ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಾದ್ಯಂತ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟವನ್ನು ಪುರುಷ ಹಾಗೂ ಮಹಿಳೆಯರಿಗಾಗಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ತಾಲೂಕು ಮಟ್ಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಫುಟ್ಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್ ಹಾಗೂ ಯೋಗಾಸನ ಸ್ಪರ್ಧೆಗಳು ನಡೆಯಲಿವೆ.
ಸೆ.೧ರಂದು ತಿಕೋಟ ತಾಲೂಕಿನ ಸೋಮದೇವರ ಹಟ್ಟಿ ದುರ್ಗಾದೇವಿ ಶಾಲೆಯಲ್ಲಿ, ಸೆ. ೨ ರಂದು ವಿಜಯಪುರ ತಾಲೂಕಿನ ಡಾ. ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ,ಸೆ.೬ ರಂದು ನಿಡಗುಂದಿ ತಾಲೂಕಿನ ಕಮದಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕ್ರೀಡಾಕೂಟ ನಡೆಯಲಿದೆ. ಸೆ.೭ರಂದು ಇಂಡಿ ತಾಲೂಕಾ ಕ್ರೀಡಾಂಗಣದಲ್ಲಿ, ಸೆ.೮ರಂದು ಬಬಲೇಶ್ವರದ ಶಾಂತವೀರ ಕಾಲೇಜಿನಲ್ಲಿ ಹಾಗೂ ಚಡಚಣ ತಾಲೂಕಿನ ಕ್ರೀಡಾಕೂಟವನ್ನು ಸಂಗಮೇಶ್ವರ ಶಿಕ್ಷಣ ಸಂಸ್ಥೆ ಚಡಚಣದಲ್ಲಿ ಆಯೋಜಿಸಲಾಗಿದೆ.
ಸೆ.೯ರಂದು ದೇವರ ಹಿಪ್ಪರಗಿ ತಾಲೂಕಿನ ಕ್ರೀಡಾಕೂಟವನ್ನು ಬಿಎಲ್ಡಿಇ ಸಂಸ್ಥೆ ಆವರಣ ದೇವರ ಹಿಪ್ಪರಗಿಯಲ್ಲಿ, ಸೆ.೧೦ ರಂದು ಮುದ್ದೇಬಿಹಾಳ ತಾಲೂಕಿನ ಕ್ರೀಡಾಕೂಟವನ್ನು ಮುದ್ದೇಬಿಹಾಳದ ಎಂಜಿವಿಸಿ ಕಾಲೇಜ್ ಮುದ್ದೇಬಿಹಾಳದಲ್ಲಿ, ಸೆ.೧೧ ರಂದು ಸಿಂದಗಿ ತಾಲೂಕಿಗೆ ಸಂಬಂಧಿಸಿದಂತೆ ತಾಲೂಕಾ ಕ್ರೀಡಾಂಗಣ ಸಿಂದಗಿಯಲ್ಲಿ, ಸೆ.೧೩ ರಂದು ಕೊಲ್ಹಾರ ತಾಲೂಕಿನ್ ಕ್ರೀಡಾಕೂಟವನ್ನು ಸಂಗಮೇಶ್ವರ ಪದವಿಪೂರ್ವ ಕಾಲೇಜ್ ಕೊಲ್ಹಾರದಲ್ಲಿ, ಸೆ.೧೪ ರಂದು ಬಸವನ ಬಾಗೇವಾಡಿ ತಾಲೂಕಿನ ಕ್ರೀಡಾಕೂಟವನ್ನು ಎಸ್ ಬಿ.ಪಿಯು ಕಾಲೇಜ್ ಬಸವನ ಬಾಗೇವಾಡಿಯಲ್ಲಿ ಹಾಗೂ ಸೆ.೧೬ರಂದು ಆಲಮೇಲ ತಾಲೂಕಿನ ಕ್ರೀಡಾಕೂಟವನ್ನು ಬಳಗಾನೂರ ಗ್ರಾಮದ ಕೇದಾರಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿದೆ. ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲೂಕಿಗೆ ಸಂಬಂಧಿಸಿದಂತೆ, ಹನುಮಗೌಡ ಪೀರಾಪೂರ ಮೊ:೯೯೦೨೯೬೧೭೧೦, ತಿಕೋಟಾ ಹಾಗೂ ಬಬಲೇಶ್ವರ ತಾಲೂಕಿಗೆ ಎನ್.ಆರ್.ಚವ್ಹಾಣ ಮೊ:೯೪೮೦೬೭೮೦೯೭,
ಇಂಡಿ ತಾಲೂಕಿಗೆ ಸಿ.ಎಸ್.ವಾಲೀಕಾರ ಮೊ:೯೮೮೦೧೪೬೨೧೯, ಬಸವನ ಬಾಗೇವಾಡಿ, ಕೊಲ್ಹಾರ ಹಾಗೂ ನಿಡಗುಂದಿ ತಾಲೂಕಿಗೆ ಸಂಬಂಧಿಸಿದಂತೆ ಎಸ್.ಎಸ್.ಅವಟಿ ಮೊ:೯೬೬೩೨೯೭೬೫೪, ಚಡಚಣ ತಾಲೂಕಿಗೆ ಎಂ.ಬಿ.ಬಿರಾದಾರ ಮೊ: ೯೪೪೮೫೮೦೭೨೯, ವಿಜಯಪುರ ತಾಲೂಕಿಗೆ ಎಸ್.ಜೆ ಬಿರಾದಾರ ಮೊ:೯೯೦೧೧೧೧೫೩೮, ಸಿಂದಗಿ ,ದೇವರ ಹಿಪ್ಪರಗಿ ಹಾಗೂ ಆಲಮೇಲ ತಾಲೂಕಿಗೆ ರಮೇಶ ಬಿರಾದಾರ ಮೊ:೮೧೦೫೮೪೯೩೪೭ ಕ್ರೀಡಾಕೂಟದ ಸಂಯೋಜಕರಾದ ಇವರನ್ನು ಸಂಪರ್ಕಿಸಬಹುದಾಗಿದೆ. ಎಂದು ಯುವ ಸಬಲೀಕರ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ ಧೈವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
