Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಜನಸೇವೆಯೇ ನನ್ನ ಸಂಕಲ್ಪ, ರಾಷ್ಟ್ರಸೇವೆಯೇ ಪರಮ ಗುರಿ :ಪಾಂಡೆ

ಲಿಫ್ಟ್‌ ಇರಿಗೇಷನ್‌ ಪಂಪ್‌ಗಳನ್ನು ಐಸಿಸಿ ವ್ಯಾಪ್ತಿಯಿಂದ ಹೊರಗಿಡಿ

ಕಬ್ಬಿನ ಬೆಲೆ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚನೆ ಸ್ವಾಗತಾರ್ಹ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅಂಗನವಾಡಿ ಕಾಂಪೌಂಡನ್ನೇ ನುಂಗಿದ ಪವಾಡ ಪುರುಷರು
(ರಾಜ್ಯ ) ಜಿಲ್ಲೆ

ಅಂಗನವಾಡಿ ಕಾಂಪೌಂಡನ್ನೇ ನುಂಗಿದ ಪವಾಡ ಪುರುಷರು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಕಾಗದದ ಮೇಲೆ ಭದ್ರಕೋಟೆ, ಸ್ಥಳದಲ್ಲಿ ಮಾತ್ರ ಬರೀ ಬಯಲು | ಸುಮಾರು ರೂ.3 ಲಕ್ಷ ಗುಳುಂ ಮಾಡಿದ ನುಂಗಣ್ಣರು | ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ಉದಯರಶ್ಮಿ ದಿನಪತ್ರಿಕೆ

ವಿಶೇಷ ವರದಿ
ಅಫಜಲಪುರ: ’ಕೊಡಗನ ಕೋಳಿ ನುಂಗಿತ್ತ.. ನೋಡವ್ವ ತಂಗಿ..’ ಎಂಬ ಶರೀಫಜ್ಜನ ಹಾಡನ್ನು ಕೇಳಿರುತ್ತೀರಿ. ಆದರೆ ಇಲ್ಲೊಂದು ಕಡೆ ಅದಕ್ಕಿಂತ ರೋಚಕವಾದ ಕಳ್ಳಾಟದ ಪವಾಡ ನಡೆದಿದೆ.
ಪುಟ್ಟ ಮಕ್ಕಳು ಆಟವಾಡುವ ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ರಕ್ಷಣೆ ನೀಡಬೇಕಿದ್ದ ಕಾಂಪೌಂಡ್ ಗೋಡೆಯನ್ನೇ ಗುತ್ತಿಗೆದಾರ ಮತ್ತು ಇಂಜಿನಿಯರ್ ಸೇರಿ ನುಂಗಿ ನೀರು ಕುಡಿದಿದ್ದಾರೆ!
ಕಾಂಪೌಂಡ್‌ ನಿರ್ಮಾಣಕ್ಕೆ ಸರ್ಕಾರ ಬಿಡುಗಡೆ ಮಾಡಿದ್ದ ₹3 ಲಕ್ಷ ಅನುದಾನವನ್ನು, ಸ್ಥಳದಲ್ಲಿ ಒಂದು ಇಟ್ಟಿಗೆಯನ್ನೂ ಇಡದೆ, ಕಾಮಗಾರಿ ಸಂಪೂರ್ಣ ಮುಗಿದಿದೆ ಎಂದು ಬಿಲ್ ಸೃಷ್ಟಿಸಿ ಹಣ ಡ್ರಾ ಮಾಡಿಕೊಂಡಿರುವ ಕರ್ಮಕಾಂಡ ಬಯಲಾಗಿದೆ.
ದಾಖಲೆಯಲ್ಲಿ ಭದ್ರಗೋಡೆ, ಸ್ಥಳದಲ್ಲಿ ಶೂನ್ಯ! ಕಾಗದದಲ್ಲೇ ಮುಗಿದ ಕೆಲಸ
ಇಲಾಖೆಯ ಕಡತಗಳ ಪ್ರಕಾರ ಅಂಗನವಾಡಿಗೆ ಸುತ್ತಲೂ ಸುಭದ್ರ ಕಾಂಪೌಂಡ್ ಗೋಡೆ ಎದ್ದು ನಿಂತಿದೆ, ಬಣ್ಣ ಬಳಿಯಲಾಗಿದೆ. ಆದರೆ ಸ್ಥಳಕ್ಕೆ ಹೋಗಿ ನೋಡಿದರೆ ವಾಸ್ತವ ಸ್ಥಿತಿ ಭಿನ್ನವಾಗಿದೆ. ಅಲ್ಲಿ ಹೊಸ ಕಾಂಪೌಂಡಿನ ಸುಳಿವೂ ಇಲ್ಲ. ಬೀದಿನಾಯಿಗಳು ಮತ್ತು ದನಕರುಗಳ ನಡುವೆಯೇ ಮಕ್ಕಳು ಹೆದರುತ್ತ ಆಟವಾಡಬೇಕಾದ ದುಸ್ಥಿತಿ ಇದೆ.
ಗುತ್ತಿಗೆದಾರ-ಇಂಜಿನಿಯರ್ ‘ಜುಗಲ್‌ಬಂದಿ’
ಸ್ಥಳ ಪರಿಶೀಲನೆ ಮಾಡಬೇಕಿದ್ದ ಸಂಬಂಧಪಟ್ಟ ಇಂಜಿನಿಯರ್, ಕಚೇರಿಯಲ್ಲೇ ಕುಳಿತು ಕಾಮಗಾರಿ ಗುಣಮಟ್ಟದಿಂದ ಕೂಡಿದೆ ಎಂದು ಪ್ರಮಾಣಪತ್ರ ನೀಡಿದ್ದರೆ, ಇತ್ತ ಗುತ್ತಿಗೆದಾರ ಕೆಲಸ ಮಾಡದೆಯೇ ಬಿಲ್ ಕ್ಲೈಮ್ ಮಾಡಲು ಇಂಜಿನಿಯರ್ ಸಂಪೂರ್ಣ ಸಹಕಾರ ನೀಡಿದ್ದು, ₹3 ಲಕ್ಷ ಸಾರ್ವಜನಿಕರ ತೆರಿಗೆ ಹಣ ಇಬ್ಬರ ಜೇಬು ಸೇರಿರ ಬಹುದಾದ ಶಂಕೆ ತಲೆದೋರಿದೆ.
ಸಾರ್ವಜನಿಕರ ಆಕ್ರೋಶ:
ಅಂಗನವಾಡಿ ಕಂದಮ್ಮಗಳ ರಕ್ಷಣೆಗೆಂದು ಬಂದ ಪುಟ್ಟ ಮೊತ್ತವನ್ನೂ ಬಿಡದೆ ಲೂಟಿ ಹೊಡೆದಿದ್ದಾರೆನ್ನಲಾದ ಈ ಜೋಡಿಯ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ.
ಸರ್ಕಾರದ ಯೋಜನೆಗಳನ್ನು ನುಂಗಿ ತೇಗುವ ಇಂತಹ ‘ಕೋಡಗರಿಗೆ’ ಮೇಲಧಿಕಾರಿಗಳು ಕಠಿಣ ಕಾನೂನಿನ ಬಿಸಿ ಮುಟ್ಟಿಸುತ್ತಾರಾ ಅಥವಾ ದಾಖಲೆಗಳಂತೆಯೇ ತನಿಖೆಯೂ ಕಾಗದದಲ್ಲೇ ಮುಗಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

“ಮಕ್ಕಳ ಅನ್ನದ ತುತ್ತಿಗೆ ಕನ್ನ ಹಾಕಿದಂತೆ, ಅವರ ಸುರಕ್ಷತೆಯ ಕಾಂಪೌಂಡ್ ಹಣವನ್ನು ಲಪಟಾಯಿಸಿರುವ ಇಂಜಿನಿಯರ್ ಮತ್ತು ಗುತ್ತಿಗೆದಾರನನ್ನು ತಕ್ಷಣ ಅಮಾನತುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಿ ಹಣ ವಸೂಲಿ ಮಾಡಬೇಕು.”

– ಚಂದ್ರಕಾಂತ್ ಮದರಿ
ಮಾಜಿ ಗ್ರಾಪಂ ಸದಸ್ಯರು, ಚಿಂಚೋಳಿ

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಜನಸೇವೆಯೇ ನನ್ನ ಸಂಕಲ್ಪ, ರಾಷ್ಟ್ರಸೇವೆಯೇ ಪರಮ ಗುರಿ :ಪಾಂಡೆ

ಲಿಫ್ಟ್‌ ಇರಿಗೇಷನ್‌ ಪಂಪ್‌ಗಳನ್ನು ಐಸಿಸಿ ವ್ಯಾಪ್ತಿಯಿಂದ ಹೊರಗಿಡಿ

ಕಬ್ಬಿನ ಬೆಲೆ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚನೆ ಸ್ವಾಗತಾರ್ಹ

ಭರತ ನಾಟ್ಯ ಭಾರತೀಯ ಪರಂಪರೆ-ಸಂಸ್ಕೃತಿಯ ಪ್ರತಿಬಿಂಬ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಜನಸೇವೆಯೇ ನನ್ನ ಸಂಕಲ್ಪ, ರಾಷ್ಟ್ರಸೇವೆಯೇ ಪರಮ ಗುರಿ :ಪಾಂಡೆ
    In (ರಾಜ್ಯ ) ಜಿಲ್ಲೆ
  • ಲಿಫ್ಟ್‌ ಇರಿಗೇಷನ್‌ ಪಂಪ್‌ಗಳನ್ನು ಐಸಿಸಿ ವ್ಯಾಪ್ತಿಯಿಂದ ಹೊರಗಿಡಿ
    In (ರಾಜ್ಯ ) ಜಿಲ್ಲೆ
  • ಕಬ್ಬಿನ ಬೆಲೆ ಸಮಸ್ಯೆ ಪರಿಹಾರಕ್ಕೆ ಸಮಿತಿ ರಚನೆ ಸ್ವಾಗತಾರ್ಹ
    In (ರಾಜ್ಯ ) ಜಿಲ್ಲೆ
  • ಭರತ ನಾಟ್ಯ ಭಾರತೀಯ ಪರಂಪರೆ-ಸಂಸ್ಕೃತಿಯ ಪ್ರತಿಬಿಂಬ
    In (ರಾಜ್ಯ ) ಜಿಲ್ಲೆ
  • ಪ್ರಸಕ್ತ ಸಾಲಿಗೆ 7 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ
    In (ರಾಜ್ಯ ) ಜಿಲ್ಲೆ
  • ಬಿ.ಎಂ.ಪಾಟೀಲ್ ಪಬ್ಲಿಕ್ ಶಾಲೆಯಲ್ಲಿ ರಕ್ತದಾನ ಶಿಬಿರ
    In (ರಾಜ್ಯ ) ಜಿಲ್ಲೆ
  • ಅಂತರಂಗದ ರಾಕ್ಷಸ ನಾಶವೇ ವಿಜಯದಶಮಿ
    In (ರಾಜ್ಯ ) ಜಿಲ್ಲೆ
  • ಅಥಣಿ ಸರ್ಕಾರಿ ಕಾಲೇಜಿನಲ್ಲಿ ಆಕರ್ಷಕ ಅಣುಕು ಸಂಸತ್ ಕಲಾಪ
    In (ರಾಜ್ಯ ) ಜಿಲ್ಲೆ
  • ಕವಿಗಳ ಲೇಖನಿ ಸಮಾಜಕ್ಕೆ ಕೈಗನ್ನಡಿಯಾಗಲಿ :ಕುಚಬಾಳ
    In (ರಾಜ್ಯ ) ಜಿಲ್ಲೆ
  • ೩೭೧(ಜೆ) ಹೋರಾಟಕ್ಕೆ ತಳವಾರ ಸಮಾಜ & ದಸಂಸ ಬೆಂಬಲ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.