ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ಸುರಸಿಂಗಾರ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ವಿಜಯಪುರ, ವಿವೇಕಾನಂದ ಸೇವಾ ಸಂಘ ವಿಜಯಪುರ ಮತ್ತು ವಿಷ್ಣುಗುಪ್ತ ವಿಶ್ವ ವಿದ್ಯಾ ಪೀಠದ ಸ್ವರಾತ್ಮ ಗುರುಕುಲ ಗೋಕರ್ಣದ ವತಿಯಿಂದ ವಿಜಯಪುರದ ಐದನೇ ಶಾಸ್ತ್ರೀಯ ಸಂಗೀತೋತ್ಸವ ನಗರದ ವಿಶ್ರಾಮ ಹೋಟೆಲ್ ಸಭಾಂಗಣದಲ್ಲಿ ವಿಜೃಂಬಣೆಯಿಂದ ನಡೆಯಿತು.
ವಿಜಯಪುರದ ೩೪ ಜನ ಕಲಾವಿದರು ಬೆಳಗ್ಗೆ ಒಂಬತ್ತು ಗಂಟೆಯಿಂದ ರಾತ್ರಿ ೧೧ ಗಂಟೆಯವರೆಗೆ ನಿರಂತರವಾಗಿ ಅನೇಕ ರಾಗಗಳನ್ನು ಪ್ರಸ್ತುತಪಡಿಸಿ ನೆರೆದ ಅಪಾರ ಪ್ರೇಕ್ಷಕರ ಮನಗೆದ್ದರು.
ಇದಕ್ಕೂ ಮೊದಲು ಕಾರ್ಯಕ್ರಮವನ್ನು ಸುರ ಸಿಂಗಾರದ ಅಧ್ಯಕ್ಷ ಡಾ ಸತೀಶ್ ಜಿಗಜಿನ್ನಿ ಉದ್ಘಾಟಿಸಿ ವಿಜಯಪುರದಲ್ಲಿ ಶಾಸ್ತ್ರೀಯ ಸಂಗೀತವು ಬೆಳೆಯುತ್ತಿರುವುದು ಅತ್ಯಂತ ಸಂತೋಷದ ವಿಷಯವೆಂದರು. ವಿಷ್ಣುಗುಪ್ತ ವಿವಿಯ ಮುಖ್ಯಸ್ಥ ಮಂಜುನಾಥ ಭಟ್ ಸುವರ್ಣಗದ್ದೆ ಮಾತನಾಡಿ, ಉತ್ತರ ಕರ್ನಾಟಕ ಮತ್ತು ಉತ್ತರ ಕನ್ನಡದ ಕಲಾ ಸಂಬಂಧ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂದರು.
ವಿವೇಕಾನಂದ ಸೇವಾ ಸಂಘದ ಅಧ್ಯಕ್ಷ ಶಾಂತೇಶ ಕಳಸಗೊಂಡ ಮತ್ತು ಹೋಟೆಲ್ ಉದ್ಯಮಿ ಪ್ರಶಾಂತ್ ಶೆಟ್ಟಿ ಮಾತನಾಡಿದರು.
ಕಲಾವಿದರಾದ ಶ್ರೀಮತಿ ಗೀತಾ ಕುಲಕರ್ಣಿ, ವಿಶಾಲ ಕಟ್ಟಿ, ಕಾಶಿನಾಥ ಭೋಸಲೆ, ಕು.ಸಾಕ್ಷಿ ಹಿರೇಮಠ, ಶ್ರೀಮತಿ ಸಂಗೀತಾ ಹಿರೇಮಠ, ಕು.ಮಾಳವಿಕಾ ಜೋಶಿ, ಕು. ಅದಿತಿ ಮೊಕಾಶಿ, ಕು.ಸುನಯನಾ ದೇಶಪಾಂಡೆ, ಕು.ಶ್ರೀಪ್ರದಾ ದಶವಂತ, ಶ್ರೀಮತಿ ಸುಲೇಖಾ ಆದ್ಯ, ಶ್ರೀನಿವಾಸ ಬಣಗಾರ, ಶ್ರೀಮತಿ ಹರಿಣಿ ಅರ್ಜುಣಗಿ, ಶ್ರಾವಣಿ ಪಾಟೀಲ, ನಿಂಗಣ್ಣ ದೇವಣಗಾವ್, ಶ್ರೀಮತಿ. ಭವಾನಿ ಕುಲಕರ್ಣಿ, ವಿರೇಶ ಬಡಿಗೇರ, ಕು.ದಾನಮ್ಮ ಪಾಟೀಲ, ಕು.ಮನಸ್ವಿ ಸೋನಾರ್, ಕು.ಖುಷಿ ಕಲಾಲ. ಕು.ಮಾನ್ಯತಾ ಪಟೇಲ್. ಶ್ರೀಮತಿ ಪ್ರಿಯಾ ಕುಲಕರ್ಣಿ, ಶಾಂತೇಶ ಕಳಸಗೊಂಡ, ಶ್ರೀಮತಿ ವೇದಿಕಾ ಭಿಡೆ, ಪ್ರದೀಪ ಪೋದ್ದಾರ. ಕು.ವೀಣಾ ಪೋದ್ದಾರ. ಕು.ಅಕ್ಷತಾ ಆರ್. ಕು.ಸಮರ್ಥ ಹಿರೇಮಠ, ಶ್ರೀನಿವಾಸ ಟಂಕಸಾಲಿ, ಚಂದನಾ ಚಪ್ಪರದಹಳ್ಳಿಮಠ, ಗಣೇಶ ವಾರದ, ಶ್ರೀಮತಿ. ಮೇಘನಾ ಕುಲಕರ್ಣಿ, ಶ್ರೀಮತಿ ಚೇತನಾ ಗುಡಿ(ನಾಯಿಕ), ಡಾ.ಹರೀಶ ಹೆಗಡೆ ಇವರಿಗೆ ಸಂವಾದಿನಿ ಸಾಥ ನಿಡಿದ ಕಲಾವಿದರು, ಶ್ರೀಮತಿ ನಂದಾ ಮಿರ್ಜಿ, ಪ್ರದೀಪ ಪೋದ್ದಾರ, ಶ್ರೀಶೈಲ ಬೀಳೂರ, ತಬಲಾ ಸಾಥ ನಿಡಿದ ಕಲಾವಿದರು ಶೇಶಾದ್ರಿ ಅಯ್ಯಂಗಾರ, ಜಗನ್ನಾಥ ಅಳ್ಳಗಿ, ಮಂಥನ ಜೋಶಿ, ಕು.ಓಂಕಾರ ಅಳ್ಳಗಿ, ಕು. ಅನಂತ ಆದ್ಯ, ಕು.ಪ್ರಸನ್ನ ಪೋದ್ದಾರ್, ವಾಯಲಿನ್ ಸಾಥ ನೀಡಿದ ಕಲಾವಿದರಾದ ರವಿಕುಮಾರ ಟಿ. ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಲತಾ ಜಹಾಗಿರ್ದಾರ ವಿದುಷಿ ಶಾಂತಾಬಾಯಿ ಕೌತಾಳ, ಕೆ ಎಸ್ ಕ್ಷೀರಸಾಗರ, ಪಿ ಎಸ್ ಕಡೇಮನಿ, ಡಾ.ಎಸ್.ಎಸ್.ಶಿರಗುಪ್ಪಿ, ಜಗನ್ನಾಥ ಅಳ್ಳಗಿ, ಶ್ರೀಪಾದ ಅಠಲೆ ಮುಂತಾದ ಕಲಾವಿದರು, ಉದ್ಯಮಿಗಳು, ಕಲಾ ರಸಿಕರು ಉಪಸ್ಥಿತರಿದ್ದರು. ಸುರಸಿಂಗಾರದ ಕಾರ್ಯದರ್ಶಿ ಸಂಗಣ್ಣ ಪಾಟೀಲ, ಕಲಾವಿದ ರಮೇಶ ಚವ್ಹಾಣ, ವಿರಭದ್ರ ಹೇರಲಗಿ, ಸೇರಿದಂತೆ ಅನೇಕರಿದ್ದರು.
ಡಾ. ಹರೀಶ ಹೆಗಡೆ ನಿರೂಪಿಸಿ, ವಂದಿಸಿದರು.

