Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಾಹಿತಿ ಇರದ ಸಿಎಂ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ

ಕನೇರಿ ಶ್ರೀಗಳ ವಿರುದ್ದ ಪಾಟೀಲ ಟೀಕಾ ಪ್ರಹಾರ

ಅಗ್ನಿತತ್ವ ಮತ್ತು ವಾಯು ತತ್ವ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕನೇರಿ ಶ್ರೀಗಳ ವಿರುದ್ದ ಪಾಟೀಲ ಟೀಕಾ ಪ್ರಹಾರ
(ರಾಜ್ಯ ) ಜಿಲ್ಲೆ

ಕನೇರಿ ಶ್ರೀಗಳ ವಿರುದ್ದ ಪಾಟೀಲ ಟೀಕಾ ಪ್ರಹಾರ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರದಲ್ಲಿ ಅಹಿಂದ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಪ್ರಮುಖರಿಂದ ಪತ್ರಿಕಾಗೋಷ್ಠಿ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕನೇರಿ ಮಠದ ಗುರುಗಳು ತಮ್ಮ ಪೂರ್ವಾಶ್ರಮದ ಕೆಟ್ಟ ವರ್ತನೆಯನ್ನು ಇನ್ನೂ ಬಿಟ್ಟಿಲ್ಲ, ಹೀಗಾಗಿ ಅವರಿಗೆ ಶ್ರೇಷ್ಠರಾದ ಅದೃಶ್ಯ ಕಾಡಸಿದ್ದೇಶ್ವರ ಹೆಸರಿನಿಂದ ನಾನು ಕರೆಯಲು ಬಯಸುವುದಿಲ್ಲ, ಕೆಲವು ಶಕ್ತಿಗಳು ಕನೇರಿ ಸ್ವಾಮೀಜಿಯವರನ್ನು ಟಿಷ್ಯೂ ಪೇಪರ್ ಆಗಿ ಬಳಕೆ ಮಾಡಿ ಬಿಸಾಡುತ್ತವೆ ಎಂದು ಏಕವಚನದಲ್ಲಿಯೇ ಶ್ರೀಗಳ ಪೂರ್ವಾಶ್ರಮದ ನಾಮ ಪ್ರಯೋಗಿಸಿ ಚಿಂತಕ ಪ್ರೊ.ಜೆ.ಎಸ್. ಪಾಟೀಲ ಟೀಕಾ ಪ್ರಹಾರ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ನಕಲಿ ಸ್ವಾಮೀಜಿಯಾದ ಕನೇರಿ ಶ್ರೀ ಪೂರ್ವಶ್ರಮದ ವರ್ತನೆ ಬಿಟ್ಟಿಲ್ಲ, ಕನೇರಿ ಶ್ರೀಗಳು ಬದಲಿಗೆ ಬಾಪುಗೌಡ ಮೇಟಿ ಎಂದೇ ಕರೆಯಬೇಕಿದೆ, ಭಾವೈಕ್ಯತೆಯ ಪರಂಪರೆಯ ಮಠದಲ್ಲಿ ಅವರು ಇರಲು ಯೋಗ್ಯರಲ್ಲ, ಲಿಂಗಾಯತ ಪರಂಪರೆಯ ಮಠವನ್ನು ಬಿಡಬೇಕು. ಇಲ್ಲವಾದರೆ, ಭಕ್ತರೇ ಮಠದಿಂದ ಹೊರಹಾಕುವ ಪರಿಸ್ಥಿತಿ ಬರಲಿದೆ, ಕಾವಿ ಧರಿಸಿರುವ ಈ ನಕಲಿ ಸ್ವಾಮಿ ಲಿಂಗಾಯತ ಐಡೆಂಟಿಟಿ ನಾಶ ಮಾಡಲು ಸುಪಾರಿ ಪಡೆದಿದ್ದಾರೆ. ಯಾರದ್ದೊ ಕೈಗೊಂಬೆಯಾಗಿ ಕರ್ನಾಟಕಕ್ಕೆ ಬಂದಿದ್ದಾರೆ. ಮನುಸ್ಮೃತಿ ಹಾಗೂ ವಚನಗಳ ಬಗ್ಗೆಯೂ ಗೊತ್ತಿಲ್ಲ. ಈತನ ಬಗ್ಗೆ ತನಿಖೆ ನಡೆಸಿದರೆ ಕ್ರಿಮಿನಲ್ ಹಿನ್ನೆಲೆ ತೆರೆದುಕೊಳ್ಳಲಿದೆ.
ಜಾತಿ ಬೇಧ ಹಾಗೂ
ಇವರ ಯಾವ ಕಾಯಕ ಮಾಡುತ್ತೇನೆ ಗೊತ್ತಿಲ್ಲ, ಕೋಟಿ ಕೋಟಿ ಬೆಲೆಬಾಳುವ ಕಾರು ಯಾವ ಕಾಯಕ ಮಾಡಿ ಸಂಪಾದಿಸಿದ್ದಾರೆ ಎಂದು ಪ್ರಶ್ನಿಸಿದರು.
ಏಕ ವಚನದಲ್ಲಿಯೇ ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸಿದ ದಲಿತ ಮುಖಂಡ ಅಡಿವೆಪ್ಪ ಸಾಲಗಲ್ ಮಾತನಾಡಿ, ಸಂವಿಧಾನದಲ್ಲಿ ಮನುಸ್ಮೃತಿಯ ಯಾವ ಅಂಶಗಳು ಇವೆ?, ಡಾ.ಅಂಬೇಡ್ಕರ್ ಬಗ್ಗೆ ನಿಮಗೆ ಯಾವುದೇ ಜ್ಞಾನ ಇಲ್ಲ, ಇನ್ಮುಂದೆ ಹಗುರುವಾಗಿ ಮಾತನಾಡಿದರೆ ಕನೇರಿ ಮಠಕ್ಕೆ ಬಂದು ನಿಮಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದರು.
ಡಾ.ರವಿಕುಮಾರ ಬಿರಾದಾರ ಮಾತನಾಡಿ, ಶ್ರೀಗಳ ಪೂರ್ವಾಶ್ರಮ ಹೆಸರು ಉಲ್ಲೇಖಿಸಿ ವಾಗ್ದಾಳಿ ನಡೆಸಿ, ಬಾಪುಗೌಡ ಮೇಟಿ ತಾವು ಮಾತನಾಡುತ್ತಿಲ್ಲ, ಆರ್. ಎಸ್.ಎಸ್, ಬಿಜೆಪಿ ಮಾತನಾಡಿಸುತ್ತಿದ್ದಾರೆ, ಲಿಂಗಾಯತ ಮಠದಲ್ಲಿ ಜನಿವಾರ ಹಾಕಿಸುವ ಕೆಲಸ ಮಾಡಿದ್ದಾರೆ, ಬಸವಾದಿ ಶರಣರ ನಂತರ ಡಾ.ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ, ಸುಪ್ರೀಂ ಕೋರ್ಟ್ ನಿಂದ ಅನಾಗರಿಕ ಎಂದು ಕರೆಸಿಕೊಂಡ ಇವನ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ದಲಿತ ಮುಖಂಡ ಚನ್ನು ಕಟ್ಟಿಮನಿ ಮಾತನಾಡಿ, ಅಪಾರ ಜ್ಞಾನಿಯಾಗಿದ್ದ ಡಾ.ಅಂಬೇಡ್ಕರ್ ಮನುಸ್ಮೃತಿಯನ್ನು ಅರಿತು ಅದನ್ನು ಸುಟ್ಟು ಹಾಕಿದ್ದರು. ಹಿಂದುತ್ವಕ್ಕೆ ಪೆಟ್ಟು ಕೊಟ್ಟುವರು ಎಂ.ಬಿ. ಪಾಟೀಲರು. ಹೀಗಾಗಿ ಎಂ.ಬಿ.ಪಾಟೀಲರ ಬಗ್ಗೆ ಅಪಪ್ರಚಾರ ಮಾಡಲಾಗುತ್ತದೆ ಎಂದರು.
ಬಹಿರಂಗ ಚರ್ಚೆಗೆ ಬನ್ನಿ
ಅಹಿಂದ ಮುಖಂಡ ಎಂ.ಎಸ್. ಪಾಟೀಲ ಗಣಿಹಾರ ಮಾತನಾಡಿ, ಸಂವಿಧಾನದಲ್ಲಿ ಮನುಸ್ಮೃತಿ ಅಂಶಗಳು ಇವೆ ಎಂದು ಕನೇರಿ ಶ್ರೀಗಳ ಹೇಳಿಕೆ ಖಂಡನೀಯ, ಸಂವಿಧಾನದಲ್ಲಿ ಮನುಸ್ಮೃತಿ ಇರುವ ಬಗ್ಗೆ ಬಹಿರಂಗ ಚರ್ಚೆ ಬರಲಿ. ಇಲ್ಲವಾದರೆ ಕ್ಷಮೆಯಾಚನೆ ಮಾಡಲಿ ಎಂದು ಸವಾಲು ಹಾಕಿದರು.
ಸಂವಿಧಾನವು ಸಮಸಮಾಜಕ್ಕಾಗಿ ಇದೆ. ಸಮಾನವಾದ ಅವಕಾಶಗಳನ್ನು ಕಲ್ಪಿಸಲಿದೆ ಸಂವಿಧಾನದಲ್ಲಿ ಮನುಸ್ಮೃತಿ ಇದೆ ಎಂದು ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಸ್ವಾಮೀಜಿಗಳಾಗಿ ಮಾಡಬೇಕಾದ ಕೆಲಸದ ಬದಲಿಗೆ ಬೇರೆಯದ್ದೆ ಕೆಲಸದಲ್ಲಿ ತೊಡಗಿದ್ದಾರೆ.
ಕನೇರಿ ಸ್ವಾಮೀಜಿಗಳೇ, ಸಚಿವ ಎಂಬಿಪಿ ಅವರ ಜೊತೆ ಹತ್ತು ನಿಮಿಷ ಕುಳಿತು ಚರ್ಚೆ ಮಾಡಿ, ನಿವೇ ಪರಿವರ್ತನೆಯಾಗುತ್ತಿರೀ….ಅಷ್ಟೊಂದು ಆಳವಾಗಿ ಅಧ್ಯಯನ ಮಾಡಿದ್ದಾರೆ, ನೀವು ಎಳ್ಳಷ್ಟೂ ಅಧ್ಯಯನ ಮಾಡಿಲ್ಲ ಎಂದರು.
ಮುಖಂಡರಾದ ನಾಗರಾಜ ಲಂಬು, ರಾಜು ತೊರವಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಾಹಿತಿ ಇರದ ಸಿಎಂ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ

ಅಗ್ನಿತತ್ವ ಮತ್ತು ವಾಯು ತತ್ವ

ನಾವು ಅಡಪೆಚ್ಚುಗಳ ಭಾಜಪ ಮತ್ತು ಕೈ ಪಾಳೆಯದವರೇ..?

ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 06,2026

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಾಹಿತಿ ಇರದ ಸಿಎಂ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ
    In (ರಾಜ್ಯ ) ಜಿಲ್ಲೆ
  • ಕನೇರಿ ಶ್ರೀಗಳ ವಿರುದ್ದ ಪಾಟೀಲ ಟೀಕಾ ಪ್ರಹಾರ
    In (ರಾಜ್ಯ ) ಜಿಲ್ಲೆ
  • ಅಗ್ನಿತತ್ವ ಮತ್ತು ವಾಯು ತತ್ವ
    In ವಿಶೇಷ ಲೇಖನ
  • ನಾವು ಅಡಪೆಚ್ಚುಗಳ ಭಾಜಪ ಮತ್ತು ಕೈ ಪಾಳೆಯದವರೇ..?
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 06,2026
    In ದಿನಪತ್ರಿಕೆ, ವಿಶೇಷ ಲೇಖನ
  • ಕೃಷಿ ಸಂಸ್ಕೃತಿ ಪುನಶ್ಚೇತನಕ್ಕೆ ಬಜೆಟ್‌ನ ಶೇ.10 ಮೀಸಲಿಡಿ
    In (ರಾಜ್ಯ ) ಜಿಲ್ಲೆ
  • ಪತ್ರಕರ್ತ ಖಾಜು ಸಿಂಗೆಗೋಳ ಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ರೈತರ ಸಾಲಮನ್ನಾ & ಉಚಿತ ಮೇವು ಒದಗಿಸಲು ಮನವಿ
    In (ರಾಜ್ಯ ) ಜಿಲ್ಲೆ
  • ರೈತ ನಾಯಕರ ಬಂಧನಕ್ಕೆ ವಿರೋಧ: ಹೆದ್ದಾರಿ ತಡೆದು ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಅರಣ್ಯ ಭೂಮಿ ಆಕ್ರಮ ಮಂಜೂರಾತಿ ತನಿಖೆಗೆ ಎಸ್ಐಟಿ ರಚನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.