ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಡಾ. ಡಿ.ಎಂ.ನಂಜುಂಡಪ್ಪ ವರದಿಯಲ್ಲಿ ದಾಖಲಾಗಿರುವ ವಿಜಯಪುರ ಜಿಲ್ಲೆಯನ್ನು ಸಂವಿಧಾನದ ೩೭೧(ಜೆ) ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ನಗರದ ಬಸವೇಶ್ವರ ವೃತ್ತದ ಬಳಿ ಕಳೆದ ೧೪ ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಆಲಮೇಲ, ಸಿಂದಗಿ ತಳವಾರ ಸಮಾಜ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ಸದಸ್ಯರು ಬೆಂಬಲ ಸೂಚಿಸಿದರು.
ಕರ್ನಾಟಕ ದಸಂಸ ಜಿಲ್ಲಾ ಸಂಚಾಲಕ ಉಮೇಶ ದೊಡಮನಿ ಮಾತನಾಡಿ, ವಿಜಯಪುರ ಜಿಲ್ಲೆಯ ಸಿಂದಗಿ, ಇಂಡಿ, ಬಾಗೇವಾಡಿ, ಮುದ್ದೇಬಿಹಾಳ ತಾಲೂಕುಗಳು ಅತೀ ಹಿಂದೂಳಿದ ಪ್ರದೇಶಗಳೆಂದು ಡಾ ನಂಜುಂಡಪ್ಪ ವರದಿಯಲ್ಲಿ ೩೭೧(ಜೆ) ಸೇರುವ ಎಲ್ಲ ಅರ್ಹತೆಗಳು ಇದ್ದರು ಕೈಬಿಟ್ಟಿರುವುದು ದುರಂತವೇ ಸರಿ. ಇತ್ತ ಮುಂಬೈ ಕರ್ನಾಟಕದ ಕೊನೆಯ ತಾಲೂಕು ಅತ್ತ ಕಲ್ಯಾಣ ಕರ್ನಾಟಕದ ಕೊನೆಯ ಊರುಗಳ ಪ್ರಜೆಗಳಾದ ನಾವುಗಳು ಒದ್ದವರ ಚಂಡುಗಳಾಗಿ ಸೌಲಭ್ಯ ವಂಚಿತರಾಗಿದ್ದೇವೆ ಅದಕ್ಕೆ ಈ ಬಾಗದ ಸರ್ವತೋಮುಖ ಅಭಿವೃದ್ಧಿ ಸೌಲಭ್ಯದ ವ್ಯಾಪ್ತಿಗೆ ಸೇರಿಸಬೇಕೆಂಬುದು ಈ ಭಾಗದ ಜನರ ಪ್ರಮುಖ ಬೇಡಿಕೆಯಾಗಿದೆ. ಕಾರಣ ಜಿಲ್ಲೆಯ ಜನಪ್ರತಿನಿಧಿಗಳು ಈ ವಿಷಯದಲ್ಲಿ ಆಸಕ್ತಿ ವಹಿಸಿ, ಅಗತ್ಯ ದಾಖಲೆಗಳೊಂದಿಗೆ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪ್ರಯತ್ನಿಸಬೇಕು ಎಂದು ಆಗ್ರಹಿಸಿದರು.
ನಿವೃತ್ತ ಶಿಕ್ಷಕರಾದ ಶರಣಪ್ಪ ಸುಂಗಠಾಣ, ಬಿ.ಎಸ್.ಬೂದಿಹಾಳ ಮಾತನಾಡಿದರು.
ಹೋರಾಟದ ಸಮಿತಿ ಶಿವು ಹತ್ತಿ, ಎಂ.ಎಂ.ಹಂಗರಗಿ, ರಂಗನಾಥ ತೋರ್ಫೆ, ಗುರುರಾಜ ಪಡಶೆಟ್ಟಿ, ಆನಂದ ಶಾಬಾದಿ, ಸಂಗಣ್ಣ ಬ್ಯಾಕೋಡ, ಪತ್ರಕರ್ತರಾದ ಪಂಡಿತ ಯಂಪೂರೆ, ಅಂಬರೀಶ ಸುಣಗಾರ, ಎಸ್.ಆರ್.ಪಾಟೀಲ, ಶಂಕರ ಮಲ್ಲೇದ ಸರ್, ದಸಂಸದ ಜಯಶ್ರೀ ನಾಟೀಕಾರ, ಶ್ರೀದೇವಿ ಅರಳಗುಂಡಗಿ, ಮಹಾದೇವಿ ಬಂಡಿವಡ್ಡರ, ರಿಯಾನಾ ಪತ್ತೇಪೂರ, ಶಾಹೀನ ನಾಯ್ಕ, ಮದಿನಾ ಕಾಲೇಬಾನ, ರೇಷ್ಮಾ ಕಲಾದಗಿ, ಶರಣಪ್ಪ ಮಳಗಿ, ಎನ್.ಎಂ.ಶಳ್ಳಗಿ, ಸತೀಶ ಹಿರೇಮಠ, ಸಿದ್ದಲಿಂಗಯ್ಯ ಹಿರೆಮಠ, ತಳವಾರ ಸಮಾಜದ ಮುಖಂಡರಾದ ಮಹಾಂತೇಶ ಯರನಾಳ, ಎಸ್.ಎಂ.ಬಿರಾದಾರ, ಎಸ್.ಬಿ.ತಳವಾರ, ಬಿ.ಡಿ.ಗೋಡೆಕರ, ಸಿ.ಎಸ್.ವಾಲೀಕರ, ಖಲೀಲ ಬಡಿಗೇರ, ಮಹಿಬೂಬ ವಾಲೀಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

