತಾದವರು ಉಪಸ್ಥಿತರಿದ್ದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬಾರದ ಮಳೆಗೆ ಕತ್ತೆಗಳ ಮದುವೆ – ಮೆರವಣಿಗೆ

ಸೆ.೨೮ರಿಂದ ೩೦ವರೆಗೆ ಬ್ಯಾಂಕ್ ನೌಕರರ ಮುಷ್ಕರ

ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ: ಸೆ.೨೮ ರಿಂದ ದೈಹಿಕ ಪರೀಕ್ಷೆಗಳು ಆರಂಭ

ಮಹಿಳಾ ಅಭಿವೃದ್ಧಿ ನಿಗಮದವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬಾರದ ಮಳೆಗೆ ಕತ್ತೆಗಳ ಮದುವೆ – ಮೆರವಣಿಗೆ
    In (ರಾಜ್ಯ ) ಜಿಲ್ಲೆ
  • ಸೆ.೨೮ರಿಂದ ೩೦ವರೆಗೆ ಬ್ಯಾಂಕ್ ನೌಕರರ ಮುಷ್ಕರ
    In (ರಾಜ್ಯ ) ಜಿಲ್ಲೆ
  • ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ: ಸೆ.೨೮ ರಿಂದ ದೈಹಿಕ ಪರೀಕ್ಷೆಗಳು ಆರಂಭ
    In (ರಾಜ್ಯ ) ಜಿಲ್ಲೆ
  • ಮಹಿಳಾ ಅಭಿವೃದ್ಧಿ ನಿಗಮದವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಇಂಡಿ: ಕೆಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ಮಾಸಿಕ ಗೌರವಧನ: ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿಯಲ್ಲಿ ಕಾನೂನು ಅರಿವು ಮತ್ತು ನೆರವು
    In (ರಾಜ್ಯ ) ಜಿಲ್ಲೆ
  • ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಪತ್ರ ಚಳುವಳಿ
    In (ರಾಜ್ಯ ) ಜಿಲ್ಲೆ
  • ರೆಡ್ಡಿ ಸಮಾಜದ ಅಭಿನಂದನಾ ಸಮಾವೇಶ ಯಶಸ್ವಿಗೊಳಿಸಿ
    In (ರಾಜ್ಯ ) ಜಿಲ್ಲೆ
  • ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಣಂತಿ ಸಾವಿಗೆ ತೀವ್ರ ಆಕ್ರೋಶ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.