ಕೊಲ್ಹಾರ ಕೃಷ್ಣಾ ನದಿಯ ಸೇತುವೆ ದುರಂತ | ಸೇತುವೆ ಮೇಲಿಂದ ಬುಧವಾರ ಬಿದ್ದಿದ್ದ ಟಿಪ್ಪರ್ ವಾಹನ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಕೃಷ್ಣಾ ನದಿಯ ಕೊರ್ತಿ–ಕೊಲ್ಹಾರ ಸೇತುವೆ ಮೇಲಿಂದ ಬುಧವಾರ ಬಿದ್ದಿದ್ದ ಟಿಪ್ಪರ್ ವಾಹನವನ್ನು ಶುಕ್ರವಾರ ಮಧ್ಯಾಹ್ನ ಬ್ರಹತ್ ಕ್ರೇನ್ ಸಹಾಯದಿಂದ ಮೇಲಕ್ಕೆ ತೆಗೆದರು.
ಕೊಲ್ಹಾರ ಹಾಗೂ ಬೀಳಗಿ ಪೊಲೀಸ್ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಹಕಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸೋಲಾಪೂರದಿಂದ ತರಿಸಿದ ಭಾರೀ ಕ್ರೇನ್ ಮೂಲಕ ಕಾರ್ಯಾಚರಣೆ ನಡೆಸಲಾಯಿತು.
ಕ್ರೇನ್ ಚಾಲಕರ ಚಾಣಾಕ್ಷತನದಿಂದ ನದಿಯಲ್ಲಿ ಮುಳುಗಿದ್ದ ಟಿಪ್ಪರ್ ಅನ್ನು ಯಶಸ್ವಿಯಾಗಿ ಮೇಲಕ್ಕೆ ಎತ್ತಲಾಯಿತು. ಟಿಪ್ಪರ್ ವಾಹನ ಸಂಪೂರ್ಣವಾಗಿ ತುಂಡು-ತುಂಡಾಗಿರುವುದು ಕಂಡುಬಂದಿದೆ.
ದುರಂತದಲ್ಲಿ ಮೃತಪಟ್ಟ ಚಾಲಕ ಸಂತೋಷ ಕೋಟಿ ಅವರ ಶವವನ್ನು ಕೂಡ ಹೊರತೆಗೆದಿದ್ದು, ದೇಹ ಸಂಪೂರ್ಣ ಚಪ್ಪಟೆಯಾಗಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

