ವಿಜಯಪುರದಲ್ಲಿ ’ಕದಂಬ ಸೇನೆ’ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ನಿರ್ದೇಶನದ ’ಕಾಮನ್ ಮ್ಯಾನ್ ನಾನೇ ಸಿಎಂ’ ಕನ್ನಡ ಚಲನಚಿತ್ರ ಸೆ.25 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ಕದಂಬ ಸೇನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾಮಾನ್ಯನ ದ್ವನಿ ಅಧಿಕಾರದ ಗದ್ದುಗೆ ಏರಿದಾಗ ಏನಾಗುತ್ತದೆ ಎಂಬುದನ್ನು ತಿಳಿಸುವ
ಕಾಮನ್ ಮ್ಯಾನ್ ನಾನೇ ಸಿಎಂ ಚಲನಚಿತ್ರ ತನ್ನದೇ ಆದ ರಾಜಕೀಯ ಕ್ರಾಂತಿಯನ್ನು ತೆರೆಯ ಮೇಲೆ ಅನಾವರಣಗೊಳಿಸಿದೆ. ಕನ್ನಡಿಗರಿಗೆ ಈ ಚಲನಚಿತ್ರ ರಾಜಕೀಯ ಬದಲಾವಣೆಗಳನ್ನು ತರಲು ಸ್ಪೂರ್ತಿ ಸಿಕ್ಕಂತಾಗುತ್ತದೆ ಎಂದರು.
ಸುರಭಿ ಫಿಲಂಸ್ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರು ಕಥೆ ನಿರ್ಮಾಪಕರು ಮತ್ತು ಮುಖ್ಯಮಂತ್ರಿ ಪಾತ್ರದಲ್ಲಿ ವಿಶಿಷ್ಟ ವಾಗಿ ಅಭಿನಯಿಸಿರುವ ರಂಗಭೂಮಿ ಕಲಾವಿದ ಡಾ ಎನ್ ನರಸಿಂಹಮೂರ್ತಿ ರವರು ಸಾಮಾನ್ಯ ಜನರ ಬದುಕಿನೊಂದಿಗೆ ಬೆಸೆದುಕೊಂಡಿರುವ ಹಾಗೂ
ಗುರಿ ಇರುವ ಒಬ್ಬ ಸಾಮಾನ್ಯ ಪ್ರಜ್ಞಾವಂತ ವಕೀಲನ ಕೈಗೆ ಅಧಿಕಾರ ಸಿಕ್ಕರೆ ಆತ ಏನು ಮಾಡಬಹುದು ಎಂಬುದನ್ನು ಯುವಕರಿಗೆ ತೋರಿಸುವ ಕಥಾನಾಯಕನಾಗಿ ಅಭಿನಯಿಸಿದ್ದಾರೆ.
ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಭ್ರಷ್ಟಾಚಾರ ಮತ್ತು ಜನ ಸಾಮಾನ್ಯರು ಪ್ರತಿನಿತ್ಯ ಎದುರಿಸುತ್ತಿರುವ ಸಮಸ್ಯೆಗಳು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಏನೇನು ಕ್ರಮ ಕೈಗೊಳ್ಳಬೇಕು ಎಂದು ಈ ಚಿತ್ರ ಜನರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಎಂದರು.
ಚಿತ್ರದಲ್ಲಿ ನಾಯಕಿರಾಗಿ ಸೋನಲ್ ಲಾಡ್ವಾ ಮತ್ತು ಸಬ್ಬಿ ಸೂರಿ ಅತ್ಯುತ್ತಮವಾಗಿ ನಟಿಸಿದ್ದಾರೆ. ಕಥಾನಾಯಕ ರಂಗಭೂಮಿ ಕಲಾವಿದ ಡಾ ಎನ್ ನರಸಿಂಹಮೂರ್ತಿ ಅವರು ಕದಂಬ ಸೈನ್ಯ ಕನ್ನಡ ಸಂಘಟನೆ ಗೌರವ ಅಧ್ಯಕ್ಷರು ಕೂಡ ಎನ್ನುವುದು ಹೆಮ್ಮೆಯ ವಿಷಯ ಎಂದು ಬೇಕ್ರಿ ರಮೇಶ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಎನ್ ಸಿ ಕಾಂಬಳೆ, ರಾಜ್ಯ ಕಾರ್ಯದರ್ಶಿ ವಿನಾಯಕ ಸೊಂಡೂರ, ಜಿಲ್ಲಾ ಅಧ್ಯಕ್ಷ ಈರಯ್ಯ ಹಿರೇಮಠ, ಉಪಾಧ್ಯಕ್ಷ ಇಫಾ೯ನ್ ಬೀಳಗಿ ಸೇರಿದಂತೆ ಆನಂದ ಕಾಳಗಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.

