ಉದಯರಶ್ಮಿ ದಿನಪತ್ರಿಕೆ
ಅಥಣಿ: ಕಾರ್ಯನಿರತ ಪತ್ರಕರ್ತರ ಸಂಘ ಅಥಣಿ ಘಟಕದ ವತಿಯಿಂದ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಪತ್ರಕರ್ತರ ಸಂಘದ ಕಚೇರಿ ಆವರಣದಲ್ಲಿ ಆರು ಜನ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಉಡುಗೊರೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಸಿದ್ದು ಹಂಡಗಿ ಅವರನ್ನೂ ಪತ್ರಕರ್ತರ ಸಂಘದ ವತಿಯಿಂದ ಸತ್ಕರಿಸಲಾಯಿತು.
ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ ಮೈಗೂರ ಮಾತನಾಡಿ, ಪೌರ ಕಾರ್ಮಿಕರ ಕಾರ್ಯ ಅತ್ಯಂತ ಮಹತ್ವದ್ದು ಹಾಗೂ ಕಷ್ಟಕರವಾದದ್ದು ನಾವೆಲ್ಲರೂ ಎಚ್ಚರಗೊಳ್ಳುವ ಮುನ್ನವೇ ಅವರು ಪಟ್ಟಣದ ಗಲ್ಲಿಗಲ್ಲಿಗೂ ತೆರಳಿ ಸ್ವಚ್ಛತಾ ಕಾರ್ಯದಲ್ಲಿ ತೊಡಗುತ್ತಾರೆ ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕೊರೋನಾ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು
ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಅಣ್ಣಾಸಾಬ ತೆಲಸಂಗ ಮಾತನಾಡಿ, ಪಟ್ಟಣ ಹಾಗೂ ಸಮಾಜದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಸತ್ಕರಿಸಿ ಗೌರವಿಸಿರುವುದು ಸಂತಸದ ಸಂಗತಿ ಪೌರ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಅವರು ನಿರಂತರವಾಗಿ ಹೋರಾಟ ನಡೆಸುತ್ತಿದ್ದು ಪತ್ರಕರ್ತರು ಅವರ ಧ್ವನಿಯಾಗಿ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಕಾರ್ಯ ಮಾಡಲಿದ್ದಾರೆ ಎಂದರು
ಪೌರ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಕಾಂಬಳೆ ಮಾತನಾಡಿ, ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪತ್ರಕರ್ತರು ಸದಾ ನಮ್ಮೊಂದಿಗೆ ನಿಲ್ಲುವುದಾಗಿ ಭರವಸೆ ನೀಡಿರುವುದು ಆಶಾಭಾವನೆ ಮೂಡಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಪರ ಹೋರಾಟಗಾರ ಶಬ್ಬೀರ ಸಾತಬಚ್ಚೆ, ಸಿದ್ದು ಹಂಡಗಿ, ಸುಂದರ ಸೌದಾಗರ, ಪತ್ರಕರ್ತರಾದ ಶಿವಕುಮಾರ ಅಪರಾಜ, ರಮೇಶ ಬಾದವಾಡಗಿ, ಪರಶುರಾಮ ನಂದೇಶ್ವರ, ಜಬ್ಬಾರ ಚಿಂಚಲಿ, ವಿಲಾಸ ಕಾಂಬಳೆ, ಸಂದೀಪ ಘಟಕಾಂಬಳೆ, ರಾಜು ಕಾವೇರಿ, ಯಾಸಿನ ಝಾರೆ ಸೇರಿದಂತೆ ಪೌರ ಕಾರ್ಮಿಕರು ಉಪಸ್ಥಿತರಿದ್ದರು

