Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಧೂಳು, ಕಲ್ಲುಮಣ್ಣಿನ ರಸ್ತೆಯಲ್ಲಿ ಸಂಚಾರ ದುಸ್ತರ

ಕಡಿಮೆ ಅವಧಿಯಲ್ಲಿ ಅಧಿಕ ಓದುಗರ ಮನಗೆದ್ದ ’ಉದಯರಶ್ಮಿ’

ಉಕ ಮಕ್ಕಳ ಬದುಕು ಬೆಳಗುತ್ತಿರುವ ಬಿಎಲ್ಡಿಇ ಸಂಸ್ಥೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಉಕ ಮಕ್ಕಳ ಬದುಕು ಬೆಳಗುತ್ತಿರುವ ಬಿಎಲ್ಡಿಇ ಸಂಸ್ಥೆ
(ರಾಜ್ಯ ) ಜಿಲ್ಲೆ

ಉಕ ಮಕ್ಕಳ ಬದುಕು ಬೆಳಗುತ್ತಿರುವ ಬಿಎಲ್ಡಿಇ ಸಂಸ್ಥೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬಿ.ಎಲ್.ಡಿ.ಇ ಸಂಸ್ಥಾಪನ ದಿನ ಕಾರ್ಯಕ್ರಮದಲ್ಲಿ ಆಲಮೇಲ ವಿರಕ್ತಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕನ್ನಡ ಭಾಷಾಭಿಮಾನದ ಪ್ರೇರಣೆಯಿಂದ ಪ್ರಾರಂಭವಾದ ಬಿ.ಎಲ್.ಡಿ.ಇ ಸಂಸ್ಥೆ ಉತ್ತರ ಕರ್ನಾಟಕದ ಮಕ್ಕಳ ಬದುಕು ಬೆಳಗುತ್ತಿದೆ ಎಂದು ಆಲಮೇಲ ವಿರಕ್ತಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಹೇಳಿದರು.
ಶುಕ್ರವಾರ ನಗರದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ನಡೆದ ಬಿ. ಎಲ್. ಡಿ. ಇ ಸಂಸ್ಥಾಪನ ದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಹಾರಾಷ್ಟ್ರದ ಪ್ರಭಾವದಲ್ಲಿದ್ದ ಮುಂಬಯಿ ಕರ್ನಾಟಕದಲ್ಲಿದ್ದ ವಿಜಯಪುರದಲ್ಲಿ ಅಂದು ಮರಾಠಿ ಪ್ರಭಾವವಿತ್ತು. ಕನ್ನಡ ಕಲಿಯುವುದು ಮತ್ತು ಶಿಕ್ಷಣ ಪಡೆಯಲು ಇಲ್ಲಿ ಅಷ್ಟೊಂದು ಅವಕಾಶಗಳಿರಲಿಲ್ಲ. ಅಂಥ ಸಮಯದಲ್ಲಿ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರು ಸಂಸ್ಥೆಯನ್ನು ಪ್ರಾರಂಭಿಸಿದರು. ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಅರಟಾಳು ರುದ್ರಗೌಡರು, ಶಿರಸಂಗಿ ಲಿಂಗರಾಜರು ಸೇರಿ ಹಲವು ಮಹನೀಯರಿಂದ ಈ ಪ್ರದೇಶದಲ್ಲಿ ಶಿಕ್ಷಣ ಕ್ರಾಂತಿಯಾಗಿದೆ. ಬಿ.ಎಲ್.ಡಿ.ಇ ಸಂಸ್ಥೆ ಅಭಿವೃಧಿಗೆ ಕಾರಣರಾದ ಬಂಥನಾಳ ಶಿವಯೋಗಿಗಳು, ಶ್ರೀಮತಿ ಬಂಗಾರಮ್ಮ ಸಜ್ಜನ ಅವರು ಹಾಗೂ ಬಿ. . ಪಾಟೀಲ ಅವರನ್ನು ನಾವು ಸದಾ ಸ್ಮರಿಸಿಕೊಳ್ಳಬೇಕು. ಹಳಕಟ್ಟಿಯವರು ವಚನಗಳನ್ನು ರಕ್ಷಿಸುವುದರ ಜೊತೆಗೆ ಈ ನೆಲಕ್ಕೆ ಅಕ್ಷರಗಳನ್ನು ಬಿತ್ತಿದ್ದಾರೆ. ಇಂದು ಈ ಸಂಸ್ಥೆ ನಾಡಿನ ನಾಡಿ ಮಿಡಿತವಾಗಿದೆ. ಇಲ್ಲಿನ ಪ್ರದೇಶ ಶಿಕ್ಷಣಮಯವಾಗಿ ನಮ್ಮ ಮಕ್ಕಳು ವಿದ್ಯಾವಂತರಾಗಿದ್ದಾರೆ. ನಮಗೆಲ್ಲ ಕಲಾದಗಿ ಮೊದಲು ಜಿಲ್ಲಾ ಕೇಂದ್ರವಾಗಿತ್ತು. ನಂತರ ವಿಜಯಪುರ ಜಿಲ್ಲೆಯಾದಾಗ ಇಲ್ಲಿ ಲಿಂಗ, ಜಂಗಮವಾಗಿ ಅದನ್ನು ಪರಿವರ್ತಿಸಿದ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ. ಅವರಿಂದ ಈ ಜ್ಯೋತಿಯನ್ನು ಮುಂದೆ ಬೆಳಗಿಸಿದವರು ಸಂಗನಬಸವ ಶಿವಯೋಗಿಗಳು. ಮುಂದೆ ಬಿ. ಎಂ. ಪಾಟೀಲ ಅವರು ಈ ತೇರನ್ನು ಎಳೆದಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಅಶೋಕ ಜಿ. ವಾರದ ಮಾತನಾಡಿ, ಹಳಕಟ್ಟಿ ಮತ್ತು ಬಂಥನಾಳ ಶಿವಯೋಗಿಗಳ ಆಶಯದಂತೆ ಬಿ. ಎಂ. ಪಾಟೀಲ ಅವರು ಶಿಕ್ಷಣ ಕ್ರಾಂತಿ ಮಾಡಿದರು. ಎಂಜಿನಿಯರಿಂಗ್, ಮೆಡಿಕಲ್, ನರ್ಸಿಂಗ್ ಕಾಲೇಜುಗಳನ್ನು ಪ್ರಾರಂಭಿಸಿದರು. ದುಡ್ಡಿಗಾಗಿ ಶಿಕ್ಷಣ ಎನ್ನುವ ಇಂದಿನ ವಾತಾವರಣದಲ್ಲಿ ಬಿ. ಎಲ್. ಡಿ. ಇ ಸಂಸ್ಥೆಯು ಉತ್ತಮ ನಾಗರಿಕರನ್ನು ರೂಪಿಸುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಎ. ವಿ. ಎಸ್ ಹೈಟೆಕ್ ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರದ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಭಾರತೀಯ ಲಿಂಗಾಯತ ಅಭಿವೃದ್ಧಿ ಶಿಕ್ಷಣ ಸಂಸ್ಥೆ ಸಾಮಾಜಿಕ ಸುಧಾರಣೆಯ ಸಂಕೇತ ಮತ್ತು ಈ ಭಾಗದ ಅಭಿವೃದ್ಧಿಯ ದ್ಯೋತಕವಾಗಿದೆ. ಶತಮಾನದ ಹಿಂದೆ ಈ ಸಂಸ್ಥೆ ಹಳಕಟ್ಟಿ ಅವರಿಂದ ಪ್ರಾರಂಭವಾಗಿ ಬಂಥನಾಳ ಸಂಗನಬಸವ ಶಿವಯೋಗಿಗಳಿಂದ ಬಲಗೊಂಡು, ಬಿ. ಎಂ. ಪಾಟೀಲ ಅವರಿಂದ ಉನ್ನತ ಸ್ಥಾನಕ್ಕೇರಿದೆ. ಈಗ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಅವರ ಮುಂದಾಳತ್ವದಲ್ಲಿ ಆಧುನಿಕ ಹೊಸ ಯುಗ ಪ್ರವೇಶಿಸಿದೆ. ಬಂಗಾರಮ್ಮ ಸಜ್ಜನರಿಂದ ಹಿಡಿದು ಅನೇಕ ಮಹನೀಯರು ಭೂಮಿ ನೀಡಿ ಮಹತ್ತರ ಕೆಲಸ ಮಾಡಿದ್ದಾರೆ. 2008ರಲ್ಲಿ ಇದು ಡೀಮ್ಡ್ ವಿಶ್ವ ವಿದ್ಯಾಲಯವಾಗಿ ಇಂದು ಹೆಮ್ಮರವಾಗಿ ಬೆಳೆದು ದೇಶದಲ್ಲೇ ಪ್ರತಿಷ್ಠಿತ ಸಂಸ್ಥೆಯಾಗಿ ನಿಂತಿದೆ. ನಮ್ಮ ಆಯುರ್ವೇದ ಕಾಲೇಜು ದೇಶದಲ್ಲಿಯೇ ನಾಲ್ಕನೆಯ ಸ್ಥಾನದಲ್ಲಿದೆ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಸದಸ್ಯ ಡಾ. ಎ. ಬಿ. ಪಾಟೀಲ ಮಾತನಾಡಿ, ತಮ್ಮ ತಂದೆ ಬಿ. ಆರ್. ಪಾಟೀಲ ಲಿಂಗದಳ್ಳಿ ಮತ್ತು ದಿ. ಬಿ. ಎಂ. ಪಾಟೀಲ ಅವರು ಕೃಷ್ಣ ಸುಧಾಮರ ರೀತಿಯಲ್ಲಿ ಬಾಂಧವ್ಯ ಹೊಂದಿದ್ದರು. ಸಂಸ್ಥೆಯ ಅಭಿವೃದ್ಧಿಯಲ್ಲಿ ಪ್ರಾಥಃಸ್ಮರಣೀಯರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿರುವ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಅವರು ಸಂಸ್ಥೆಯನ್ನು ಉತ್ತರೋತ್ತರವಾಗಿ ಅಭಿವೃದ್ಧಿ ಪಡಿಸುವ ಮೂಲಕ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಬಿ.ಎಲ್.ಡಿ.ಇ. ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ, ನಾನಾ ವಿಭಾಗಗಳ ಮುಖ್ಯಸ್ಥರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯ ಮಕ್ಕಳು ಸಂಸ್ಥಾಗೀತೆ ಹಾಡಿದರು. ಡಾ. ರೇಣುಕಾ ತೆನ್ಹಳ್ಳಿ, ಡಾ. ಡಿ. ಎನ್. ಧರಿ, ಡಾ.ಮಾನಸಾ ಪಂಚಾಕ್ಷರಿಮಠ ನಿರೂಪಿಸಿದರು. ಡಾ. ಮಲ್ಲಮ್ಮ ಬಿರಾದಾರ ವಂದಿಸಿದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಧೂಳು, ಕಲ್ಲುಮಣ್ಣಿನ ರಸ್ತೆಯಲ್ಲಿ ಸಂಚಾರ ದುಸ್ತರ

ಕಡಿಮೆ ಅವಧಿಯಲ್ಲಿ ಅಧಿಕ ಓದುಗರ ಮನಗೆದ್ದ ’ಉದಯರಶ್ಮಿ’

ಪ್ರತಿಭಾ ಪುರಸ್ಕಾರ: ಅರ್ಜಿ ಆಹ್ವಾನ

ವಿಜಯಪುರದಲ್ಲ ಗುಂಡಿನ ದಾಳಿ: ವ್ಯಕ್ತಿಯ ಬರ್ಬರ ಹತ್ಯೆ!

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಧೂಳು, ಕಲ್ಲುಮಣ್ಣಿನ ರಸ್ತೆಯಲ್ಲಿ ಸಂಚಾರ ದುಸ್ತರ
    In (ರಾಜ್ಯ ) ಜಿಲ್ಲೆ
  • ಕಡಿಮೆ ಅವಧಿಯಲ್ಲಿ ಅಧಿಕ ಓದುಗರ ಮನಗೆದ್ದ ’ಉದಯರಶ್ಮಿ’
    In (ರಾಜ್ಯ ) ಜಿಲ್ಲೆ
  • ಉಕ ಮಕ್ಕಳ ಬದುಕು ಬೆಳಗುತ್ತಿರುವ ಬಿಎಲ್ಡಿಇ ಸಂಸ್ಥೆ
    In (ರಾಜ್ಯ ) ಜಿಲ್ಲೆ
  • ಪ್ರತಿಭಾ ಪುರಸ್ಕಾರ: ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ವಿಜಯಪುರದಲ್ಲ ಗುಂಡಿನ ದಾಳಿ: ವ್ಯಕ್ತಿಯ ಬರ್ಬರ ಹತ್ಯೆ!
    In (ರಾಜ್ಯ ) ಜಿಲ್ಲೆ
  • ಮಾಹಿತಿ ಇರದ ಸಿಎಂ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಲಿ
    In (ರಾಜ್ಯ ) ಜಿಲ್ಲೆ
  • ಕನೇರಿ ಶ್ರೀಗಳ ವಿರುದ್ದ ಪಾಟೀಲ ಟೀಕಾ ಪ್ರಹಾರ
    In (ರಾಜ್ಯ ) ಜಿಲ್ಲೆ
  • ಅಗ್ನಿತತ್ವ ಮತ್ತು ವಾಯು ತತ್ವ
    In ವಿಶೇಷ ಲೇಖನ
  • ನಾವು ಅಡಪೆಚ್ಚುಗಳ ಭಾಜಪ ಮತ್ತು ಕೈ ಪಾಳೆಯದವರೇ..?
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ನವೆಂಬರ್ 06,2026
    In ದಿನಪತ್ರಿಕೆ, ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.