ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ತಾಲೂಕಿನಲ್ಲಿ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿರುವ ೧೦ ವಿವಿಧ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಿ, ಅವುಗಳ ನೋಂದಣಿಯನ್ನು ರದ್ದುಪಡಿಸಲು ಸಹಕಾರ ಇಲಾಖೆ ನಿರ್ಧರಿಸಿದೆ.
ಈ ಸಂಘಗಳು ತಮ್ಮ ನೋಂದಾಯಿತ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಜತೆಗೆ ಅವುಗಳ ಆಡಳಿತ ಮಂಡಳಿ ಸದಸ್ಯರು ಮತ್ತು ಮುಖ್ಯ ಕಾರ್ಯನಿರ್ವಾಹಕರ ಬಗ್ಗೆ ಮಾಹಿತಿ ಲಭ್ಯವಿಲ್ಲ. ಹಲವು ವರ್ಷಗಳಿಂದ ಈ ಸಂಘಗಳ ವ್ಯವಹಾರಗಳ ಲೆಕ್ಕಪರಿಶೋಧನೆಯೂ ಆಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ, ಈ ಕೆಳಗಿನ ಸಂಘಗಳಲ್ಲಿ ಸಾರ್ವಜನಿಕರಿಗೆ ಅಥವಾ ವ್ಯಕ್ತಿಗಳಿಗೆ ಯಾವುದೇ ಕೊಡತಕ್ಕ ಅಥವಾ ಬರತಕ್ಕ ಬಾಬುಗಳು (ವಹಿವಾಟು/ಬಾಕಿ) ಇದ್ದಲ್ಲಿ, ಸೂಕ್ತ ದಾಖಲೆಗಳೊಂದಿಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ೦೭ ದಿನಗಳ ಒಳಗಾಗಿ ಸಮಾಪನಾಧಿಕಾರಿ ಹಾಗೂ ಸಹಕಾರ ಸಂಘಗಳ ನಿರೀಕ್ಷಕರು, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ (ವಿಜಯಪುರ ಉಪವಿಭಾಗ, ವಿಜಯಪುರ) ಇವರನ್ನು ಸಂಪರ್ಕಿಸಬಹುದಾಗಿದೆ.
ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ, ಸಂಘಗಳ ನೋಂದಣಿ ರದ್ದತಿಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.
ನೋಂದಣಿ ರದ್ದತಿಗೆ ಗುರಿಯಾಗಿರುವ ಸಹಕಾರ ಸಂಘಗಳ ವಿವರ: ಶಿವಣಗಿ ವಿವಿಧೋದ್ದೇಶಗಳ ಸಹಕಾರ ಸಂಘ ನಿ. ಶಿವಣಗಿ ಸವಿತಾ ಗಾಯತ್ರಿ ಸಹಕಾರ ಸಂಘ ನಿ. ವಿಜಯಪುರ ಬಂಜಾರಾ ಮತ್ತು ಮಹಿಳಾ ಕೈಗಾರಿಕಾ ಸಹಕಾರ ಸಂಘ ನಿ. ಹಂಚಿನಾಳ ಕಲ್ಪವೃಕ್ಷ ಗ್ರಾಹಕರ ಸಹಕಾರ ಸಂಘ ನಿ. ಅಫಜಲಪೂರಟಾಕೆ, ವಿಜಯಪುರ ರಕ್ಷಾ ಪತ್ತಿನ ಸಹಕಾರ ಸಂಘ ನಿ. ವಿಜಯಪುರ ವಿದ್ಯಾನಗರ ಗೃಹ ನಿರ್ಮಾಣ ಸಹಕಾರ ಸಂಘ ನಿ. ವಿಜಾಪುರ ಶಿವಶರಣ ಹರಳಯ್ಯ ವಿವಿಧೋದ್ದೇಶಗಳ ಸಹಕಾರ ಸಂಘ ನಿ. ಬಾಬಾನಗರ, ವಿಜಯಪುರ ಶ್ರೀ ರೇಣುಕಾ ಪತ್ತಿನ ಸಹಕಾರ ಸಂಘ ನಿ. ವಿಜಯಪುರ ವಿಜಯಪುರ ನಗರ ಟಿನ್ ತಗಡಿನ ಸಾಮಾನಗಳ ತಯಾರಕರ ಕೂಲಿಕಾರರ ಸಹಕಾರ ಸಂಘ ನಿ. ವಿಜಯಪುರ ಸತ್ತಾರ ಪತ್ತಿನ ಸಹಕಾರ ಸಂಘ ನಿ. ವಿಜಯಪುರ (ಮತ್ತು ಭಾರತ ಕೋಳಿ ಸಾಕಾಣಿಕೆ ಮತ್ತು ಮಾರಾಟಗಾರರ ಸಹಕಾರ ಸಂಘ ನಿ.ವಿಜಯಪುರ) ಎಂದು ಸಮಾಪನಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
