ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶ್ರಾವಣ ಮಾಸದ ಪ್ರಯುಕ್ತ ವಿಜಯಪುರದಿಂದ ಶ್ರೀಶೈಲಕ್ಕೆ ಪ್ರಯಾಣಿಸುವ ಭಕ್ತಾಧಿಗಳಿಗೆ ವಿಶೇಷ ನಾನ್ ಎಸಿ ಸ್ಲೀಪರ್ ಬಸ್ ಸೌಲಭ್ಯ ಕಲ್ಪಿಸಲಾಗಿದೆ.
ವಿಜಯಪುರದಿಂದ ಶ್ರೀಶೈಲಕ್ಕೆ ವ್ಹಾಯಾ ಬಸವನಬಾಗೇವಾಡಿ, ತಾಳಿಕೋಟಿ, ರಾಯಚೂರು ಹಾಗೂ ಕರ್ನೂಲ್ ಮಾರ್ಗವಾಗಿ “ಅಮೋಘ ವರ್ಷ” ನಾನ್ ಎ.ಸಿ. ಸ್ರ‍್ಲೀಪರ್ ಬಸ್ ಸೇವೆ ಪ್ರಾರಂಭಿಸಲಾಗಿದೆ.
ಈ ಬಸ್ ಪ್ರತಿದಿನ ಸಂಜೆ ೬ ಕ್ಕೆ ವಿಜಯಪುರದಿಂದ ಹೊರಟು, ಬೆಳಿಗ್ಗೆ ೬ ಗಂಟೆಗೆ ಶ್ರೀಶೈಲ್ ತಲುಪಲಿದೆ. ಮಾರನೇ ದಿನ ಶ್ರೀಶೈಲದಿಂದ ಸಂಜೆ ೫.೩೦ ಗಂಟೆಗೆ ಬಿಟ್ಟು ಬೆಳಿಗ್ಗೆ ೫.೩೦ ಗಂಟೆಗೆ ವಿಜಯಪುರ ತಲುಪಲಿದೆ. ಇದೇ ಮಾದರಿಯಲ್ಲಿ ವಿಜಯಪುರದಿಂದ ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟಿ ಹಾಗೂ ಬಸವನಬಾಗೇವಾಡಿ ಬಸ್ ನಿಲ್ದಾಣಗಳಿಂದ ಪ್ರಯಾಣಿಕರ ಬೇಡಿಕೆ ಹಾಗೂ ಜನದಟ್ಟಣೆ ಅನುಗುಣವಾಗಿ ಶ್ರೀಶೈಲಕ್ಕೆ ಹೆಚ್ಚುವರಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಗಳನ್ನು ಕಾರ್ಯಾಚರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಅಲ್ಲದೇ, ಒಂದೇ ಗುಂಪಿನಲ್ಲಿ ಪ್ರಯಾಣಿಸಲು ಇಚ್ಛಿಸುವ ಭಕ್ತಾದಿಗಳಿಗಾಗಿ ಅವರ ವಾಸಸ್ಥಳದಿಂದಲೇ ಕರಾರು ಒಪ್ಪಂದದ ಆಧಾರದ ಮೇಲೆ ಬಸ್ ಗಳನ್ನು ಒದಗಿಸುವ ವ್ಯವಸ್ಥೆ ಸಹ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಮೀಪದ ಬಸ್ ಘಟಕ, ಬಸ್ ನಿಲ್ದಾಣಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಪ್ರಯಾಣಿಕರು ಆನ್‌ಲೈನ್: hಣಣಠಿs://ಚಿತಿಚಿಣಚಿಡಿ೪.ಞsಡಿಣಛಿ.iಟಿ/ಟಿಕೆಟ್‌ಗಳನ್ನು ಕಾಯ್ದಿರಿಸಿಕೊಳ್ಳಬಹುದಾಗಿದೆ. ಅಲ್ಲದೇ, ವಿಜಯಪುರದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮ ಕೇಂದ್ರ ಬಸ್ ನಿಲ್ದಾಣ ಸಿಂದಗಿ ಮತ್ತು ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿರುವ ಮುಂಗಡ ಟಿಕೆಟ್ ಕಾಯ್ದಿರಿಸುವ ಕೌಂಟರ್ ಗೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ. ಸಂರ್ಪಕಿಸಬಹುದಾದ ದೂರವಾಣಿ ಸಂಖ್ಯೆ:೭೭೬೦೯೯೨೨೭೦ / ೭೭೬೦೯೯೨೨೦೮ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ವಿಭಾಗೀಯ ಕಚೇರಿ ಪ್ರಕಟಣೆ ತಿಳಿಸಿದೆ.
