ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭರತನಾಟ್ಯವು ಅತ್ಯಂತ ಪ್ರಾಚೀನ & ಸಾ೦ಸ್ಕೃತಿಕ ಕಲೆಯಾಗಿದೆ. ಈ ಕಲೆಯು ಜಗತ್ತಿನಲ್ಲಿ ಭಾರತದ ಪರಂಪರೆ ಮತ್ತು ಸಂಸ್ಕೃತಿಯನ್ನು ಎತ್ತಿ ಪಡೆಯುತಿದ್ದು, ಇದಕ್ಕೆ ಜಾಗತಿಕ ಮನ್ನಣೆ ದೊರೆತಿರುವುದು ಹೆಮ್ಮೆಯ ವಿಷಯ ಎಂದು ಲಕ್ಷ್ಮಿ ದೇವಸ್ಥಾನದ ಅಧ್ಯಕ್ಷೆ ಶೋಭಾ ಚವ್ಹಾಣ ಅಭಿಪ್ರಾಯಪಟ್ಟರು.
ಅವರು ನವರಾತ್ರಿ ಉತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಜರುಗಿದ ” ಸಾ೦ಸ್ಕೃತಿಕ ಕಾರ್ಯಕ್ರಮ” ದಲ್ಲಿ ಮಾತನಾಡುತ್ತಿದ್ದರು.
ಪ್ರಾಚೀನ ಕಾಲದಲ್ಲಿ ಹಿಂದೂ ದೇವಾಲಯಗಳಲ್ಲಿ ಪ್ರದರ್ಶನಗೊಂಡು ಹಸ್ತ ಮುದ್ರೆಗಳು ಮತ್ತು ಮುಖ ಭಾವಗಳ ಮೂಲಕ ನಮ್ಮ ದೇಶೀಯ ಸಂಸ್ಕೃತಿ, ಪರಂಪರೆ & ಇತಿಹಾಸವನ್ನು ಅಭಿವ್ಯಕ್ತಗೋಳಿಸುತ್ತಿದೆ. ಆಧುನಿಕತೆಯ ಸೋಗಿನಲ್ಲಿ ಕಣ್ಮರೆಯಾಗುತ್ತಿರುವ ಭರತ ನಾಟ್ಯದ0ತಹ ಸಾ೦ಸ್ಕೃತಿಕ ಕಲೆಗಳ ಬಗ್ಗೆ ನಮ್ಮ ಮುಂದಿನ ಜನಾಂಗಕ್ಕೆ ತಿಳಿಸಿಕೊಟ್ಟು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕಾಗಿದೆ ಎಂದರು.
ಕಾರ್ಯಕ್ರಮದದಲ್ಲಿ ಗುರುಬಸಯ್ಯ ಹಿರೇಮಠ, ಬಿ.ಡಿ. ಕಡಕೋಳ, ವಿಠ್ಠಲ ಜಗತಾಪ, ರಾಜಶೇಖರ್ ಉಮಾರಾಣಿ, ಪ್ರೊ. ಮಲ್ಲಪ್ಪ ಖೋದನಾಪುರ, ಬಾಬು ಮುಳವಾಡ, ರಾವಸಾಬ ಮೆಣಸಂಗೀ, ಹಡಪದ, ವಿಠ್ಠಲಗೌಡ ಕನಮಡಿ, ಸುನೀತಾ ಉಮಾರಾಣಿ, ರಮ್ಯ ಜಗತಾಪ ಇನ್ನಿತರರು ಉಪಸ್ಥಿತರಿದ್ದರು.

