ಮುದ್ದೇಬಿಹಾಳ: ೨೪ಸಾವಿರ ಶ್ಲೋಕಗಳನ್ನು ಒಳಗೊಂಡ ಮಹಾ ಕಾವ್ಯವನ್ನು ರಚಿಸಿ ಮಹರ್ಷಿ ವಾಲ್ಮೀಕಿ ಅವರು ನಮಗೆ ಕೊಟ್ಟಿದ್ದಾರೆ. ಕಾರ್ಟೂನ್‌ಗಳಲ್ಲಿ ತೋರಿಸುವ ಚಿತ್ರಗಳನ್ನು ನೋಡಿ ನಾವು ಇದು ರಾಮಾಯಣ ಅಂದುಕೊಂಡಿದ್ದೇವೆ. ಆದರೆ ಮಹರ್ಷಿ ವಾಲ್ಮೀಕಿ ನಮಗೆ ಕೊಟ್ಟಿರುವ ರಾಮಾಯಣದ ಮೌಲ್ಯಗಳೇ ಬೇರೆ ಎಂದು ಬಾಗೇವಾಡಿಯ ಶಿಕ್ಷಕ, ವಾಗ್ಮಿ ಅಶೋಕ ಹಂಚಲಿ ಹೇಳಿದರು.
ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಕೌಟುಂಬಿಕ ಜೀವನದ ಮಹಾ ಮೌಲ್ಯಗಳನ್ನು ತೋರಿಸುವ ರಾಜ, ತಂದೆ-ತಾಯಿಗಳು ಹೇಗಿರಬೇಕು, ಹೆಂಡತಿಯ ಆದರ್ಶಗಳು ಏನಾಗಿರಬೇಕು, ಸಹೋದರರ ಭಾತೃತ್ವದ ಬಾಂಧವ್ಯ ಹೇಗಿರಬೇಕು ಎನ್ನುವ ವಿಚಾರಧಾರೆಗಳನ್ನಿಟ್ಟುಕೊಂಡು ಬರೆದ ಮಹಾಕಾವ್ಯ ರಾಮಾಯಣವಾಗಿದೆ. ಅದಕ್ಕೆ ಇಂದಿಗೂ ಕೂಡ ರಾಮಾಯಣ ಜನಮಾನಸದಲ್ಲಿ ಉಳಿದು ಜನರ ದಾರಿ ತೋರುವ ಮಹಾ ದೀಪವಾಗಿ ಬೆಳಗುತ್ತಿದೆ ಎಂದರು.
ಡಿಎಸ್‌ಎಸ್ ಮುಖಂಡ ಹರೀಶ ನಾಟೇಕಾರ ಮಾತನಾಡಿದರು.
ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ.ಮುದೂರ ಮಾತನಾಡಿ, ರಾಮಾಯಣ, ಮಹಾಭಾರತ ಮತ್ತು ಸಂವಿಧಾನ ಬರೆದರು. ಆದರೂ ಅವರ ಹೆಸರುಗಳು ಎಲ್ಲಿಯೂ ಬರಲ್ಲ. ಡಾ.ಬಾಬಾ ಸಾಹೇಬರು ಸಂವಿಧಾನ ಬರೆದದ್ದಕ್ಕಾಗಿ ಎಲ್ಲ ಊರುಗಳಲ್ಲಿ ಅವರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಆದರೆ ಮಹಾಭಾರತ ಬರೆದ ವ್ಯಾಸರ ಮತ್ತು ರಾಮಾಯಣ ಬರೆದ ಮಹರ್ಷಿ ವಾಲ್ಮೀಕಿಯವರ ಮೂರ್ತಿಗಳು ಎಲ್ಲೋ ಕೆಲವು ಕಡೆ ಮಾತ್ರ ಕಾಣುತ್ತೇವೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಆದರೆ ವಾಲ್ಮೀಕಿ ಮಹರ್ಷಿಗಳ ಮೂರ್ತಿ ನಿರ್ಮಿಸಿಲ್ಲದಿರುವುದು ಖೇದದ ಸಂಗತಿ ಎಂದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಯುವ ಮುಖಂಡ ಶಿವು ಕನ್ನೊಳ್ಳಿ ಮಾತನಾಡಿದರು.
ತಾ.ಪಂ ಪ್ರಭಾರ ಯೋಜನಾಧಿಕಾರಿ ಖೂಬಾಸಿಂಗ್ ಜಾಧವ, ಗ್ರೇಡ್ ೨ ತಹಶೀಲ್ದಾರ ಎಸ್.ಬಿ.ಕಟ್ಟಿ, ತಾಲೂಕು ಆರೋಗ್ಯ ಆಡಳಿತಾಧಿಕಾರಿ ಸತೀಶ ತಿವಾರಿ, ಎಸ್‌ಸಿ-ಎಸ್‌ಟಿ ನೌಕರ ಸಂಘದ ಅಧ್ಯಕ್ಷ್ಷ ಪರಶುರಾಮ ನಾಯ್ಕೋಡಿ, ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ ಮತ್ತು ಯಲ್ಲಪ್ಪ ನಾಯಕಮಕ್ಕಳ, ಮಾಜಿ ಸದಸ್ಯರಾದ ಹಣಮಂತ ನಾಯಕಮಕ್ಕಳ ಮತ್ತು ಸಂತೋಷ ನಾಯ್ಕೋಡಿ, ಮುಖಂಡರಾದ ಚನ್ನಪ್ಪ ವಿಜಯಕರ, ಶ್ರೀಶೈಲ್ ಪೂಜಾರಿ, ರಾಮಣ್ಣ ರಾಜನಾಳ, ಪ್ರಶಾಂತ ಕಾಳೆ, ರಾಜು ತುಂಬಗಿ, ಮಾನಸು ನಾಯಕ, ಮಂಜುನಾಥ ಪೂಜಾರಿ, ದೆವೇಂದ್ರ ವಾಲೀಕಾರ, ಅಂಬ್ರೀಶ ಬಿರಾದಾರ, ಯಲಗೂರೇಶ ನಾಯಕ ಸೇರಿದಂತೆ ಮತ್ತೀತರರು ಇದ್ದರು.
ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಉಪನಿರ್ದೇಶಕ ಉಮೇಶ ಲಮಾಣಿ ಸ್ವಾಗತಿಸಿದರು. ಗುಂಡು ಚೌಹಾಣ ನಿರ್ವಹಿಸಿದರು.
Related Posts
Add A Comment