ಸಿಂದಗಿ ತಾಲ್ಲೂಕಿನ ಸೋಮಜಾಳ ಗ್ರಾಮದಲ್ಲಿ ಆಯೋಜನೆ | 5 ಕಿ.ಮೀ & 10 ಕಿ.ಮೀ ವಿಭಾಗ | ನೊಂದಣಿ ಪ್ರಕ್ರಿಯೆ ಆರಂಭ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಸಿಂದಗಿ ತಾಲ್ಲೂಕಿನ ಸೋಮಜಾಳ ಗ್ರಾಮದಲ್ಲಿ ನ.19 ರಂದು ಆಕಾಶ ಬಿರಾದಾರ ಫೌಂಡೇಶನ್ ತನ್ನ ಎರಡನೆಯ ಮ್ಯಾರಥಾನ್ ಸ್ಪರ್ಧೆಯನ್ನು ಹಮ್ಮಿಕೊಂಡಿದೆ.
ನ.19 ರಂದು ಗುರುವಾರ ಸೋಮಜಾಳ ಗ್ರಾಮದಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾಗುವ ಈ ಮ್ಯಾರಥಾನ್ ಸ್ಪರ್ಧೆಯಲ್ಲಿ 5 ಕಿ.ಮೀ ಮತ್ತು 10 ಕಿ.ಮೀ ದೂರದ ಎರಡು ವಿಭಾಗಗಳನ್ನು ಮಾಡಲಾಗಿದೆ. 5 ಕಿ.ಮೀ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಗರಿಷ್ಠ ವಯೋಮಿತಿ 17 ವರ್ಷ ಮತ್ತು 10 ಕಿ.ಮೀ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಗರಿಷ್ಠ ವಯೋಮಿತಿ 20 ವರ್ಷ ಎಂದು ನಿಗದಿಪಡಿಸಲಾಗಿದೆ.
ಎರಡೂ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನಗಳ ವಿಜೇತರಿಗೆ ಕ್ರಮವಾಗಿ ರೂ.5000/-, ರೂ.3000/-, ಹಾಗೂ ರೂ.2000/- ಬಹುಮಾನದ ಮೊತ್ತವನ್ನು ನೀಡಲಾಗುತ್ತದೆ.
ಈಗಾಗಲೇ ಆನ್ಲೈನ್ ಮೂಲಕ ನೊಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು ನೊಂದಣಿ ಹಾಗೂ ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 9945173172 ಗೆ ಮತ್ತು Email: 16kbiradar@gmail.com ಇಲ್ಲಿ ಸಂಪರ್ಕಿಸಬೇಕೆಂದು ಎ.ಬಿ ಫೌಂಡೇಶನ್ ಸಂಸ್ಥಾಪಕರು ಮತ್ತು ಆಯೋಜಕರಾದ ಕೆ.ಎಸ್.ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
” ನಮ್ಮ ಗ್ರಾಮೀಣ ಭಾಗದ ಯುವಕರಲ್ಲಿ ಕ್ರೀಡಾಸಕ್ತಿ ಉತ್ತೇಜಿಸಲು ಮತ್ತು ಮ್ಯಾರಥಾನ್ ಸ್ಪರ್ಧೆಯ ಕುರಿತು ಅರಿವು ಮೂಡಿಸಲು ಈಗ ಎರಡನೆಯ ಬಾರಿಗೆ ತಮ್ಮ ಪುತ್ರ ಆಕಾಶ ಬಿರಾದಾರ ಸ್ಮರಣಾರ್ಥ ಈ ಸ್ಪರ್ಧೆಯನ್ನು ಆಯೋಜಿಸುತ್ತಿರುವೆ. ಈ ಭಾಗದ ವಿದ್ಯಾರ್ಥಿಗಳು, ಯುವಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಮ್ಯಾರಥಾನ್ ಯಶಸ್ವಿಯಾಗಿಸಲು ಕೋರುವೆ.”

– ಕಲ್ಯಾಣಿ.ಎಸ್.ಬಿರಾದಾರ, (ಸೋಮಜಾಳ)
ಎನ್ಐಎಸ್ ತರಬೇತುದಾರರು
ಊಟಿ (ತಮಿಳುನಾಡು)
ಹಾಗೂ
ನಿರ್ದೇಶಕರು, ಶ್ರೀ ಸತ್ಯಸಾಯಿಬಾಬಾ ವಿಮಾನ ನಿಲ್ದಾಣ
ಪುಟ್ಟಪರ್ತಿ (ಆಂದ್ರಪ್ರದೇಶ)

