ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದಾಳಿಂಬೆ, ಲಿಂಬೆ ಹಾಗೂ ದ್ರಾಕ್ಷಿ ಬೆಳೆಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಅಧಿಸೂಚಿಸಲಾಗಿದೆ.
ಬೆಳೆಸಾಲ ಪಡೆದ ರೈತರು ಹಾಗೂ ಬೆಳೆ ಸಾಲ ಪಡೆಯದೆ ಇರುವ ರೈತರು ತಮ್ಮ ಆಧಾರ್ ಕಾರ್ಡ್ ಝರಾಕ್ಸ್, ಪಹಣಿ ಪತ್ರಿಕೆ ಹಾಗೂ ಬ್ಯಾಂಕ್ ಪಾಸ್‌ಬುಕ್ ಪ್ರತಿಯೊಂದಿಗೆ ಹತ್ತಿರದ ಬ್ಯಾಂಕ್‌ಗಳಲ್ಲಿ ಅಥವಾ ಗ್ರಾಮ ಒನ್ ಕೇಂದ್ರ, ಸಿಎಸ್‌ಸಿ ಸೆಂಟರ್‌ಗಳಲ್ಲಿ ವಿಮಾ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದಾಗಿದೆ.
ದ್ರಾಕ್ಷಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಸೆಪ್ಟೆಂಬರ್ ೧೫ ಕೊನೆಯ ದಿನವಾಗಿರುತ್ತದೆ. ರೈತರು ಪ್ರತಿ ಹೆಕ್ಟೆರಿಗೆ ಪಾವತಿಸಬೇಕಾದ ವಿಮಾ ಕಂತಿನ ಮೊತ್ತ ೧೪,೦೦೦ ರೂ.ಗಳಾಗಿದೆ. ದಾಳಿಂಬೆ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಜೂನ್ ೩೦ ಕೊನೆಯ ದಿನವಾಗಿದ್ದು, ರೈತರು ೬,೩೫೦ರೂ.ಗಳನ್ನು ವಿಮಾ ಕಂತು ತುಂಬಬೇಕು. ಲಿಂಬೆ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಜೂನ್ ೩೦ ಕೊನೆಯ ದಿನವಾಗಿದ್ದು, ವಿಮಾ ಕಂತಿನ ಮೊತ್ತ ೨,೮೦೦ರೂ.ಗಳನ್ನು ಪಾವತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ತೋಟಗಾರಿಕೆ ಇಲಾಖೆ, ರೈತ ಸಂಪರ್ಕ ಕೇಂದ್ರ, ಹತ್ತಿರದ ಬ್ಯಾಂಕ್ ಶಾಖೆಯನ್ನು ಅಗ್ರಿಕಲ್ಚರ್ ಇನ್ಸುರೆನ್ಸ ಕಂಪನಿಯ ವಿಮಾ ಸಂಸ್ಥೆಯ ಪ್ರತಿನಿಧಿ ಮೊ: ೮೩೧೦೯೩೯೭೫೩ ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ವಿಜಯಪುರ (ಮೊ:೯೮೮೦೩೬೯೨೨೨),ಇಂಡಿ (ಮೊ:೭೨೦೪೯೨೮೨೪೦), ಸಿಂದಗಿ (ಮೊ: ೮೭೨೨೦೮೭೬೨೯), ಬಸವನ ಬಾಗೇವಾಡಿ (ಮೊ: ೮೧೯೭೪೬೪೬೭೫) ಹಾಗೂ ಮುದ್ದೇಬಿಹಾಳ (ಮೊ:೮೧೨೩೬೮೬೯೦೩) ಸಂರ್ಪಕಿಸಬಹುದು ಎಂದು ವಿಜಯಪುರ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಸಿದ್ರಾಮಯ್ಯ ಬರಗೀಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
