ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ರಾಯಚೂರು ಎಸ್ಇಪಿ ಪಠ್ಯಕ್ರಮದಂತೆ ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲಿಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ ಎ 5 ನೇ ಸೆಮಿಸ್ಟರ್ ಓದುತ್ತಿರುವ ವಿದ್ಯಾರ್ಥಿಗಳು ಕ್ಷೇತ್ರ ಅಧ್ಯಯನ ಕಾರ್ಯ ಕೈಗೊಳ್ಳಲು ಗುರುವಾರ ಪುರಸಭೆ ಕಾರ್ಯಾಲಯಕ್ಕೆ ಭೇಟಿ ನೀಡಿ ಸ್ಥಳೀಯ ಸರ್ಕಾರದ ಕಾರ್ಯವೈಖರಿ ಕುರಿತು, ಅಧಿಕಾರ ಹಾಗೂ ಕರ್ತವ್ಯಗಳು ತಿಳಿದುಕೊಂಡು ಇಂಟರ್ನ್ಶಿಪ್ ಯೋಜನಾ ವರದಿಯನ್ನು ತಯಾರಿಸಲು ಪುರಸಭೆ ಅಧ್ಯಕ್ಷೆ ಗಿರಿಜಾ ರಮೇಶ ಕೊಡಗಾನೂರು, ಉಪಾಧ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ಪುರಸಭೆ ಸದಸ್ಯರಾದ ರವಿ ಸೊನ್ನದ, ಬಸನಗೌಡ ಪತ್ತೇಪುರ, ಚಳಿಗೇಪ್ಪ ಮ್ಯಾಗೇರಿ ಮುಖ್ಯಾಧಿಕಾರಿ ಪ್ರಕಾಶ ಬಾಗಲಿ, ಸಿಬ್ಬಂದಿಗಳಾದ ಪರಶುರಾಮ, ಸಿದ್ರಾಮಯ್ಯ ಇಂಡಿ ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ ಸಮಗ್ರ ಮಾಹಿತಿಯನ್ನು ಪಡೆದುಕೊಂಡ ಪರಿ ಅನನ್ಯವಾಗಿ ಮೂಡಿ ಬಂತು.
ಕ್ಷೇತ್ರ ಅಧ್ಯಯನ ಕಾರ್ಯಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು
ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಥಟ್ಟನೆ ಉತ್ತರಿಸುತ್ತಾ, ಅವರಲ್ಲಿ ಆತ್ಮವಿಶ್ವಾಸ ತುಂಬುವುದರ ಜೊತೆಗೆ ವರದಿಗೆ ಬೇಕಾದ ಪೂರಕ ಮಾಹಿತಿಗಳನ್ನು ಹಂಚಿಕೊಂಡ ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆ, ಮುಖ್ಯಾಧಿಕಾರಿ, ಪುರಸಭೆ ಸರ್ವ ಸದಸ್ಯರಿಗೂ ಕಾಲೇಜಿನ ಸಿಡಿಸಿ ಸದಸ್ಯ ಡಾ ಯಂಕನಗೌಡ ಎಸ್ ಪಾಟೀಲ್ ಕೃತಜ್ಞತೆ ಸಲ್ಲಿಸಿದರು.
ಇದೇ ವೇಳೆ ಸಹಕಾರಿ ಸಂಘ ಕೆಂಭಾವಿ- 2 ಉಪಾಧ್ಯಕ್ಷ ತಿಪ್ಪಣ್ಣ ಯಾಳಗಿ, ಕಾರ್ಯದರ್ಶಿ ರಂಗಪ್ಪ ವಡ್ಡರ, ಕಾಲೇಜಿನ ಬೋಧಕ ಸಿಬ್ಬಂದಿಗಳಾದ ನಸ್ರೀನ್ ತಾಜ್, ಸುಮಾ ಎಚ್, ಡಾ ಪೂಜಾ ಹೊನ್ನುಟಗಿ, ಮಲ್ಲಿಕಾರ್ಜುನ ಮರಡ್ಡಿ ಕರಡಕಲ್, ಡಾ ಉಪೇಂದ್ರ ನಾಯಕ, ಶರಣಬಸವ ಅಂಗಡಿ, ಸಂಗಮೇಶ ಪಟ್ಟಣಕರ್ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

