ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ನಿರ್ವಹಣೆಯಲ್ಲಿರುವ ಅಖಿಲ ಭಾರತ ಸಮನ್ವಯ ಕೃಷಿ ಹವಾಮಾನಶಾಸ್ತ್ರ ಯೋಜನೆಯ ಗ್ರಾಮೀಣ ಕೃಷಿ ಮೌಸಮ್ ಸೇವಾ (ಉಏಒS) ಯೋಜನೆಯಡಿ ಖಾಲಿ ಇರುವ ತಾಂತ್ರಿಕ ಅಧಿಕಾರಿ ತಾತ್ಕಾಲಿಕ ಹುದ್ದೆಯ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹಿಟ್ನಳ್ಳಿ ಕೃಷಿ ಸಂಶೋಧನಾ ಕೇಂದ್ರದ ಪ್ರಾದೇಶಿಕ ನಿರ್ದೆಶಕರ ಸಹ ಸಂಶೋಧನಾ ನಿರ್ದೇಶಕರ ಕಚೇರಿಯಲ್ಲಿ ಸೆ. ೯ ರಂದು ಬೆಳಿಗ್ಗೆ ೧೦:೩೦ ಗಂಟೆಗೆ ನೇರ ಸಂದರ್ಶನ ನಡೆಯಲಿದೆ.
ಹುದ್ದೆಗೆ ಅಗತ್ಯವಿರುವ ಶೈಕ್ಷಣಿಕ ವಿದ್ಯಾರ್ಹತೆ, ಮಾಸಿಕ ವೇತನ ಶ್ರೇಣಿ ಹಾಗೂ ಇತರೆ ನಿಬಂಧನೆಗಳ ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾಲಯದ ವೆಬ್‌ಸೈಟ್ hಣಣಠಿs://siಣes.googಟe.ಛಿom/ಚಿ/uಚಿsಜ.iಟಿ/ಟಿeತಿs/ಣem
ಠಿoಡಿಚಿಡಿಥಿ-ಚಿಠಿಠಿoiಟಿಣmeಟಿಣ-ಟಿoಣiಜಿiಛಿಚಿಣioಟಿ-ಛಿiಡಿಛಿuಟಚಿಡಿs ಗೆ ಭೇಟಿ ನೀಡಬಹುದು.
ನೇರ ಸಂದರ್ಶನಕ್ಕೆ ಹಾಜರಾಗಲು ಬಯಸುವ ಅಭ್ಯರ್ಥಿಗಳು ತಮ್ಮ ಅಗತ್ಯ ಮೂಲ ದಾಖಲೆಗಳು ಹಾಗೂ ಅರ್ಜಿಗಳೊಂದಿಗೆ ನಿಗದಿತ ಸಮಯಕ್ಕೆ ಹಿಟ್ಟಳ್ಳಿ ಫಾರ್ಮ್ ಕಚೇರಿಯಲ್ಲಿ ಇರಬೇಕು.
ಹೆಚ್ಚಿನ ವಿವರಗಳಿಗಾಗಿ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ, ವಿಜಯಪುರ ಕಚೇರಿಯನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಪ್ರಾದೇಶಿಕ ಸಂಶೋಧನಾ ಕೇಂದ್ರದ ಕೃಷಿ ಹವಾಮಾನಶಾಸ್ತ್ರದ ಮುಖ್ಯಸ್ಥರ ಪ್ರಕಟಣೆ ತಿಳಿಸಿದೆ.
