ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಸವಾದಿ ಶರಣರ ಸಮಾಜೋಧಾರ್ಮಿಕ ಕ್ರಾಂತಿಯಾದ ಬಳಿಕ ಜನಪದರು ಕಂಡು ಕೇಳಿದ, ಶರಣರು ಅನುಭವಿಸಿದ ಕಷ್ಟ ಸುಖಗಳನ್ನು, ವಚನಗಳ ರಕ್ಷಣೆಗಾಗಿ ನಡೆಸಿದ ಹೋರಾಟವನ್ನು ಲಾವಣಿ ತ್ರಿಪದಿಗಳಲ್ಲಿ ಕಟ್ಟಿ ಕೊಟ್ಟರು. ಜನಪದರು ಬೀಸುವಾಗ,ತೊಟ್ಟಿಲು ತೂಗುವಾಗ,ಕಸ ಕೀಳುವಾಗ, ರಾಶಿ ಮಾಡುವಾಗ ಹಾಡಿ ಸಂತೋಷಪಟ್ಟರು. ಜನಪದ ಸಾಹಿತ್ಯ ಎಲ್ಲ ಸಾಹಿತ್ಯ ಪ್ರಕಾರಗಳ ತಾಯಿ ಬೇರಾಗಿದೆ.ಜನಪದ ಸಾಹಿತ್ಯದಿಂದಲೂ ಶರಣರ ಜೀವನ ಸಾಧನೆಯನ್ನು ಚಿತ್ರಿಸಲು ಸಾಧ್ಯವಾಗಿದೆಯೆಂದು ಸಾಹಿತಿ ಡಾ.ಸೋಮಶೇಖರ ವಾಲಿಯವರು ಹೇಳಿದರು.
ಅವರು ವಿಜಯಪುರದ ದಿ ಪ್ರೆಸಿಡೆನ್ಸಿಯಲ್ ಶಿಕ್ಷಣ ಮಹಾವಿದ್ಯಾಲಯದದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಜನಪದದಲ್ಲಿ ಶರಣರು” ವಿಷಯ ಕುರಿತು ಮಾತನಾಡಿದರು.
ದಿ.ಗಂಗಾಬಾಯಿ ಉಪ್ಪಿನ, ದಿ.ಹಣಮಂತರಾಯ ಬಾದರಬಂಡಿ ಹಾಗೂ ದಿ.ಬಸವರಾಜ ಅನಂತಪುರ ಅವರ ಸ್ಮರಣಾರ್ಥವಾಗಿ ಹಮ್ಮಿಕೊಂಡಿದ್ದ ದತ್ತಿಸ್ಮರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಶ್ರೀಮತಿ ಎಸ್.ಟಿ.ಬೋಳರಡ್ಡಿ ಅವರು ವಹಿಸಿದ್ದರು.
ದಾಸೋಹಿಗಳಾದ ಸಿದ್ರಾಮಪ್ಪ ಉಪ್ಪಿನ ಮಾತನಾಡಿದರು. ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರೊ ಸಾಹೇಬಗೌಡ ಬಸರಕೋಡ ವಂದಿಸಿದರು. ಸೋಮಶೇಖರ ವಚನ ಗಾಯನ ಮಾಡಿದರು. ಈರಣ್ಣ ತೊಂಡಿಕಟ್ಟಿ ಸ್ವಾಗತಿಸಿದರು.
ಆರ್.ಎಂ.ದೊಡಮನಿ, ಸೋಮನಗೌಡ ಪಾಟೀಲ, ಬಸಲಿಂಗಪ್ಪ ಸಾರವಾಡ, ಪ್ರೊ ಸಜ್ಜನ ಉಪಸ್ಥಿತರಿದ್ದರು.

