Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಂಥಾಲಯಗಳು ನಿಜ ಮನುಷ್ಯರನು ಸೃಷ್ಟಿಸುತ್ತವೆ

ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿ :ಮಠಪತಿ

ಅಹಿರಸಂಗ: ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಶಸ್ತಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮಠ-ಮಾನ್ಯಗಳ ಅನ್ನ-ಅಕ್ಷರ ದಾಸೋಹದಿಂದ ನಾಡಿನಲ್ಲಿ ಬದಲಾವಣೆ
(ರಾಜ್ಯ ) ಜಿಲ್ಲೆ

ಮಠ-ಮಾನ್ಯಗಳ ಅನ್ನ-ಅಕ್ಷರ ದಾಸೋಹದಿಂದ ನಾಡಿನಲ್ಲಿ ಬದಲಾವಣೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಜಿಲ್ಲೆಗೆ ಶಾಂತವೀರ ಶ್ರೀಗಳು ಮತ್ತು ಬಂಥನಾಳ ಸಂಗನಬಸವ ಸ್ವಾಮೀಜಿಗಳ ಕೊಡುಗೆ ಅಪಾರ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಸೋಮವಾರ ಬಬಲೇಶ್ವರದ ಗುರುಪಾದೇಶ್ವರ ಮಠದ ಆವರಣದಲ್ಲಿ ನಡೆದ ಡಾ. ಮಹಾದೇವ ಶಿವಾಚಾರ್ಯರ ವಜ್ರ ಮಹೋತ್ಸವ ಹಾಗೂ ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರ ಕಾರ್ಯಕ್ರಮದಲ್ಲಿ ಅವರು ಸಾನ್ನಿಧ್ಯ ವಹಿಸಿದ್ದ ಜಗದ್ಗುರುಗಳಾದ ರಂಭಾಪುರಿಯ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಹಾಗೂ ಕಾಶಿಯ ಡಾ.ಚಂದ್ರಶೇಖರ ಶಿವಾಚಾರ್ಯರಿಗೆ ಗೌರವ ಸಮರ್ಪಿಸಿ ಅವರು ಮಾತನಾಡಿದರು.
ಬಿ.ಎಲ್‌.ಡಿ.ಇ ಶಿಕ್ಷಣ ಸಂಸ್ಥೆಯ ಆರಂಭ ಮತ್ತು ಬೆಳವಣಿಗೆಯಲ್ಲಿ ಶಾಂತವೀರ ಶ್ರೀಗಳ ಪಾತ್ರವಿದೆ. ಅವರಿಂದ ಬಬಲೇಶ್ವರ ಮಠ ಹೆಸರುವಾಸಿಯಾಗಿದೆ. ಈಗಿನ ಮಹಾದೇವ ಶಿವಾಚಾರ್ಯರು ಮೃದು ಮನಸ್ಸಿನವರು. ಸಾಮಾಜಿಕ ಏಳ್ಗೆ, ಭಕ್ತಿ ಪರಂಪರೆ ಮುಂದುವರಿಸಿಕೊಂಡು ಬಂದಿದ್ದಾರೆ. ಸದ್ಯ ಪಟ್ಟಾಧಿಕಾರ ಹೊಂದಿದ ಕಿರಿಯ ಶ್ರೀಗಳು ಖ್ಯಾತ ಯೋಗ ಪಟುವಾಗಿದ್ದು, ಅಧ್ಯಯನ ಮತ್ತು ಓದು ಪಡೆದು ಸನ್ಯಾಸ ಸ್ವೀಕರಿಸಿದ್ದಾರೆ. ಇವರಿಂದ ಮಠ ಇನ್ನಷ್ಟು ಉನ್ನತಿ ಹೊಂದಲಿ ಎಂದು ಬಯಸುತ್ತೇನೆ ಎಂದು ಸಚಿವರು ಹೇಳಿದರು.
ಪಟ್ಟಾಧಿಕಾರ ಹೊಂದಿದ ಕಿರಿಯ ಶ್ರೀಗಳಿಗೆ ಮಹಾದೇವ ಶ್ರೀಗಳು ಹೊಸ ನಾಮಕರಣ ಮಾಡಿದ್ದು ಅತ್ಯಂತ ಸೂಕ್ತವಾಗಿದೆ. ಗುರುಪಾದೇಶ್ವರರು, ಶಾಂತವೀರ ಮಹಾಸ್ವಾಮಿಗಳು ಹಾಗೂ ಮಹಾದೇವ ಶಿವಾಚಾರ್ಯರ ಮೂರು ಹೆಸರುಗಳು ಇದರಲ್ಲಿದ್ದು, ಗುರು ಶಾಂತದೇವ ಮಹಾಸ್ವಾಮಿಗಳು ಎಂದು ಹೆಸರಿಸಲಾಗಿದೆ ಎಂದು ಅವರು ಹೇಳಿದರು.
ಭಕ್ತಿ, ಶ್ರದ್ಧೆಯಲ್ಲಿ ಹೆಣ್ಣುಮಕ್ಕಳು ಮುಂದೆ ಇದ್ದಾರೆ. ನಾಡಿನಲ್ಲಿ ಮಠ ಮಾನ್ಯಗಳ ಅನ್ನ, ಅಕ್ಷರಗಳ ದಾಸೋಹದಿಂದ ಬಹಳಷ್ಟು ಬದಲಾವಣೆಯಾಗಿದೆ ಎಂದು ಅವರು ಹೇಳಿದರು.
ಮಮದಾಪುರ ಶ್ರೀಗಳು ಮಾತನಾಡಿ, ಬಬಲೇಶ್ವರ ಮಠ ಪರಂಪರೆ ದೇಶವೇ ನೋಡುವ ಹಾಗಿದೆ. ಇಲ್ಲಿನ ಭಕ್ತರು ಒಗ್ಗಟ್ಟಾಗಿ ಅದಕ್ಕೆ ಶಕ್ತಿ ಹಾಕಿದ್ದಾರೆ. ಇದು ಜಿಲ್ಲೆಯಲ್ಲಿಯೇ ವಿಶೇಷ. ಡಾ. ಮಹಾದೇವ ಶಿವಾಚಾರ್ಯರ ವಜ್ರ ಮಹೋತ್ಸವ ಹಾಗೂ ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರ ಕಾರ್ಯಕ್ರಮ ಯಶಸ್ವಿಯಾಗಿ ದಾಖಲೆ ನಿರ್ಮಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ. ಮಹಾದೇವ ಶಿವಾಚಾರ್ಯರು, ಡಾ‌. ಪ್ರಭುಸಾರಂಗ ದೇವರು, ಅಭಿನವ ಸಂಗನಬಸವ ಶ್ರೀಗಳು, ಕನ್ನೂರಿನ ಶ್ರೀ, ಹಾವೇರಿ ಶ್ರೀಗಳು, ಸಿದ್ದಾರೂಢ ಶ್ರೀಗಳು ಉಪಸ್ಥಿತರಿದ್ದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಂಥಾಲಯಗಳು ನಿಜ ಮನುಷ್ಯರನು ಸೃಷ್ಟಿಸುತ್ತವೆ

ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿ :ಮಠಪತಿ

ಅಹಿರಸಂಗ: ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಶಸ್ತಿ

ಹೈದ್ರಾಬಾದ್ ವಿಮೋಚನಾ ದಿನಾಚರಣೆಗೆ ಆಗ್ರಹಿಸಿ ಮನವಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಂಥಾಲಯಗಳು ನಿಜ ಮನುಷ್ಯರನು ಸೃಷ್ಟಿಸುತ್ತವೆ
    In (ರಾಜ್ಯ ) ಜಿಲ್ಲೆ
  • ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿ :ಮಠಪತಿ
    In (ರಾಜ್ಯ ) ಜಿಲ್ಲೆ
  • ಅಹಿರಸಂಗ: ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಹೈದ್ರಾಬಾದ್ ವಿಮೋಚನಾ ದಿನಾಚರಣೆಗೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಗುರಾನಿ ಎಸ್ಟೇಟ್ಸ್ ತಂಡದಿಂದ ಗಣೇಶೋತ್ಸವ
    In (ರಾಜ್ಯ ) ಜಿಲ್ಲೆ
  • ಸಿರಿಧಾನ್ಯಗಳಿಗೆ ವಿಶ್ವ ಮಟ್ಟದಲ್ಲಿ ಭಾರಿ ಬೇಡಿಕೆ :ಶಾಸಕ ಪಾಟೀಲ
    In (ರಾಜ್ಯ ) ಜಿಲ್ಲೆ
  • ಜನಸಾಮಾನ್ಯರ ಸಮಸ್ಯೆಗೆ ಜೆಡಿಎಸ್ ದಿಂದ ಮಾತ್ರ ಪರಿಹಾರ
    In (ರಾಜ್ಯ ) ಜಿಲ್ಲೆ
  • ದರ್ಗಾ ವಿಠ್ಠಲ ಮಂದಿರ ಬಳಿ ಪುರಿ ಜಗನ್ನಾಥ ದೇಗುಲ ಪ್ರತಿರೂಪ
    In (ರಾಜ್ಯ ) ಜಿಲ್ಲೆ
  • ನೀರಾವರಿ ಯೋಜನೆಯಿಂದ ರೈತರ ಜೀವನ ಮಟ್ಟ ಸುಧಾರಣೆ
    In (ರಾಜ್ಯ ) ಜಿಲ್ಲೆ
  • ಗಣೇಶ ಮೂರ್ತಿಗಳ ವಿಸರ್ಜನೆಗೆ ಪಾಲಿಕೆಯಿಂದ ಅಗತ್ಯ ಸಿದ್ಧತೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.