ಬಡ ಕಲಾವಿದರಿಗೆ ನೆರವಾಗಲು ಕೆಳಗಿನ ಸುದ್ದಿಯನ್ನು ದಯವಿಟ್ಟು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ತಮ್ಮಲ್ಲಿ ಕೋರಿಕೆ.
ಗೆ
ಮಾನ್ಯ ಸಂಪಾದಕರು / ವರದಿಗಾರರು
ಮಾನ್ಯರೆ,
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಸೆ.25 ರಿಂದ ಸೆ.27 ವರೆಗೆ ಜೀ ಕನ್ನಡ ವಾಹಿನಿಯ ’ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಘು (ರಾಗಿಣಿ) ಅವರು ಮೂರು ದಿನಗಳ ಕಾಲ ರಂಗಪ್ರದರ್ಶನ ನೀಡಿ ರಂಜಿಸಲಿದ್ದಾರೆ.
ನಗರದ ವಜ್ರಹನುಮಾನ ಗೇಟ್ ಹತ್ತಿರದ ಶ್ರೀ 1008 ಜಗದ್ಗುರು ರೇಣುಕಾಚಾರ್ಯ ನಾಟ್ಯ ಸಂಘ ಮೈಂದರ್ಗಿ ಅವರ ರಂಗಸಜ್ಜಿಕೆಯಲ್ಲಿ ಸಂಘದ ಹಾಗೂ ಬಡ ಕಲಾವಿದರ ಸಹಾಯಾರ್ಥ ಪ್ರದರ್ಶನಗೊಳ್ಳಲಿರುವ “ಅಡಮುಟ್ಟ ಮಾವ, ಎಡವಟ್ಟ ಅಳಿಯ” ನಾಟಕದಲ್ಲಿ ಕಾಮಿಡಿ ಕಿಲಾಡಿಗಳು’ ಖ್ಯಾತಿಯ ರಾಘು (ರಾಗಿಣಿ) ಅವರು ಹಾಸ್ಯ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ಸೆ.25 ಶುಕ್ರವಾರದಿಂದ ಸೆ.27 ರವಿವಾರದವರೆಗೆ ಮೂರು ದಿನ ಪ್ರತಿದಿನ ಮಧ್ಯಾಹ್ನ 3.15 ಮತ್ತು ಸಂಜೆ 6.30 ಘಂಟೆಗೆ ಪ್ರದರ್ಶನಗೊಳ್ಳಲಿರುವ ಈ ನಾಟಕಕ್ಕೆ ಕಲಾಭಿಮಾನಿಗಳು ಸಂಘ ಮತ್ತು ಬಡ ಕಲಾವಿದರ ಸಹಾಯಾರ್ಥವಾಗಿ ಆಗಮಿಸಿ ರಂಗಭೂಮಿಯನ್ನು ಉಳಿಸಿ ಬೆಳೆಸಬೇಕೆಂದು ಸಂಘದ ಮಾಲಿಕ ಎಂ.ಎಸ್.ಮಡ್ಡೆ, ವ್ಯವಸ್ಥಾಪಕರಾದ ಶಂಕರಪ್ಪ ಚೌಡಾಪೂರ ಮತ್ತು ಸದಾಶಿವ ಹಿರೇಮಠ ಕೋರಿದ್ದಾರೆ.


