ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಮಲ್ಲಿಕಾರ್ಜುನ ಶಿಕ್ಷಣ ಮಹಾವಿಧ್ಯಾಲಯ ಮತ್ತು ಸಂಗಮೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ದ ರಾ ಬೇಂದ್ರೆ ಜಯಂತಿ ಆಚರಣೆ ಮಾಡಲಾಯಿತು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಲ್ಲಿಕಾರ್ಜುನ ಶಿಕ್ಷಣ ಮಾಹಾವಿಧ್ಯಾಲಯ ಪ್ರಾಚಾರ್ಯ ಶ್ರೀಕಾಂತ ಚವ್ಹಾಣ ಅವರು ಬೇಂದ್ರೆ ಅವರು ಸಾಹಿತ್ಯದ ಎಲ್ಲ ಮಜಲುಗಳಲ್ಲಿ ಕೃಷಿ ಮಾಡಿದ್ದರೂ ಅವರು ಪ್ರಸಿದ್ಧಿಗೆ ಬಂದದ್ದು ಕಾವ್ಯಗಳಿಂದ. ಅವರ ಕವಿತೆಗಳಲ್ಲಿನ ಜನಪದೀಯ ಶೈಲಿ ಅವರನ್ನು ಉತ್ತುಂಗಕ್ಕೆ ಏರಿಸಿತು’ ಎಂದರು.
ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಎಸ್.ಎಸ್.ದೇಸಾಯಿ ಮಾತನಾಡಿ ದ ರಾ ಬೇಂದ್ರೆಯವರ ಸಾಹಿತ್ಯ ನಮಗೆ ಪ್ರತಿ ಹೆಜ್ಜೆಗೂ ಮಾದರಿ, ಆದ್ದರಿಂದ ಅವರ ಸಾಹಿತ್ಯವನ್ನು ಪ್ರತಿಯೊಬ್ಬರು ಓದಿ ಜೇವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪದವಿ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಮಹಾಂತೇಶ ಜನವಾಡ ಮಾತನಾಡಿ, ಸಾಮಾನ್ಯರಿಗೆ ತಿಳಿಯುವಂತೆ ವರಕವಿ ದ.ರಾ. ಬೇಂದ್ರೆ ಅವರು ಮನುಷ್ಯ ಜೀವನದ ಸಾಮಾಜಿಕ ವ್ಯವಸ್ಥೆಯ ವಿವಿಧ ಆಯಾಮಗಳನ್ನು ತಮ್ಮ ಕಾವ್ಯದ ಮೂಲಕ ಬಿಂಬಿಸಿದ್ದಾರೆ ಎಂದರು.
ವಿದ್ಯಾಶ್ರೀ.ದೇಸಾಯಿ.
ಬಿ.ಎಸ್ ಮೇಂಡೆಗಾರ್ ,ಕೆ.ಆರ್ ಬಿರಾದಾರ್, ಎ.ಎಸ್ ಹಿರೇಮಠ್, ಎಂ ಎಂ ಬಡಿಗೇರ್, ಬಸವರಾಜ ನೀಲವಾಣಿ, ಜ್ಞಾನೇಶ್ವರಿ ಲಚ್ಯಾಣ, ಬಂಗಾರೆವ್ವಾ ದೈವಾಡಿ, ಸವಿತಾ ನೀರಾಳೆ, ಹಾಗೂ ಮಲ್ಲಿಕಾರ್ಜುನ ಶಿಕ್ಷಣ ಮಾಹಾವಿಧ್ಯಾಲಯ ಪ್ರಶಿಕ್ಷಣಾರ್ಥಿಗಳು ಮತ್ತು ಪದವಿ ಮಾಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.