ಇಂಡಿಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಸಂಸ್ಕಾರ ಕ್ಷಿಣಿಸುತ್ತಿದ್ದು ಅಭಿವೃದ್ದಿ ಹೆಸರಿನಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ದಿಮತ್ತೆಯ ಅತೀ ಬಳಕೆಯಿಂದ ಮನುಷ್ಯರ ನಡುವೆ ಅಂತರ ಹೆಚ್ಚುತ್ತಿದೆ. ನವರಾತ್ರಿಯಂತಹ ಹಬ್ಬಗಳು ಸಂಸ್ಕೃತಿ ರಕ್ಷಣೆಗೆ ಪ್ರೇರಣೆಯಾಗಬೇಕಿದೆ. ಅಂತರಂಗದ ರಾಕ್ಷಸನ ಸಂಹಾರವಾಗುವದೇ ನಿಜವಾದ ವಿಜಯದಶಮಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ನಗರದ ಕುಂಬಾರ ಓಣಿಯಲ್ಲಿ ದಸರಾ ಆರನೆಯ ದಿನದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕ್ರೀಯಾ ಶಕ್ತಿ, ಇಚ್ಚಾ ಶಕ್ತಿ ಮತ್ತು ಜ್ಞಾನ ಶಕ್ತಿಯ ತ್ರಿವೇಣಿ ಸಂಗಮದ ಮೂಲಕ ಆಧ್ಯಾತ್ಮಿಕ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ರಾಜ್ಯ ನಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭಿವಣ್ಣ ಕವಲಗಿ ಮಾತನಾಡಿ ನನ್ನ ವೃತ್ತಿಯ ಯಶಸ್ಸಿಗೆ ಸಾದನೆಗೆ ಪರಿಶ್ರಮದ ಜೊತೆಗೆ ಭಕ್ತಿ ಧ್ಯಾನವೂ ಕಾರಣ, ಮನುಷ್ಯನಿಗೆ ಆಧ್ಯಾತ್ಮ ಬಲ ವಿದ್ದರೆ ಎಲ್ಲ ಕಾರ್ಯ ಮಾಡಲು ಸಾದ್ಯ ಆಗುತ್ತದೆ ಎಂದರು.
ಮಲ್ಲನಗೌಡ ಪಾಟೀಲ, ಶ್ರೀಕಾಂತ ಕುಡಿಗನೂರ, ಶಾಂತ ದೇವರ, ದೇವೆಂದ್ರ ಕುಂಬಾರ, ಚೆನ್ನು ದೇವರ, ಸುರೇಶ ಕುಂಬಾರ, ರಮೇಶ ಕಂಬಾರ, ರಾಘವೇಂದ್ರ ಕುಡಿಗನೂರ, ಕುಡಲಪ್ಪ ಕುಂಟೋಜಿ, ಶಿವಾನಂದ ಬೋಡಿ, ಶಾಂತಪ್ಪ ಐರೋಳಿ ಮತ್ತಿತರಿದ್ದರು.

