ವಿಜಯಪುರ: ವಾರ್ಡ್ ನಂ. ೧೬ರಲ್ಲಿ ಜಿಲ್ಲೆಯ ವೀರ ಮಹಾರಾಣಾ ಪ್ರತಾಪ್ ಸಿಂಹ ಸೇವಾ ಅಭಿವೃದ್ಧಿ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಜರುಗಿತು.
ಜಿಲ್ಲಾ ರಜಪೂತ್ ಸಮಾಜದ ಅಧ್ಯಕ್ಷ ಪರಶುರಾಮ್ ಸಿಂಗ್ ರಜಪೂತ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಿದ್ದು ಸಿಂಗ್ ರಜಪುತ್, ದತ್ತು ಸಿಂಗ್ ರಜಪೂತ, ಮೋಹನ್ ಸಿಂಗ್ ರಜಪೂತ, ಪ್ರಕಾಶ್ ರಜಪೂತ, ಕಾರ್ಯದರ್ಶಿಗಳಾದ ರಮೇಶ್ ಸಿಂಗ್ ಹಜೇರಿ ಹಾಗೂ ಪುಂಡಲಿಕ್ ರಜಪೂತ, ಸಂತೋಷ್ ತೇಲಿ, ಸುನಿಲ್ ಸಿಂಗ್ ಸದಿವಾಲೆ, ಪ್ರತಾಪ್ ಸಿಂಗ್ ಹಜೇರಿ, ದುಂಡಿ ಸಿಂಗ್ ಹಜೇರಿ, ಮನೋಹರ್ ಸಿಂಗ್ ರಜಪೂತ, ಅಂಬಾಭವಾನಿ ದೇವಸ್ಥಾನದ ಅರ್ಚಕರು ಹಾಗೂ ಗುಲಾಬ್ ಚೌಹಾನ್, ರವಿ ಚೌಹಾನ್, ನಬಿ ಬಿಜಾಪುರ್, ರಾಜು ಸಿಂಗ್ ರಜಪೂತ, ಕೆ ಎಸ್ ಟಿ ಸಂಘದ ಅಧ್ಯಕ್ಷ ಶಿವಾನಂದ್ ಹಿರೇಕುರುಬರ, ರಾಣಿ ಚೆನ್ನಮ್ಮ ಸಂಘದ ಅಧ್ಯಕ್ಷ ಚನ್ನು ಬೆಳೇಗಾವ್, ಬಸವರಾಜ ದೊಡ್ಡಮನಿ, ಸಂತೋಷ್ ರಜಪೂತ, ಇಂದಿರಾಬಾಯಿ ರಜಪೂತ, ಜಯಶ್ರೀ ರಜಪೂತ, ಲಕ್ಷ್ಮಿ ರೈಚೂರ್, ಸವಿತಾ ಚೌಹಾನ್ ಸೇರಿದಂತೆ ಇನ್ನು ಹಲವರು ಭಾಗಿಯಾಗಿದ್ದರು
ಈ ಸಮಯ ಜಿಲ್ಲಾ ರಜಪೂತ ಸಮಾಜದ ಅಧ್ಯಕ್ಷ ಪರಶುರಾಮ್ ಸಿಂಗ್ ರಜಪೂತ್ ಮಾತನಾಡಿ, ಸಮಾಜವೆಂದರೆ ಪ್ರತಿಯೊಂದು ಸಮಾಜದ ವ್ಯಕ್ತಿಯನ್ನು ಕುಂದು ಕೊರತೆಗಳನ್ನು ಆಲಿಸುತ್ತಾ ಪರಸ್ಪರ ಹೊಂದಾಣಿಕೆಯಿಂದ ಹಾಗೂ ಸಮಾಜದ ಅಭಿವೃದ್ಧಿಗಾಗಿ ಸರ್ವರೂ ಶ್ರಮಿಸಿದರೆ ಸಮಾಜ ಹೆಮ್ಮರವಾಗಿ ಬೆಳೆಯುತ್ತದೆ ಎಂದು ಹೇಳಿದರು.
ವಿವಿಧೆಡೆ ಸಮಾಜದಲ್ಲಿ ಶೋಷಣೆ, ಬಹಿಷ್ಕಾರಗಳು ನನ್ನ ಗಮನಕ್ಕೂ ಬಂದರೆ ಬಹಿಷ್ಕರಿಸಿದ ವ್ಯಕ್ತಿ ಎಂಥವನೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಘದ ಅಧ್ಯಕ್ಷನಾಗಿ ಎಲ್ಲ ಪದಾಧಿಕಾರಿಗಳೊಂದಿಗೆ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ತಡೆಗಟ್ಟಲು ನಾವು ಸಿದ್ಧರಾಗಿದ್ದೇವೆ ಎಂದರು.
ಕಾರ್ಯದರ್ಶಿ ರಮೇಶ್ ಸಿಂಗ್ ಹಜೇರಿ ಮನಗೂಳಿ ಮಾತನಾಡಿದರು.
ಸಂತೋಷ್ ತೇಲಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಪ್ರಕಾಶ್ ರಜಪುತ ನಿರೂಪಿಸಿದರು
Subscribe to Updates
Get the latest creative news from FooBar about art, design and business.
Related Posts
Add A Comment

