Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕನೇರಿ ಶ್ರೀಗಳ ವಿರುದ್ದ ಪಾಟೀಲ ಟೀಕಾ ಪ್ರಹಾರ

ಅಗ್ನಿತತ್ವ ಮತ್ತು ವಾಯು ತತ್ವ

ನಾವು ಅಡಪೆಚ್ಚುಗಳ ಭಾಜಪ ಮತ್ತು ಕೈ ಪಾಳೆಯದವರೇ..?

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಅಗ್ನಿತತ್ವ ಮತ್ತು ವಾಯು ತತ್ವ
ವಿಶೇಷ ಲೇಖನ

ಅಗ್ನಿತತ್ವ ಮತ್ತು ವಾಯು ತತ್ವ

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ರಕ್ತವನ್ನು ಶುದ್ಧೀಕರಿಸಲು ನಮಗೆ ಶುದ್ಧವಾದ ಆಮ್ಲಜನಕದ ಅವಶ್ಯಕತೆ ಇದೆ. ಕೋವಿಡ್ ಸಮಯದಲ್ಲಂತೂ ನಮಗೆ ಆಮ್ಲಜನಕದ ಅವಶ್ಯಕತೆಯ ಅರಿವು ಉಂಟಾಗಿದ್ದು, ಎಷ್ಟೋ ಜನರು ಆಮ್ಲಜನಕ ದೊರೆಯದೆ ಸತ್ತು ಹೋಗಿದ್ದರು. ಈ ಪ್ರಕೃತಿಯ ಋಣವನ್ನು ತೀರಿಸಲಾಗದಷ್ಟು ನಾವು ಆಭಾರವನ್ನು ವ್ಯಕ್ತಪಡಿಸಿದ್ದು ಕೂಡ ಇದೇ ಸಮಯದಲ್ಲಿ.

– ವೀಣಾ ಹೇಮಂತಗೌಡ ಪಾಟೀಲ್.
ಮುಂಡರಗಿ – ಗದಗ

ಉದಯರಶ್ಮಿ ದಿನಪತ್ರಿಕೆ

ಪಂಚ ಮಹಾಭೂತಗಳಲ್ಲಿ ಒಂದಾಗಿರುವ ಅಗ್ನಿ ತತ್ವವು ನಮ್ಮನ್ನು ಆವರಿಸಿದೆ. ಬೇಸಿಗೆಯ ಬಿಸಿಲು ನಮಗೆ, ಪಶು ಪಕ್ಷಿಗಳಿಗೆ ಬಾಯಾರಿಸಿ ದಣಿವನ್ನು ಮೂಡಿಸಿದ ಸಮಯದಲ್ಲಿ ಬಿಸಿಲನ್ನು ಬಯ್ಯದವರು ಇಲ್ಲ. ಯಪ್ಪಾ ಏನ್ ಸೆಕೆ ಎಂದು ನಿಡುಸುಯ್ಯದವರೇ ಇಲ್ಲ.
ಆದರೂ ಬಿಸಿಲಿನ ಅವಶ್ಯಕತೆ ನಮ್ಮೆಲ್ಲರಿಗೂ ಇದೆ. ಪಾಶ್ಚಾತ್ಯ ದೇಶಗಳಲ್ಲಿ ಬಿಸಿಲೆ ಕಾಣದ ಪರಿಸ್ಥಿತಿ ಇದ್ದು ಅಲ್ಲಿನ ಜನರು ತಮ್ಮ ದೇಹಕ್ಕೆ ಉಂಟಾಗುವ ಚರ್ಮದ ತೊಂದರೆಗಳಿಂದ ರಕ್ಷಿಸಿಕೊಳ್ಳಲು ಭಾರತ ದೇಶಕ್ಕೆ ಬಂದು ಇಲ್ಲಿಯ ಬೀಚುಗಳಲ್ಲಿ ಅರೆನಗ್ನರಾಗಿ ಮಲಗಿ ಬಿಸಿಲು ಕಾಯಿಸಿಕೊಳ್ಳುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಗಳಿಸಿಕೊಳ್ಳುತ್ತಾರೆ.
ನಮ್ಮ ಅನ್ನದಾತನಾದ ರೈತನಿಗೂ ಬಿಸಿಲಿನ ಮಹತ್ವ ಗೊತ್ತು. ಚಳಿಗಾಲದ ಇಳುವರಿಯನ್ನು ಪಡೆದ ನಂತರ ಖಾಲಿಯಾದ ಹೊಲವನ್ನು ರೈತ ಹದ ಮಾಡುವನು. ಹದ ಮಾಡುವುದು ಎಂದರೆ ಮಣ್ಣನ್ನು ಮೇಲೆ ಕೆಳಗೆ ಮಾಡುವುದು ಎಂದರ್ಥ. ಹೀಗೆ ಮಣ್ಣನ್ನು ಮೇಲೆ ಕೆಳಗೆ ಮಾಡಿ ಅದಕ್ಕೆ ಬಿಸಿಲಿನ ಝಳ ಬಡಿಸುವುದು ಮುಂದಿನ ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂಬ ದೂರದೃಷ್ಟಿಯಿಂದ.


ನಮ್ಮ ದೇಹಕ್ಕೆ ಅವಶ್ಯಕವಾದ ವಿಟಮಿನ್ ಡಿ ಮಣ್ಣಿಗೂ ಕೂಡ ಅತ್ಯವಶ್ಯಕ. ನಾವು ಹೊಲದಲ್ಲಿ ಬೆಳೆಯುವ ಬೆಳೆಗಳು, ಧಾನ್ಯಗಳು, ತರಕಾರಿಗಳಿಗೆ ವಿಟಮಿನ್ ಡಿ ತಾಕತ್ತನ್ನು ನೀಡಲು ಬೇಸಿಗೆಯ ಬಿಸಿಲು ಈ ಮಣ್ಣಿಗೆ ದೊರೆಯಲೇಬೇಕು. ಆದ್ದರಿಂದಲೇ ಅನುಭವಸ್ತನಾದ ರೈತನು ಮಣ್ಣನ್ನು ರಂಟೆ ಹೊಡೆದು ಮೇಲೆ ಕೆಳಗೆ ಮಾಡಿ ಮಣ್ಣಿನ ಹೆಂಟೆಗಳನ್ನು ಒಡೆದು ನೆಲವನ್ನು ಹದವಾಗಿಸುತ್ತಾನೆ.
ಒಂದೇ ಸಮನೆ ಮಳೆ ಹೊಡೆಯುತ್ತಿರುವಾಗ, ಚಳಿಯಿಂದ ಹಲ್ಲು ಕಟಗರಿಸುವಾಗ ಸೂರ್ಯನ ಬಿಸಿಲನ್ನು ಬಯಸುವ ನಾವು ಬೇಸಿಗೆ ಕಾಲದಲ್ಲಿ ಬಿಸಿಲು ಬಂದಾಗ ಅಯ್ಯೋ ಬಿಸಿಲು ಎಂದು ಹಲಬುವುದೇಕೆ? ಬಿಸಿಲನ್ನು ಅದು ಇರುವ ಹಾಗೆಯೇ ಇಂದು ನಾವು ಸ್ವೀಕರಿಸಿದರೆ ಮುಂದೆ ವಯಸ್ಸಾದ ಕಾಲದಲ್ಲಿ ವಿಟಮಿನ್ ಡಿ ಯ ಕೊರತೆಯಿಂದ ಬಳಲುವುದು ತಪ್ಪುತ್ತದೆ.
ಅಗ್ನಿ ತತ್ವವನ್ನು ಪ್ರತಿಪಾದಿಸುವ ಸೂರ್ಯ ನಮಗೆ ಬಿಸಿಲನ್ನು ನೀಡುವ ಮೂಲಕ ರೋಗ ರುಜಿನಗಳನ್ನು ದೂರವಿಡುತ್ತಾನೆ. ಕತ್ತಲಲ್ಲಿ ರೋಗರುಜಿನಗಳು ಹೆಚ್ಚು. ಗಾದೆ ಮಾತೆ ಹೇಳಿಲ್ಲವೇ ‘ ಕ್ವಾಣಿ ಕೂಸು ಕೊಳೀತು ಓಣಿ ಕೂಸು ಬೆಳೀತು’ ಎಂದು. ಆದ್ದರಿಂದ ಬೇಸಿಗೆಯ ನಾಲ್ಕು ತಿಂಗಳ ಕಾಲ ಬಿಸಿಲನ್ನು ಅನುಭವಿಸಿ ಅದ್ಭುತವನ್ನು ನಮ್ಮೊಳಗೆ ಒಂದಾಗಿಸಿಕೊಳ್ಳಬೇಕು.
ನಮ್ಮ ದೇಹದ ಅಡುಗೆ ಕೋಣೆ ನಮ್ಮ ಜಠರವಾಗಿದ್ದು ಅಲ್ಲಿ ಜಠರಾಗ್ನಿಯು ಒಲೆ ಇದ್ದಂತೆ. ಬೇಸಿಗೆಯಲ್ಲಿ ಹೊರಗೆ ಸುತ್ತಾಡಿ ಬರುವ ಮಕ್ಕಳು ಹಸಿವಿನಿಂದ ಆಹಾರವನ್ನು ಹೆಚ್ಚು ಸೇವಿಸುತ್ತವೆ ಇದಕ್ಕೆ ಕಾರಣ ಹೊರಗಿನ ಅಗ್ನಿಯು ನಮ್ಮ ದೇಹದ ಒಳಗಿನ ಜಠರಾಗ್ನಿಯನ್ನು ಉದ್ದೀಪಿಸುತ್ತದೆ. ಈ ಸಮಯದಲ್ಲಿ ಉಂಡ ಆಹಾರವು ಅತ್ಯಂತ ಸರಳವಾಗಿ ಜೀರ್ಣವಾಗಲು ಕಾರಣ ದೇಹದಲ್ಲಿರುವ ತೀಕ್ಷ್ಣ ಅಗ್ನಿ ತತ್ವ.


ಬಳ್ಳಾರಿ, ರಾಯಚೂರು, ಗುಲ್ಬರ್ಗದಂತಹ ಬಿಸಿಲಿನ ಪ್ರದೇಶಗಳಲ್ಲಿ ಜನರು ಆಹಾರದಲ್ಲಿ ಖಾರವನ್ನು ಹೆಚ್ಚಾಗಿ ಸೇವಿಸಲು ಕಾರಣ ಹೊರಗಿನ ಬಿಸಿಲಿನ ಅಗ್ನಿ ಮತ್ತು ದೇಹದ ಒಳಗಿನ ಅಗ್ನಿಯ ಸಮತೋಲನವನ್ನು ಕಾಪಾಡಿಕೊಳ್ಳುವ ಪ್ರಕ್ರಿಯೆ ಅವರಲ್ಲಿ ಪ್ರಕೃತಿದತ್ತವಾಗಿ ಬಂದಿರುತ್ತದೆ. ಇನ್ನಿತರ ಪ್ರದೇಶಗಳಲ್ಲಿ ಸುಲಭವಾಗಿ ಜೀರ್ಣವಾಗಲು ಸಾಧ್ಯವಾಗದ ಮಂಡಕ್ಕಿ ಮಿರ್ಚಿಯಂತಹ ಆಹಾರ ಪದಾರ್ಥಗಳು ಅವರಿಗೆ ಅತ್ಯಂತ ಸರಳವಾಗಿ ಜೀರ್ಣವಾಗಲು ಕಾರಣ ಅಗ್ನಿ ತತ್ವದ ಸಮರ್ಪಕ ನಿರ್ವಹಣೆಯ ನಿಸರ್ಗ ಸಹಜ ಸಾಮರ್ಥ್ಯ ಅವರಿಗೆ ಇರುವುದು.
ಆದ್ದರಿಂದಲೇ ಮಕ್ಕಳನ್ನು ಬಿಸಿಲಿನಲ್ಲಿ ಆಡಲು ಕಳುಹಿಸಬೇಕು. ಬಿಸಿಲಿನಲ್ಲಿ ಆಡುವ ಮೂಲಕ ಮಕ್ಕಳು ಎಲ್ಲ ರೀತಿಯ ರೋಗರುಜಿನಗಳಿಂದ ಮುಕ್ತರಾಗುವ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಬೇಸಿಗೆ ರಜೆಯನ್ನು ನೀಡುವುದು ಕೂಡ ಇದೇ ಕಾರಣಕ್ಕೆ.
ನಮ್ಮ ಬದುಕಿಗೆ ಮುಖ್ಯವಾದ ಇನ್ನೊಂದು ತತ್ವ ವಾಯು ತತ್ವ. ಆರ್ಟ್ ಆಫ್ ಲಿವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ಹೇಳುವಂತೆ ಯಾವ ರೀತಿ ಮೀನು ನೀರಿನಲ್ಲಿ ಸಹಜವಾಗಿ ಬದುಕುತ್ತದೆಯೋ ಹಾಗೆಯೇ ನಾವು ವಾಯುವಿನಲ್ಲಿ ಬದುಕುತ್ತಿದ್ದೇನೆ. ಗಾಳಿಯೇ ಆಡದ ಒಂದು ಕೋಣೆಯಲ್ಲಿ ಕೆಲವೇ ನಿಮಿಷಗಳು ಇರಲು ನಮ್ಮಿಂದ ಸಾಧ್ಯವಿಲ್ಲ ಎಂಬುದರ ಅರಿವಾದಾಗ ಮಾತ್ರ ನಮಗೆ ಗಾಳಿಯ ಅವಶ್ಯಕತೆಯ ಅರಿವು ಉಂಟಾಗುತ್ತದೆ.
ನಮ್ಮ ದೇಹದಲ್ಲಿ ಹರಿದಾಡುವ ಗಾಳಿಯು ನಮ್ಮ ಶ್ವಾಸಕೋಶಗಳನ್ನು ಮತ್ತು ಹೃದಯವನ್ನು ನಿಯಂತ್ರಿಸುತ್ತದೆ , ಯಾರಾದರೂ ಎಚ್ಚರ ತಪ್ಪಿದಾಗ ಇಲ್ಲವೇ ಅಸ್ವಸ್ಥರಾದಾಗ ಅವರಿಗೆ ಮುಖ್ಯವಾಗಿ ಗಾಳಿಯ ಅವಶ್ಯಕತೆ ಇರುವುದರಿಂದಲೇ ಅಂತಹ ವ್ಯಕ್ತಿಗಳನ್ನು ಜನಜಂಗುಳಿಯಿಂದ ದೂರ ಸರಿಸಿ ಪೇಪರ್ನಿಂದ ಗಾಳಿ ಹಾಕುವುದು ಇಲ್ಲವೇ ಫ್ಯಾನ್ ಹಾಕುವುದು ಮಾಡಿ ಅವರಿಗೆ ವಾಯುವನ್ನು ಒದಗಿಸುತ್ತೇವೆ.
ರಕ್ತವನ್ನು ಶುದ್ಧೀಕರಿಸಲು ನಮಗೆ ಶುದ್ಧವಾದ ಆಮ್ಲಜನಕದ ಅವಶ್ಯಕತೆ ಇದೆ. ಕೋವಿಡ್ ಸಮಯದಲ್ಲಂತೂ ನಮಗೆ ಆಮ್ಲಜನಕದ ಅವಶ್ಯಕತೆಯ ಅರಿವು ಉಂಟಾಗಿದ್ದು, ಎಷ್ಟೋ ಜನರು ಆಮ್ಲಜನಕ ದೊರೆಯದೆ ಸತ್ತು ಹೋಗಿದ್ದರು. ಈ ಪ್ರಕೃತಿಯ ಋಣವನ್ನು ತೀರಿಸಲಾಗದಷ್ಟು ನಾವು ಆಭಾರವನ್ನು ವ್ಯಕ್ತಪಡಿಸಿದ್ದು ಕೂಡ ಇದೇ ಸಮಯದಲ್ಲಿ.
ಮಕ್ಕಳ ಬದುಕಿನಲ್ಲಿ ಪಂಚ ತತ್ವಗಳ ಪಾತ್ರ(ವಾಯು ಮತ್ತು ಅಗ್ನಿ)
ಮಕ್ಕಳು ಪ್ರಕೃತಿಯಲ್ಲಿ ಒಂದಾಗಿ ಜೋರಾಗಿ ಓಡಿದಾಗ ಓಡುತ್ತಾ ಆಟವಾಡಿದಾಗ, ಏದುಸಿರು ಬಿಡುವಂತೆ ಆದಾಗ ಅವರ ಶ್ವಾಸಕೋಶಗಳಲ್ಲಿ ಹೆಚ್ಚಿನ ಆಮ್ಲಜನಕ ಪೂರೈಕೆಯಾಗಿ ರಕ್ತ ಚಲನೆ ಸರಾಗವಾಗಿ ಆಗುತ್ತದೆ. ದೇಹದ ಎಲ್ಲಾ ಅಂಗಗಳಿಗೂ ಆಮ್ಲಜನಕದ ನಿರಂತರ ಸರಬರಾಜು ಆಗುವುದರಿಂದ ವ್ಯಕ್ತಿಯು ಆರೋಗ್ಯವಂತನಾಗುತ್ತಾನೆ. ಇನ್ನು ಹಿರಿಯರು ಕೂಡ ವಾಕಿಂಗ್ ಮಾಡಿ ಬಂದಾಗ ಅವರಿಗೆ ದೊರೆಯುವ ಆಹ್ಲಾದಕರ ಅನುಭವ ಬೇರಾವ ಕೆಲಸ ಕಾರ್ಯಗಳಲ್ಲಿ ದೊರೆಯದು ಎಂದು ವ್ಯಕ್ತಪಡಿಸಲು ಕಾರಣ ಮುಂಜಾನೆಯ ಶುದ್ಧ ವಾತಾವರಣದಲ್ಲಿ ಹೆಚ್ಚಿನ ಪ್ರಮಾಣದ ಆಮ್ಲಜನಕ ದೊರೆತು ಅದು ಅವರ ಮನಸ್ಸು ಮತ್ತು ಮೆದುಳನ್ನು ಶಾಂತವಾಗಿಸುತ್ತದೆ.
ಕೋಣೆಯಲ್ಲಿ ಫ್ಯಾನ್ ಹಾಕಿಕೊಂಡು ಮಲಗಿದಾಗ ಕೊಂಚ ಸಮಯದ ನಂತರ ಫ್ಯಾನ್ ನ ಗಾಳಿ ನಮಗೆ ಬಿಸಿಯಾಗಿ ತೋರುತ್ತದೆ, ದೇಹ ಜಡತೆಯನ್ನು ಹೊಂದುತ್ತದೆ ಅದೇ ಮನೆಯ ಹೊರಗಿನ ಅಂಗಳದಲ್ಲಿ ನಿಸರ್ಗ ಸಹಜವಾದ ಗಾಳಿಗೆ ಮೈಯನ್ನು ಒಡ್ಡಿದಾಗ ಮನಸ್ಸು ಸಂತಸದ ಕಡಲಾಗಿ ನೆಮ್ಮದಿ ಆವರಿಸುತ್ತದೆ.
ವಾಯು ಮತ್ತು ಅಗ್ನಿಗಳು ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುವ ಮೂಲಕ ನಮಗೆ ಹೆಚ್ಚಿನ ಶಕ್ತಿಯನ್ನು ಕೊಡ ಮಾಡುತ್ತವೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕನೇರಿ ಶ್ರೀಗಳ ವಿರುದ್ದ ಪಾಟೀಲ ಟೀಕಾ ಪ್ರಹಾರ

ನಾವು ಅಡಪೆಚ್ಚುಗಳ ಭಾಜಪ ಮತ್ತು ಕೈ ಪಾಳೆಯದವರೇ..?

ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 06,2026

ಕೃಷಿ ಸಂಸ್ಕೃತಿ ಪುನಶ್ಚೇತನಕ್ಕೆ ಬಜೆಟ್‌ನ ಶೇ.10 ಮೀಸಲಿಡಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕನೇರಿ ಶ್ರೀಗಳ ವಿರುದ್ದ ಪಾಟೀಲ ಟೀಕಾ ಪ್ರಹಾರ
    In (ರಾಜ್ಯ ) ಜಿಲ್ಲೆ
  • ಅಗ್ನಿತತ್ವ ಮತ್ತು ವಾಯು ತತ್ವ
    In ವಿಶೇಷ ಲೇಖನ
  • ನಾವು ಅಡಪೆಚ್ಚುಗಳ ಭಾಜಪ ಮತ್ತು ಕೈ ಪಾಳೆಯದವರೇ..?
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 06,2026
    In ದಿನಪತ್ರಿಕೆ, ವಿಶೇಷ ಲೇಖನ
  • ಕೃಷಿ ಸಂಸ್ಕೃತಿ ಪುನಶ್ಚೇತನಕ್ಕೆ ಬಜೆಟ್‌ನ ಶೇ.10 ಮೀಸಲಿಡಿ
    In (ರಾಜ್ಯ ) ಜಿಲ್ಲೆ
  • ಪತ್ರಕರ್ತ ಖಾಜು ಸಿಂಗೆಗೋಳ ಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
  • ರೈತರ ಸಾಲಮನ್ನಾ & ಉಚಿತ ಮೇವು ಒದಗಿಸಲು ಮನವಿ
    In (ರಾಜ್ಯ ) ಜಿಲ್ಲೆ
  • ರೈತ ನಾಯಕರ ಬಂಧನಕ್ಕೆ ವಿರೋಧ: ಹೆದ್ದಾರಿ ತಡೆದು ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಅರಣ್ಯ ಭೂಮಿ ಆಕ್ರಮ ಮಂಜೂರಾತಿ ತನಿಖೆಗೆ ಎಸ್ಐಟಿ ರಚನೆ
    In (ರಾಜ್ಯ ) ಜಿಲ್ಲೆ
  • ಸ್ಲಂ ಬೋರ್ಡ ಮನೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.