Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕಾಲುವೆ ಸ್ವಚ್ಛಗೊಳಿಸಿ ನೀರು ಹರಿಸಲು ಆಗ್ರಹ :ಹೋರಾಟದ ಎಚ್ಚರಿಕೆ

ಇಂಡಿಯಲ್ಲಿ ಎಬಿವಿಪಿ ಕಾರ್ಯಕರ್ತರಿಂದ ತಿರಂಗಾ ಯಾತ್ರೆ

ವಾಸ್ತವಿಕ ಮಳೆ ಪ್ರಮಾಣದ ಬಗ್ಗೆ ತಪ್ಪು ವರದಿ :ರೈತರಿಗೆ ಅನ್ಯಾಯ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಜಮೀನುಗಳಿಗೆ ಜಂಟಿ ಕೃಷಿ ನಿರ್ದೇಶಕ, ಸಹಾಯಕ ನಿರ್ದೇಶಕರು ಭೇಟಿ
(ರಾಜ್ಯ ) ಜಿಲ್ಲೆ

ಜಮೀನುಗಳಿಗೆ ಜಂಟಿ ಕೃಷಿ ನಿರ್ದೇಶಕ, ಸಹಾಯಕ ನಿರ್ದೇಶಕರು ಭೇಟಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಮುಸುಕಿನ ಜೋಳ ಬೆಳೆ ಪರಿಶೀಲನೆ, ದ್ವಿದಳ ಧಾನ್ಯ ಬೆಳೆ ಪರಿವರ್ತನೆಗೆ ಸಲಹೆ

ಉದಯರಶ್ಮಿ ದಿನಪತ್ರಿಕೆ

ಎಚ್.ಡಿ.ಕೋಟೆ: ತಾಲೂಕಿನಾದ್ಯಂತ ಮುಸುಕಿನ ಜೋಳಕ್ಕೆ ಬೂಜುರೋಗ ಅಥವಾ ಬಿಳಿ ಸುಳಿರೋಗ ಕಾಣಿಸಿಕೊಂಡಿದ್ದು ರೈತರು ಆತಂಕಕ್ಕಿಡಾಗಿದ್ದರೆ. ಈ ಹಿನ್ನೆಲೆ ಶುಕ್ರವಾರ ಜಂಟಿ ಕೃಷಿ ನಿರ್ದೇಶಕ ಡಾ. ಕೆ.ಹೆಚ್ ರವಿ, ಸಹಾಯಕ ಕೃಷಿ ನಿರ್ದೇಶಕ ಪ್ರಸಾದ್ ಅವರು ಹಂಪಾಪುರ ಹೋಬಳಿಯ ನಾಯಕನಹುಂಡಿ, ಕರಿಗಾಳ, ಕೋಳಗಾಲ, ಮಾದಾಪುರ, ಹ್ಯಾಂಡ್ ಪೋಸ್ಟ್ ಯರಹಳ್ಳಿ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿ ರೋಗದ ತಾಕುಗಳನ್ನು ಪರಿಶೀಲನೆ ನಡೆಸಿದರು. ರೋಗ ಬರಲು ಕಾರಣವೇನು? ರೋಗ ನಿಯಂತ್ರಣಕ್ಕೆ ರೈತರು ಏನೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು? ಮುಸುಕಿನ ಜೋಳ ಬಿತ್ತನೆಗೂ ಮುನ್ನ ಏನು ಮಾಡಬೇಕು, ತದನಂತರ ಯಾವ ಔಷಧಿ ಸಿಂಪಡಿಸಬೇಕು, ಮಣ್ಣಿನ ಫಲವತ್ತತೆಗೆ ಬೇರೆ ಯಾವ ಬೆಳೆಗಳನ್ನು ಬೆಳೆಯಬೇಕು ಎಂಬುದರ ಕುರಿತು ರೈತರಿಗೆ ಮಾಹಿತಿ ಮತ್ತು ಸಲಹೆ ನೀಡಿದರು.
ಜಂಟಿ ಕೃಷಿ ನಿರ್ದೇಶಕರಾದ ಡಾ.ಕೆ ಹೆಚ್ ರವಿ ಮಾತನಾಡಿ, ವರ್ಷಕ್ಕೆ ಎರಡು-ಮೂರು ಬಾರಿ ಮುಸುಕಿನ ಜೋಳವನ್ನು ನಿರಂತರವಾಗಿ ಬೆಳೆಯುವುದರಿಂದ ರೋಗ ಉಲ್ಬಣಗೊಳ್ಳುತ್ತಿದೆ. ಮುಸುಕಿನ ಜೋಳದ ಬದಲಾಗಿ ರಾಗಿ, ಸೋಯಾ ಅವರೆ, ಅಲಸಂದೆ ಮತ್ತು ತೊಗರಿ ಬೆಳೆಗಳೊಂದಿಗೆ ಬೆಳೆ ಪರಿವರ್ತನೆ ಮಾಡಬೇಕು. ಮೇವಿನ ಉದ್ದೇಶಕ್ಕಾಗಿ (ಸೈಲೇಜ್) ಒಂದೇ ತಾಕಿನಲ್ಲಿ ವರ್ಷಕ್ಕೆ ಎರಡು-ಮೂರು ಬಾರಿ ಯಾವುದೇ ಬೀಜೋಪಚಾರ ಮಾಡದೆ ಹಾಗೂ ಪೊಟಾಶ್ ಮತ್ತು ಜಿಂಕ್ ಸಲ್ಪೇಟ್ ಗೊಬ್ಬರ ಬಳಸದೇ ಸಾರಜನಕ ಹೆಚ್ಚಿರುವ ಗೊಬ್ಬರಗಳನ್ನು ಬಳಕೆ ಮಾಡಿರುವುದರಿಂದ ಈ ರೋಗವು ಉಲ್ಬಣವಾಗಿದೆ. ಹಾಗಾಗಿ ಕೃಷಿ ವಿಜ್ಞಾನಿಗಳು ಶಿಫಾರಸ್ಸು ಮಾಡಿರುವ ಔಷಧವನ್ನು ಸಿಂಪಡಿಸುವುದರ ಜೊತೆಗೆ ಬೆಳೆ ಪರಿವರ್ತನೆ ಮಾಡಬೇಕೆಂದು ಸಲಹೆ ನೀಡಿದರು.
ಈ ವೇಳೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಪ್ರಸಾದ್, ಅಧಿಕಾರಿಗಳಾದ ಸಿದ್ದಪ್ಪಸ್ವಾಮಿ, ಪ್ರವೀಣ್, ಆತ್ಮ ಯೋಜನೆ ಸಿಬ್ಬಂದಿಗಳಾದ ರಕ್ಷಿತಾ, ವಿನಯ್ ಸೇರಿದಂತೆ ರೈತರು ಉಪಸ್ಥಿತರಿದ್ದರು.

ರೈತರು ಅನುಸರಿಸಬೇಕಾದ ಕ್ರಮಗಳು

  • ಆಳವಾಗಿ ಎರಡು ಬಾರಿ ಬೇಸಿಗೆ ಉಳುಮೆ ಮಾಡಬೇಕು
  • ಮುಸುಕಿನ ಜೋಳ ಬೆಳೆ ಬದಲು ರಾಗಿ, ಅಲಸಂದೆ, ತೊಗರಿ ಸೇರಿದಂತೆ ದ್ವಿದಳ ಧಾನ್ಯ ಬೆಳೆಯಬೇಕು
  • ಮಳೆ ನೀರನ್ನು ಹೊಲದಲ್ಲಿಯೇ ಇಂಗಿಸಲು ಬದುಗಳನ್ನು ತೆಗೆದು ಸ್ವಚ್ಚವಾಗಿಡಬೇಕು
  • ಪೊಟಾಶ್ ಇರುವ ರಸಗೊಬ್ಬರಗಳನ್ನು ಅತೀ ಹೆಚ್ಚಾಗಿ ಬಳಸಬೇಕು
  • ಎಕರೆಗೆ 6 -8 ಕೆಜಿ ಜಿಂಕ್ ಸಲ್ಪೇಟ್ ಗೊಬ್ಬರವನ್ನು ಕಡ್ಡಾಯವಾಗಿ ಬಳಸಬೇಕು
  • 10 ರಿಂದ 20 ದಿವಸದೊಳಗೆ ದಿವಸದೊಳಗೆ ಎರಡು ಔಷಧಿ ಸಿಂಪಡಿಸಬೇಕು
  • ಭೂಮಿಗೆ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಬೆಳೆ ಗೊಬ್ಬರಗಳ ಬಳಕೆ ಮಾಡಬೇಕು
  • ರಸಗೊಬ್ಬರಗಳ ಬಳಕೆ ಜೊತೆಗೆ ಬದುಗಳ ಮೇಲೆ ಕಳೆ ನಿರ್ವಹಣೆ ಮಾಡಬೇಕು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕಾಲುವೆ ಸ್ವಚ್ಛಗೊಳಿಸಿ ನೀರು ಹರಿಸಲು ಆಗ್ರಹ :ಹೋರಾಟದ ಎಚ್ಚರಿಕೆ

ಇಂಡಿಯಲ್ಲಿ ಎಬಿವಿಪಿ ಕಾರ್ಯಕರ್ತರಿಂದ ತಿರಂಗಾ ಯಾತ್ರೆ

ವಾಸ್ತವಿಕ ಮಳೆ ಪ್ರಮಾಣದ ಬಗ್ಗೆ ತಪ್ಪು ವರದಿ :ರೈತರಿಗೆ ಅನ್ಯಾಯ

ಉ.ಕದಲ್ಲಿ ಮಕ್ಕಳ ಆರೋಗ್ಯಕ್ಕೆ ಬಡತನದ ಸಂಕಟ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕಾಲುವೆ ಸ್ವಚ್ಛಗೊಳಿಸಿ ನೀರು ಹರಿಸಲು ಆಗ್ರಹ :ಹೋರಾಟದ ಎಚ್ಚರಿಕೆ
    In (ರಾಜ್ಯ ) ಜಿಲ್ಲೆ
  • ಇಂಡಿಯಲ್ಲಿ ಎಬಿವಿಪಿ ಕಾರ್ಯಕರ್ತರಿಂದ ತಿರಂಗಾ ಯಾತ್ರೆ
    In (ರಾಜ್ಯ ) ಜಿಲ್ಲೆ
  • ವಾಸ್ತವಿಕ ಮಳೆ ಪ್ರಮಾಣದ ಬಗ್ಗೆ ತಪ್ಪು ವರದಿ :ರೈತರಿಗೆ ಅನ್ಯಾಯ
    In (ರಾಜ್ಯ ) ಜಿಲ್ಲೆ
  • ಉ.ಕದಲ್ಲಿ ಮಕ್ಕಳ ಆರೋಗ್ಯಕ್ಕೆ ಬಡತನದ ಸಂಕಟ
    In (ರಾಜ್ಯ ) ಜಿಲ್ಲೆ
  • ಸಾಂಸ್ಕೃತಿಕ & ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯ ಪಾಲ್ಗೊಳ್ಳುವಿಕೆ ಅವಶ್ಯ
    In (ರಾಜ್ಯ ) ಜಿಲ್ಲೆ
  • ತಾಳಿಕೋಟೆಯಲ್ಲಿ ತಂಪೆರೆದ ಆಶ್ಲೇಶ ಮಳೆ
    In (ರಾಜ್ಯ ) ಜಿಲ್ಲೆ
  • ಬಿ.ಎಂ. ಮಠೋಳಿ ಗೆ ‘ಶಿಕ್ಷಕ ಸೇವಾ ರತ್ನ’ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಮೋರಟಗಿ ಗ್ರಾಪಂ ಕಸದ ವಾಹನಕ್ಕೆ ಹಿಡಿದ ಗ್ರಹಣ!
    In (ರಾಜ್ಯ ) ಜಿಲ್ಲೆ
  • ಅಗಲಿದ ಪತ್ರಕರ್ತ ಬಾಬು ಮುರಾಳರಿಗೆ ಕಾನಿಪದಿಂದ ಶ್ರದ್ಧಾಂಜಲಿ
    In (ರಾಜ್ಯ ) ಜಿಲ್ಲೆ
  • ತಾಳಿಕೋಟೆಯಲ್ಲಿ ಆ.10ರಂದು ಬೃಹತ್ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.