ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪವಿತ್ರ ರಕ್ಷಾ ಬಂಧನ ಹಬ್ಬದ ಅಂಗವಾಗಿ ನಗರದ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದ ಸರೋಜಾ ಅಕ್ಕ ಮತ್ತು ರುಕ್ಮಿಣಿ ಅಕ್ಕ ಅವರುಗಳು ಶನಿವಾರ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರಿಗೆ ಪ್ರೀತಿಯಿಂದ ರಾಖಿ ಕಟ್ಟಿ ಶುಭ ಕೋರಿದರು.
ನಗರದಲ್ಲಿರುವ ಸಚಿವ ಗೃಹ ಕಚೇರಿಗೆ ಆಗಮಿಸಿದ ಅವರು, ರಾಖಿ ಕಟ್ಟಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈ ಪವಿತ್ರ ಬಂಧನದ ತೋರಿದ ಆತ್ಮೀಯತೆ, ಆಶೀರ್ವಾದ ಮತ್ತು ಸಹೋದರತ್ವದ ಭಾವನೆ ಮನಸ್ಸಿಗೆ ಸಂತಸ ತರಿಸಿತು. ಎಲ್ಲರಿಗೂ ಶುಭವಾಗಲಿ. ನಾಡಿನಾದ್ಯಂತ ಉತ್ತಮ ಮಳೆ, ಬೆಳೆ ಸಮೃದ್ಧಿಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.

