ಪ್ರಸಕ್ತ ಸಾಲಿಗೆ ಕಾರ್ಖಾನೆ ಆರಂಭಿಸಲು ಅನುಮತಿ ನೀಡದಂತೆ ಜಿಲ್ಲಾಧಿಕಾರಿ ಗೆ ಸಂಗಮೇಶ ಸಗರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿಯ ೧೦ ಸಕ್ಕರೆ ಕಾರ್ಖಾನೆಗಳನ್ನು ಈ ವರ್ಷ ಪ್ರಾರಂಭ ಮಾಡುವುದುದಕ್ಕೂ ಮುಂಚೆ ಎಲ್ಲಾ ಕಾರ್ಖಾನೆ ಮಾಲಿಕರು ಹಾಗೂ ರೈತ ಮುಖಂಡರೊಡನೆ ಸಭೆ ಕರೆದು, ಈ ವರ್ಷದ ಕಬ್ಬಿನ ದರ ನಿಗದಿ ಪಡೆಸುವುದು ಹಾಗೂ ಕಳೆದ ವರ್ಷದ ಬಾಕಿ ಬಿಲ್ ಹಾಗೂ ೫೦ ರೂಪಾಯಿ ಬಿಡುಗಡೆಗೊಳಿಸವುದು ಹಾಗೂ ಕಬ್ಬಿನ ತೂಕದಲ್ಲಿ ಆಗುತ್ತಿರುವು ಮೊಸದ ಕುರಿತು ಕಟ್ಟೆಚ್ಚರಿಕೆಯ ಕ್ರಮ ಕೈಗೊಂಡ ನಂತರ ಅನುಮತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಾ.ಕೆ.ಆನಂದ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಸೆಪ್ಟೆಂಬರ ೨೯ ನೇ ತಾರಿಖಿನಂದು ಹುಬ್ಬಳ್ಳಿಯ ಪ್ರಹ್ಲಾದ ಜೋಶಿ ಅವರ ಮುತ್ತಿಗೆ ಹಾಗೂ ಚರ್ಚೆ ನಂತರ ಗುರ್ಲಾಪುರ ಹೋರಾಟ ಮಾಡಲಾಗುವುದು. ಈ ವರ್ಷದಲ್ಲಿ ರಾಜ್ಯ ಮತ್ತು ಕೆಂದ್ರ ಸರ್ಕಾರ ಸೇರಿ ಒಂದು ಪ್ರತಿಟನ್ ಕಬ್ಬಿಗೆ ೧೦೦೦ ದಂತೆ ಹಾಕಿ ಒಟ್ಟಾರೆಯಾಗಿ ೫೫೦೦ ದರ ಕೊಡಬೇಕು, ಅಂದಾಗ ಮಾತ್ರ ಕಬ್ಬು ಬೆಳೆಗಾರರು ಉಳಿಯುತ್ತಾರೆ ಇಲ್ಲವಾದಲ್ಲಿ ದೀವಾಳಿ ಆಗುವುದರಲ್ಲಿ ಸಂಶಯವಿಲ್ಲ. ಪ್ರಸಕ್ತ ದಿನಮಾನಗಳಲ್ಲಿ ಕೃಷಿಯ ಖರ್ಚು ೧೦ ಪಟ್ಟು ಹೆಚ್ಚಾಗಿದೆ, ಆದರೆ ಕಬ್ಬಿಗೆ ಸರಿಯಾದ ಬೆಲೆ ನೀಡದೇ ರಾಜ್ಯ ಹಾಗೂ ಕೇಂದ್ರ ಸರಕಾರಗಳು ರೈತರನ್ನು ಮೋಸ ಮಾಡುತ್ತಿದ್ದಾರೆ, ಕಾರ್ಖಾನೆ ಮಾಲಿಕರು ತೂಕದಲ್ಲಿ ಮೊಸ ಮಾಡುತ್ತಾ ಕಬ್ಬಿನ ಬಿಲ್ ಕೊಡುವಲ್ಲಿಯೂ ತಡ ಮಾಡಿ ರೈತರನ್ನು ಸತಾಯಿಸುತ್ತಾರೆ. ಆದ್ದರಿಂದ ಜಿಲ್ಲೆಯಲ್ಲಿ ಇನ್ನು ಕಬ್ಬು ತುಂಬಾ ಎಳೆಯದಿರುವುದರಿಂದ ಇಳುವರಿ ಸಹ ಬರುವುದಿಲ್ಲ, ಇದರಿಂದ ಎಲ್ಲರಿಗೂ ನ್ಷಟ ಆಗಲಿದೆ ಎಂದರು.
ಈ ವೇಳೆ ಕನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ, ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಮಹಾದೇವ ಬನಸೋಡೆ, ಮುಖಂಡರಾದ ಕಲ್ಲಪ್ಪ ಸೊನ್ನದ, ಅಂಬರೇಶ ಭೈರಾಮಡಿ, ಯಮನೇಶ ಭಜಂತ್ರಿ ಉಪಸ್ಥಿತರಿದ್ದರು.

