ಬಸವನಬಾಗೇವಾಡಿ: ತಾಲೂಕಿನ ಕಣಕಾಲ ಗ್ರಾಮದ ಸಮೀಪದ ಆಲಕೊಪ್ಪರ ಗ್ರಾಮದ ಕೆರೆಯಿಂದ ಕಣಕಾಲ ಗ್ರಾಮದ ರೈತ ರಾಮಣ್ಣ ಬಸಪ್ಪ ಯರಝರಿ ಅವರ ಜಮೀನದಲ್ಲಿ ಶುಕ್ರವಾರ ಮೊಸಳೆಯೊಂದು ಕಾಣಿಸಿಕೊಂಡಿದ್ದರಿಂದ ರೈತರಲ್ಲಿ ಆತಂಕವುಂಟು ಮಾಡಿತ್ತು.
ತಾಲೂಕಿನಾದ್ಯಂತ ಬರಗಾಲದ ಛಾಯೆ ಅವರಿಸಿದ್ದರಿಂದ ಕೃಷ್ಣಾ ನದಿಯಿಂದ ಆಲಮಟ್ಟಿ ಡ್ಯಾಂ ನಿಂದ ಕಾಲುವೆಗಳ ಮುಖಾಂತರ ಕೆರೆಗೆ ನೀರು ಬಿಟ್ಟಿದರ ಹಿನ್ನೆಲೆಯಲ್ಲಿ ಕಾಲುವೆ ಮೂಲಕ ಮೊಸಳೆ ಕೆರೆ ಸೇರಿ ಶುಕ್ರವಾರ ಜಮೀನಿನಲ್ಲಿ ಸೇರಿತ್ತು. ಇದನ್ನು ನೋಡಿದ ರೈತರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮೊಸಳೆ ಹಿಡಿಯಲು ಬಿದಿರು, ಹಗ್ಗದ ಸಹಾಯದ ಮೂಲಕ ಸೆರೆ ಹಿಡಿದು ಟಂಟಂ ಮೂಲಕ ಆಲಮಟ್ಟಿ ಡ್ಯಾಂ ಗೆ ಕಳುಹಿಸಿಕೊಡಲಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ರಾಜಶೇಖರ ಹುಲ್ಲೂರ ತಿಳಿಸಿದರು.
Related Posts
Add A Comment